ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆ: ಬಿಜೆಪಿ ಅಭ್ಯರ್ಥಿ ಎಸ್.ವಿ.ಸಂಕನೂರ ಮುನ್ನಡೆ
ಧಾರವಾಡ: ವಿಧಾನ ಪರಿಷತ್ತಿನ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆ ಮತ ಎಣಿಕೆ ಪ್ರಕ್ರಿಯೆ ಮಂಗಳವಾರ ಆರಂಭವಾಗಿದ್ದು, ಮೊದಲ ಸುತ್ತಿನಲ್ಲಿ ಸುತ್ತಿನ ಮತ ಎಣಿಕೆ ಮುಗಿದಾಗ ಬಿಜೆಪಿ ಅಭ್ಯರ್ಥಿ ಎಸ್.ವಿ.ಸಂಕನೂರ 2065 ಮತಗಳ ಮುನ್ನಡೆ ಸಾಧಿಸಿದ್ದಾರೆ.ಮೊದಲ ಸುತ್ತಿನಲ್ಲಿ ಎಸ್.ವಿ.ಸಂಕನೂರ ಅವರು 6459 , ಕಾಂಗ್ರೆಸ್ನ ಮೋಹನ ಲಿಂಬಿಕಾಯಿ 4,394, ಕಾಂತಕುಮಾರ್ ಆರ್ 710, ಜಿ
ಧಾರವಾಡ: ವಿಧಾನ ಪರಿಷತ್ತಿನ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆ ಮತ ಎಣಿಕೆ ಪ್ರಕ್ರಿಯೆ ಮಂಗಳವಾರ ಆರಂಭವಾಗಿದ್ದು, ಮೊದಲ ಸುತ್ತಿನಲ್ಲಿ ಸುತ್ತಿನ ಮತ ಎಣಿಕೆ ಮುಗಿದಾಗ ಬಿಜೆಪಿ ಅಭ್ಯರ್ಥಿ ಎಸ್.ವಿ.ಸಂಕನೂರ 2065 ಮತಗಳ ಮುನ್ನಡೆ ಸಾಧಿಸಿದ್ದಾರೆ.ಮೊದಲ ಸುತ್ತಿನಲ್ಲಿ ಎಸ್.ವಿ.ಸಂಕನೂರ ಅವರು 6459 , ಕಾಂಗ್ರೆಸ್ನ ಮೋಹನ ಲಿಂಬಿಕಾಯಿ 4,394, ಕಾಂತಕುಮಾರ್ ಆರ್ 710, ಜಿ.ಎಚ್.ಇಮ್ರಾಪುರ 94, ಉಮೇಶ ದೈವಜ್ಞ 64, ಕೃಷ್ಣ ಬಳೆಗಾರ 46, ನಿಶಾಂತ ಬಂಕಾಪುರ 26, ಸಂತೋಷ ವರ್ಣೇಕರ 18 , ಜಿಶಾನ್ ಪಠಾಣ್ 15, ಅಬ್ದುಲ್ ಮನ್ನಾನ್, 15, ಮಲ್ಲಿಕಾರ್ಜುನ ಗಂಗಾಧರ 11, ಶಿವಕುಮಾರ ತಳವಾರ 7, ಜಿಶಾನ್ ಸಿರಸಂಗಿ 5 ಹಾಗೂ ಬಸವರಾಜ ಕೊಟಗಿ 4 ಮತಗಳನ್ನು ಪಡೆದಿದ್ಧಾರೆ. 14 ಟೇಬಲ್ಗಳಲ್ಲಿ ಮತ ಎಣಿಕೆ ಪ್ರಕ್ರಿಯೆ ನಡೆಯುತ್ತಿದೆ. ಮತ ಎಣಿಕೆ ಪ್ರಕ್ರಿಯೆ ಬೆಳಿಗ್ಗೆ 8 ಗಂಟೆಗೆ ಆರಂಭವಾಯಿತು. ಬಂಡ್ಲಿಂಗ್ ಪ್ರಕ್ರಿಯೆ ಮಧ್ಯಾಹ್ನ 1.20 ರ ಹೊತ್ತಿಗೆ ಬಂಡ್ಲಿಂಗ್ ಕಾರ್ಯ ಮುಗಿಯಿತು. ಮಧ್ಯಾಹ್ನ 1.40ಕ್ಕೆ ಮೊದಲ ಸುತ್ತಿನ ಎಣಿಕೆ ಆರಂಭವಾಗಿ, ಸಂಜೆ 5 ಗಂಟೆಗೆ ಮುಗಿಯಿತು. 2,133 ಮತ ಅಸಿಂಧು: ಮೊದಲ ಸುತ್ತಿನಲ್ಲಿ 14,001 ಮತಗಳ ಎಣಿಕೆ ಆಗಿದ್ದು, ಈ ಪೈಕಿ 2,133 ಮತಗಳು ಅಸಿಂಧುವಾಗಿವೆ. 11,868 ಮತಗಳು ಸಿಂಧುವಾಗಿವೆ. ‘ಮತಪತ್ರದಲ್ಲಿ ಹಲವಾರು ‘ಸ್ವಸ್ತಿಕ್’, ‘ಓಂ’ ಮೊದಲಾದ ಗುರುತುಗಳನ್ನು ಹಾಕಿದ್ದಾರೆ. ಕೆಲವರು ಖಾಲಿ ಬಿಟ್ಟಿದ್ಧಾರೆ. ಇಂಥ ಮತಗಳು ತಿರಸ್ಕೃತವಾಗಿವೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು. ಒಟ್ಟು 14 ಅಭ್ಯರ್ಥಿಗಳು ಕಣದಲ್ಲಿ ಇದ್ದಾರೆ. ಎರಡನೇ ಸುತ್ತಿನ ಮತ ಎಣಿಕೆ 5 ಗಂಟೆಗೆ ಆರಂಭವಾಗಿದೆ.