NZ vs IND: ಅಭಿಷೇಕ್ ಅಬ್ಬರ; ಕಿವೀಸ್ ವಿರುದ್ಧ ಗೆದ್ದು ಸರಣಿ ವಶಪಡಿಸಿಕೊಂಡ ಭಾರತ
ವೆಲಿಂಗ್ಟನ್: ಅಭಿಷೇಕ್ ಶರ್ಮಾ ಬೀಸಾಟದ ಆರ್ಭಟದ ಮುಂದೆ ಆತಿಥೇಯ ನ್ಯೂಜಿಲೆಂಡ್ ಬೌಲರ್ಗಳು ಕೈಕೈ ಹಿಸುಕಿಕೊಂಡರು. ಅಭಿಷೇಕ್ ಗಳಿಸಿದ ಶರವೇಗದ ಶತಕವು ದಾಖಲೆ ಪುಸ್ತಕ ಸೇರಿದರೆ, ಭಾರತ ತಂಡವು ಕಿವೀಸ್ ನೆಲದಲ್ಲಿ ಟಿ20 ಸರಣಿಯನ್ನು 3–0ಯಿಂದ ಕೈವಶ ಮಾಡಿಕೊಂಡಿತು.ಇದರೊಂದಿಗೆ ಭಾರತವು ನ್ಯೂಜಿಲೆಂಡ್ನಲ್ಲಿ ಟಿ20 ಸರಣಿಯ ‘ಹ್ಯಾಟ್ರಿಕ್’ ಜಯದ ಸಾಧನೆ ದಾಖಲಿಸಿತು. 20

ವೆಲಿಂಗ್ಟನ್: ಅಭಿಷೇಕ್ ಶರ್ಮಾ ಬೀಸಾಟದ ಆರ್ಭಟದ ಮುಂದೆ ಆತಿಥೇಯ ನ್ಯೂಜಿಲೆಂಡ್ ಬೌಲರ್ಗಳು ಕೈಕೈ ಹಿಸುಕಿಕೊಂಡರು. ಅಭಿಷೇಕ್ ಗಳಿಸಿದ ಶರವೇಗದ ಶತಕವು ದಾಖಲೆ ಪುಸ್ತಕ ಸೇರಿದರೆ, ಭಾರತ ತಂಡವು ಕಿವೀಸ್ ನೆಲದಲ್ಲಿ ಟಿ20 ಸರಣಿಯನ್ನು 3–0ಯಿಂದ ಕೈವಶ ಮಾಡಿಕೊಂಡಿತು.ಇದರೊಂದಿಗೆ ಭಾರತವು ನ್ಯೂಜಿಲೆಂಡ್ನಲ್ಲಿ ಟಿ20 ಸರಣಿಯ ‘ಹ್ಯಾಟ್ರಿಕ್’ ಜಯದ ಸಾಧನೆ ದಾಖಲಿಸಿತು. 2020ರಲ್ಲಿ 5–0 ಮತ್ತು 2022ರಲ್ಲಿ 1–0ಯಿಂದ ಭಾರತವು ಸರಣಿ ಜಯಿಸಿತ್ತು. ಅಭಿಷೇಕ್ 38 ಎಸೆತಗಳಲ್ಲಿ 113 ರನ್ ಗಳಿಸಿದರು. ಈ ಹಾದಿಯಲ್ಲಿ ಅವರು ಕೇವಲ 15 ಎಸೆತಗಳಲ್ಲಿ 50 ರನ್ ಹೊಡೆದರು. ಭಾರತ ತಂಡವು 199 ರನ್ ಗೆಲುವಿನ ಗುರಿಯನ್ನು ಕೇವಲ 13.2 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು ಸಾಧಿಸಿತು.ಅಭಿಷೇಕ್ ತಾವೆದುರಿಸಿದ 35ನೇ ಎಸೆತದಲ್ಲಿ 100ರ ಗಡಿ ಮುಟ್ಟಿದರು. 99 ರನ್ ಗಳಿಸಿದ್ದ ಅವರು ಕವರ್ಸ್ ಏರಿಯಾ ಮೂಲಕ ಚೆಂಡನ್ನು ಬೌಂಡರಿ ದಾಟಿಸಿದರು. ತಮ್ಮ ನಾಲ್ಕನೇ ಶತಕ ದಾಖಲಿಸಿದರು. ಹೆಲ್ಮೆಟ್, ಕೈಗವಸು ತೆಗೆದಿಟ್ಟು, ನೆಲದ ಮೇಲೆ ಧ್ಯಾನ ಮಾಡುವ ಭಂಗಿಯಲ್ಲಿ ಕೆಲಕ್ಷಣ ಕುಳಿತು ‘ಓಂ ನಮಃ ಶಿವಾಯ’ ಎಂದು ಭಜಿಸಿ ಸಂಭ್ರಮ. ಅವರು ಒಟ್ಟು 9 ಬೌಂಡರಿ ಮತ್ತು 11 ಸಿಕ್ಸರ್ ಸಿಡಿಸಿದರು. ಅವರ ಸಿಡಿಲಬ್ಬರದ ಬ್ಯಾಟಿಂಗ್ ನೋಡಿದ ಎದುರಾಳಿಗಳು ಮತ್ತು ಪ್ರೇಕ್ಷಕರು ನಿಬ್ಬೆರಗಾಗಿ ಹೋದರು. ಪಂಜಾಬಿನ 26 ವರ್ಷದ ಎಡಗೈ ಬ್ಯಾಟರ್ಗೆ ಇದು 70ನೇ ಟಿ20 ಪಂದ್ಯ.