ಕೈವಾರ; ಶ್ರೀರಾಮಕೋಟಿ ಜಪಯಜ್ಞಕ್ಕೆ ಚಾಲನೆ
ಚಿಂತಾಮಣಿ: ಮಾನವ ಜನ್ಮಕ್ಕೆ ನಿರ್ದಿಷ್ಟ ಗುರಿಯಿದೆ. ಆ ಗುರಿ ಕಡೆಗೆ ಸಾಧನೆ ಇರಬೇಕು ಎಂದು ಕೈವಾರ ಕ್ಷೇತ್ರದ ಧರ್ಮಾಧಿಕಾರಿ ಎಂ.ಆರ್.ಜಯರಾಮ್ ತಿಳಿಸಿದರು.ತಾಲ್ಲೂಕಿನ ಕೈವಾರ ಗವಿ ಬಳಿಯ ಯೋಗಾನರಸಿಂಹಸ್ವಾಮಿ ವೈಕುಂಠ ಯಾಗಶಾಲೆಯಲ್ಲಿ ಕೈವಾರ ತಾತಯ್ಯ ಅವರ 300ನೇ ಜಯಂತಿ ಅಂಗವಾಗಿ ಆಯೋಜಿಸಿದ್ದ 14ನೇ ತಿಂಗಳ ಶ್ರೀರಾಮಭವತಾರಕ ಮಂತ್ರದ ಶ್ರೀರಾಮಕೋಟಿ ಜಪಯಜ್ಞ ಉದ್ಘಾಟಿಸಿ ಮಾತ

ಚಿಂತಾಮಣಿ: ಮಾನವ ಜನ್ಮಕ್ಕೆ ನಿರ್ದಿಷ್ಟ ಗುರಿಯಿದೆ. ಆ ಗುರಿ ಕಡೆಗೆ ಸಾಧನೆ ಇರಬೇಕು ಎಂದು ಕೈವಾರ ಕ್ಷೇತ್ರದ ಧರ್ಮಾಧಿಕಾರಿ ಎಂ.ಆರ್.ಜಯರಾಮ್ ತಿಳಿಸಿದರು.ತಾಲ್ಲೂಕಿನ ಕೈವಾರ ಗವಿ ಬಳಿಯ ಯೋಗಾನರಸಿಂಹಸ್ವಾಮಿ ವೈಕುಂಠ ಯಾಗಶಾಲೆಯಲ್ಲಿ ಕೈವಾರ ತಾತಯ್ಯ ಅವರ 300ನೇ ಜಯಂತಿ ಅಂಗವಾಗಿ ಆಯೋಜಿಸಿದ್ದ 14ನೇ ತಿಂಗಳ ಶ್ರೀರಾಮಭವತಾರಕ ಮಂತ್ರದ ಶ್ರೀರಾಮಕೋಟಿ ಜಪಯಜ್ಞ ಉದ್ಘಾಟಿಸಿ ಮಾತನಾಡಿದರು.ದೇಹಕ್ಕೆ ಆಹಾರ, ನೀರು ಹೇಗೆ ಮುಖ್ಯವೋ, ಹಾಗೆಯೇ ಮನಸ್ಸಿಗೆ ಭಕ್ತಿ ಬಹಳ ಮುಖ್ಯ. ಭಕ್ತಿತತ್ವದಲ್ಲಿ ಪರಮಾತ್ಮನಲ್ಲಿ ಸಮರ್ಪಣಾ ಭಾವವಿರಬೇಕು. ಭಕ್ತಿಯ ಮೂಲಕ ಜ್ಞಾನ ವೃದ್ಧಿ ಆಗುತ್ತದೆ. ಇಹ-ಪರ ಎರಡಕ್ಕೂ ಭಕ್ತಿ ಸೇತುವೆ. ಭಕ್ತಿಯನ್ನು ಗುರುಗಳ ತತ್ವಚಿಂತನೆಯ ಮೂಲಕ ರೂಢಿಸಿಕೊಳ್ಳಬೇಕು ಎಂದರು.ಕಾರ್ಯಕ್ರಮಕ್ಕೂ ಮೊದಲಿಗೆ ಘಂಟಾನಾದ, ಸುಪ್ರಭಾತ, ಗೋಪೂಜೆಯನ್ನು ಯೋಗಿನಾರೇಯಣ ಮಠದಲ್ಲಿ ನೆರವೇರಿಸಲಾಯಿತು. ನಂತರ ಯಾಗಶಾಲೆಯಲ್ಲಿರುವ ಗಣಪತಿ, ಮಹಾಲಕ್ಷ್ಮಿ, ಯೋಗಾನರಸಿಂಹಸ್ವಾಮಿ ಹಾಗೂ ಸದ್ಗುರು ಯೋಗಿನಾರೇಯಣ ತಾತಯ್ಯನವರ ವಿಗ್ರಹಗಳಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.ಶ್ರೀರಾಮಕೋಟಿ ನಡೆಯುವ ಸ್ಥಳದಲ್ಲಿ ವಿಶೇಷ ವೇದಿಕೆ ಹಾಕಲಾಗಿತ್ತು. ಆ ವೇದಿಕೆಯಲ್ಲಿ ಶ್ರೀಸೀತಾರಾಮರ ವಿಗ್ರಹಗಳನ್ನು, ಕೈವಾರ ತಾತಯ್ಯನವರ ಭಾವಚಿತ್ರಗಳನ್ನು ಹಾಗೂ ಮಧ್ಯದಲ್ಲಿ ದೀಪಸ್ತಂಭ ಇಡಲಾಗಿತ್ತು. ಧರ್ಮಾಧಿಕಾರಿ ದಂಪತಿ ದೀಪವನ್ನು ಬೆಳಗುವ ಮೂಲಕ ರಾಮಕೋಟಿ ಜಪಯಜ್ಞಕ್ಕೆ ಚಾಲನೆ ನೀಡಿದರು.ಯೋಗಿನಾರೇಯಣ ಮಠದ ಉಪಾಧ್ಯಕ್ಷ ಜೆ.ವಿಭಾಕರರೆಡ್ಡಿ, ಖಜಾಂಚಿ ಆರ್.ಪಿ.ಎಂ.ಸತ್ಯನಾರಾಯಣ್, ಯೋಗಿನಾರೇಯಣ ಸಂಕೀರ್ತನಾ ಯೋಜನೆ ಸಂಚಾಲಕ ವಿದ್ವಾನ್ ವಾನರಾಶಿ ಬಾಲಕೃಷ್ಣ ಭಾಗವತರ್ ಸದಸ್ಯರಾದ ಕೆ.ನರಸಿಂಹಪ್ಪ ಹಾಗೂ ಭಕ್ತರು ಭಾಗವಹಿಸಿದ್ದರು.261027-16-748540306