ಸ್ಕ್ವಾಷ್: ಕ್ವಾರ್ಟರ್ಗೆ ಅನಾಹತ್
ಟೊರೆಂಟೊ: ಭಾರತದ ಅನಾಹತ್ ಸಿಂಗ್ ಅವರು ಇಂಗ್ಲೆಂಡ್ನ ಸರನ್ ನ್ಘೀಮ್ ಅವರನ್ನು ನಾಲ್ಕು ಗೇಮ್ಗಳ ಹೋರಾಟದಲ್ಲಿ ಮಣಿಸಿ, ಕೆನಡಿಯನ್ ಮಹಿಳಾ ಓಪನ್ ಸ್ಕ್ವಾಷ್ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು.ವಿಶ್ವ ಜೂನಿಯರ್ ಹಾಲಿ ಚಾಂಪಿಯನ್, ವಿಶ್ವದ 15ನೇ ಕ್ರಮಾಂಕದ ಅನಾಹತ್ ಮಹಿಳಾ ಸಿಂಗಲ್ಸ್ನ ಎರಡನೇ ಸುತ್ತಿನ ಪಂದ್ಯದಲ್ಲಿ 11-6, 4-11, 11-5, 11-7ರ

ಟೊರೆಂಟೊ: ಭಾರತದ ಅನಾಹತ್ ಸಿಂಗ್ ಅವರು ಇಂಗ್ಲೆಂಡ್ನ ಸರನ್ ನ್ಘೀಮ್ ಅವರನ್ನು ನಾಲ್ಕು ಗೇಮ್ಗಳ ಹೋರಾಟದಲ್ಲಿ ಮಣಿಸಿ, ಕೆನಡಿಯನ್ ಮಹಿಳಾ ಓಪನ್ ಸ್ಕ್ವಾಷ್ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು.ವಿಶ್ವ ಜೂನಿಯರ್ ಹಾಲಿ ಚಾಂಪಿಯನ್, ವಿಶ್ವದ 15ನೇ ಕ್ರಮಾಂಕದ ಅನಾಹತ್ ಮಹಿಳಾ ಸಿಂಗಲ್ಸ್ನ ಎರಡನೇ ಸುತ್ತಿನ ಪಂದ್ಯದಲ್ಲಿ 11-6, 4-11, 11-5, 11-7ರಿಂದ 52ನೇ ಕ್ರಮಾಂಕದ ಸರಣ್ ಅವರನ್ನು ಹಿಮ್ಮೆಟ್ಟಿಸಿದರು. 18 ವರ್ಷದ ಅನಾಹತ್ ಮೊದಲ ಸುತ್ತಿನಲ್ಲಿ ಬೈ ಪಡೆದಿದ್ದರು. ಕಳೆದ ವಾರ ಸಿಲಿಕಾನ್ ವ್ಯಾಲಿ ಓಪನ್ ಟೂರ್ನಿಯಲ್ಲಿ ಸೆಮಿಫೈನಲ್ ತಲುಪಿದ್ದ ಅನಾಹತ್, ಮುಂದಿನ ಸುತ್ತಿನಲ್ಲಿ ಅಗ್ರ ಶ್ರೇಯಾಂಕದ ಫೈರೋಜ್ ಅಬೋಲ್ಖೈರ್ (ಈಜಿಪ್ಟ್) ಅವರನ್ನು ಎದುರಿಸಲಿದ್ದಾರೆ.ಪುರುಷರ ಸಿಂಗಲ್ಸ್ ಎರಡನೇ ಸುತ್ತಿನಲ್ಲಿ ಭಾರತದ ವೀರ್ ಚೋತ್ರಾಣಿ 7-11, 7-11, 6-11ರಿಂದ ವಿಶ್ವದ 10 ನೇ ಕ್ರಮಾಂಕದ ಮೊಹಮ್ಮದ್ ಇಲ್ ಶೋರ್ಬಾಗಿ (ಇಂಗ್ಲೆಂಡ್) ಅವರಿಗೆ ಸೋತರು.
Read the complete story at Prajavani