ಅಭಿಷೇಕ್ ಅವರೊಂದಿಗೆ ಇನಿಂಗ್ಸ್ ಆರಂಭಿಸಿದ ವೈಭವ್ ಸೂರ್ಯವಂಶಿ ಕೂಡ ತಮ್ಮ ಭುಜಬಲ ಮೆರೆದರು. ಇವರಿಬ್ಬರ ಜೊತೆಯಾಟವು ‘ಸಿಡಿಮದ್ದು ಪ್ರದರ್ಶನ’ದಂತಿತ್ತು. ಇಬ್ಬರೂ ಸಿಕ್ಸರ್, ಬೌಂಡರಿಗಳನ್ನು ಸಿಡಿಸಿದರು. ಅದರಿಂದಾಗಿ ಕೇವಲ ಏಳು ಓವರ್ಗಳಲ್ಲಿ 133 ರನ್ಗಳು ತಂಡದ ಖಾತೆ ಸೇರಿದವು. ಈ ಜೊತೆಯಾಟದಲ್ಲಿ ವೈಭವ್ ನಾಲ್ಕು ಮತ್ತು ಅಭಿಷೇಕ್ ಎಂಟು ಸಿಕ್ಸರ್ ಹೊಡೆದರು. ಮ್ಯಾಥ್ಯೂ ಫಿಷರ್ ಬೌಲಿಂಗ್ನಲ್ಲಿ ವೈಭವ್ ಔಟಾಗುವುದ ರೊಂದಿಗೆ ಜೊತೆಯಾಟಕ್ಕೆ ತೆರೆಬಿತ್ತು.ಆದರೆ, ಅಭಿಷೇಕ್ ಅಬ್ಬರ ಮುಂದುವರಿಯಿತು. ಅವರು ಸಂಜು ಸ್ಯಾಮ್ಸನ್ ಅವರೊಂದಿಗೆ ಎರಡನೇ ವಿಕೆಟ್ ಜೊತೆಯಾಟದಲ್ಲಿ 45 (17ಎಸೆತ) ರನ್ ಸೇರಿಸಿದರು. ಹತ್ತನೇ ಓವರ್ ಹಾಕಿದ ಕೈಲ್ ಜೇಮಿಸನ್ ಎಸೆತವನ್ನು ಆಡುವ ಭರದಲ್ಲಿ ಅಭಿಷೇಕ್ ಅವರು ಗ್ಲೆನ್ ಫಿಲಿಪ್ಸ್ಗೆ ಕ್ಯಾಚ್ ಕೊಟ್ಟರು. ಅವರ ಇನಿಂಗ್ಸ್ಗೆ ತೆರೆಬಿತ್ತು.ಮಿಚೆಲ್ ಆರ್ಭಟ: ಟಾಸ್ ಗೆದ್ದ ಭಾರತವು ಫೀಲ್ಡಿಂಗ್ ಆಯ್ಕೆ ಮಾಡಿ ಕೊಂಡಿತು. ಡ್ಯಾರಿಲ್ ಮಿಚೆಲ್ (ಅಜೇಯ 89; 52ಎ, 4x5, 6x5) ಅವರ ಅರ್ಧಶತಕದ ಬಲದಿಂದ 20 ಓವರ್ಗಳಲ್ಲಿ 3 ವಿಕೆಟ್ಗಳಿಗೆ 198 ರನ್ ಗಳಿಸಿದ್ದರು. ಫಿನ್ ಅಲೆನ್ (40; 25ಎ) ಮತ್ತು ಬೆವನ್ ಜೇಕಬ್ಸ್ (ಅಜೇಯ 39) ಅವರೂ ಉತ್ತಮ ಕಾಣಿಕೆ ನೀಡಿದರು.ಸಂಕ್ಷಿಪ್ತ ಸ್ಕೋರು: ನ್ಯೂಜಿಲೆಂಡ್: 20 ಓವರ್ಗಳಲ್ಲಿ 3ಕ್ಕೆ198 (ಫಿನ್ ಅಲೆನ್ 40, ಡ್ಯಾರಿಲ್ ಮಿಚೆಲ್ ಔಟಾಗದೇ 89, ಗ್ಲೆನ್ ಫಿಲಿಪ್ಸ್ 17, ಬೆವನ್ ಜೇಕಬ್ಸ್ ಔಟಾಗದೇ 39, ಅರ್ಷದೀಪ್ ಸಿಂಗ್ 33ಕ್ಕೆ1, ಅಕ್ಷರ್ ಪಟೇಲ್ 36ಕ್ಕೆ1, ನಿತೀಶ್ ಕುಮಾರ್ ರೆಡ್ಡಿ 38ಕ್ಕೆ1) ಭಾರತ: 13.2 ಓವರ್ಗಳಲ್ಲಿ 4ಕ್ಕೆ199 (ವೈಭವ್ ಸೂರ್ಯವಂಶಿ 45,ಅಭಿಷೇಕ್ ಶರ್ಮಾ 113, ಸಂಜು ಸ್ಯಾಮ್ಸನ್ 18, ಕೈಲ್ ಜೇಮಿಸನ್ 45ಕ್ಕೆ2, ಮ್ಯಾಥ್ಯೂ ಫಿಷರ್ 23ಕ್ಕೆ1, ಮಿಚೆಲ್ ಸ್ಯಾಂಟನರ್ 17ಕ್ಕೆ1)ಫಲಿತಾಂಶ: ಭಾರತಕ್ಕೆ 6 ವಿಕೆಟ್ ಜಯ. ಸರಣಿಯಲ್ಲಿ 3–0 ಮುನ್ನಡೆ.ಪಂದ್ಯದ ಅಟಗಾರ: ಅಭಿಷೇಕ್ ಶರ್ಮಾ.