ಕಾಂಗ್ರೆಸ್ ಸಭೆಯಲ್ಲಿ ಗದ್ದಲ; ಪ್ರಧಾನ ಕಾರ್ಯದರ್ಶಿ ಉಚ್ಚಾಟನೆ
ಚಿಕ್ಕಬಳ್ಳಾಪುರ: ಎಐಸಿಸಿ ವೀಕ್ಷಕಿ ದೀಪ್ತಿ ಮೇರಿ ವರ್ಗೀಸ್ ನೇತೃತ್ವದಲ್ಲಿ ಚಿಕ್ಕಬಳ್ಳಾಪುರದಲ್ಲಿ ನಡೆದ ಕಾಂಗ್ರೆಸ್ ಸಭೆಯಲ್ಲಿ ಗೊಂದಲ ಮತ್ತು ಗಲಾಟೆ ಎಬ್ಬಿಸಿದ ಆರೋಪದ ಮೇಲೆ ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಮುದಾಸೀರ್ ದಾವೂದ್ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ.ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ‘ಲಾಯರ್’ ನಾರಾಯಣಸ್ವಾಮಿ ಮತ್ತು ಯುವ ಕ
ಚಿಕ್ಕಬಳ್ಳಾಪುರ: ಎಐಸಿಸಿ ವೀಕ್ಷಕಿ ದೀಪ್ತಿ ಮೇರಿ ವರ್ಗೀಸ್ ನೇತೃತ್ವದಲ್ಲಿ ಚಿಕ್ಕಬಳ್ಳಾಪುರದಲ್ಲಿ ನಡೆದ ಕಾಂಗ್ರೆಸ್ ಸಭೆಯಲ್ಲಿ ಗೊಂದಲ ಮತ್ತು ಗಲಾಟೆ ಎಬ್ಬಿಸಿದ ಆರೋಪದ ಮೇಲೆ ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಮುದಾಸೀರ್ ದಾವೂದ್ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ.ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ‘ಲಾಯರ್’ ನಾರಾಯಣಸ್ವಾಮಿ ಮತ್ತು ಯುವ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಕುಬೇರ್ ಅಚ್ಚು ಅವರಿಗೆ ನೋಟಿಸ್ ಜಾರಿಗೊಳಿಸಲಾಗಿದೆ.‘ಅನವಶ್ಯಕವಾಗಿ ಸಂಬಂಧಪಡದ ವಿಷಯಗಳನ್ನು ಸಭೆಯಲ್ಲಿ ಪ್ರಸ್ತಾಪಿಸಿ ಗಲಾಟೆ ಮತ್ತು ಗೊಂದಲ ಸೃಷ್ಟಿಸಿದ್ದೀರಿ. ಈ ಬಗ್ಗೆ ದೂರುಗಳು ಬಂದಿವೆ. ಇದು ಪಕ್ಷ ವಿರೋಧಿ ಚಟುವಟಿಕೆ. ಕೆಪಿಸಿಸಿ ಅಧ್ಯಕ್ಷರ ಸೂಚನೆ ಮೇರೆಗೆ ಪಕ್ಷದಿಂದ ಆರು ವರ್ಷ ಉಚ್ಚಾಟಿಸಲಾಗಿದೆ’ ಎಂದು ಕೆಪಿಸಿಸಿ ಉಪಾಧ್ಯಕ್ಷ ಎಂ.ನಾರಾಯಣಸ್ವಾಮಿ ಪತ್ರದ ಮೂಲಕ ಮುದಾಸೀರ್ ದಾವೂದ್ ಅವರಿಗೆ ತಿಳಿಸಿದ್ದಾರೆ.‘ಏಳು ದಿನಗಳ ಒಳಗೆ ಸಮಜಾಯಿಷಿ ನೀಡಬೇಕು. ತಪ್ಪಿದಲ್ಲಿ ಶಿಸ್ತು ಕ್ರಮಕೈಗೊಳ್ಳಲಾಗುವುದು’ ಎಂದು ನಾರಾಯಣಸ್ವಾಮಿ ಮತ್ತು ಕುಬೇರ್ ಅಚ್ಚು ಅವರಿಗೆ ನೀಡಿರುವ ನೋಟಿಸ್ನಲ್ಲಿ ತಿಳಿಸಿದ್ದಾರೆ.