ಕೊಪ್ಪಳ | ಬಸ್ ಡಿಪೊದಲ್ಲಿ ಮತ್ತೆ ಡಿಸೇಲ್ ಖಾಲಿ?: ಬಿಜೆಪಿ ಆಕ್ರೋಶ
ಕೊಪ್ಪಳ: ಹಲವು ದಿನಗಳ ಅಂತರದಲ್ಲಿ ಮತ್ತೊಮ್ಮೆ ಇಲ್ಲಿನ ಬಸ್ ಡಿಪೊದಲ್ಲಿ ಡಿಸೇಲ್ ಖಾಲಿಯಾಗಿರುವ ಆರೋಪ ಕೇಳಿ ಬಂದಿದ್ದು ಸಾರಿಗೆ ಸಿಬ್ಬಂದಿ ಪರದಾಡಿದರು.ವಿಷಯ ತಿಳಿದು ಬಿಜೆಪಿ ಮುಖಂಡರು ಮಂಗಳವಾರ ರಾತ್ರಿ ಡಿಪೊಕ್ಕೆ ತೆರಳಿ ಪರಿಸ್ಥಿತಿ ಪರಿಶೀಲಿಸಿದರು.ಈ ಕುರಿತ ಬಿಜೆಪಿ ಮುಖಂಡ ಡಾ. ಬಸವರಾಜ ಕ್ಯಾವಟರ್ ಫೇಸ್ಬುಕ್ ಪುಟದಲ್ಲಿ ಬರೆದುಕೊಂಡಿದ್ದು, ಗ್ಯಾರಂಟಿಗಳ ಹೆಸರಿನ

ಕೊಪ್ಪಳ: ಹಲವು ದಿನಗಳ ಅಂತರದಲ್ಲಿ ಮತ್ತೊಮ್ಮೆ ಇಲ್ಲಿನ ಬಸ್ ಡಿಪೊದಲ್ಲಿ ಡಿಸೇಲ್ ಖಾಲಿಯಾಗಿರುವ ಆರೋಪ ಕೇಳಿ ಬಂದಿದ್ದು ಸಾರಿಗೆ ಸಿಬ್ಬಂದಿ ಪರದಾಡಿದರು.ವಿಷಯ ತಿಳಿದು ಬಿಜೆಪಿ ಮುಖಂಡರು ಮಂಗಳವಾರ ರಾತ್ರಿ ಡಿಪೊಕ್ಕೆ ತೆರಳಿ ಪರಿಸ್ಥಿತಿ ಪರಿಶೀಲಿಸಿದರು.ಈ ಕುರಿತ ಬಿಜೆಪಿ ಮುಖಂಡ ಡಾ. ಬಸವರಾಜ ಕ್ಯಾವಟರ್ ಫೇಸ್ಬುಕ್ ಪುಟದಲ್ಲಿ ಬರೆದುಕೊಂಡಿದ್ದು, ಗ್ಯಾರಂಟಿಗಳ ಹೆಸರಿನಲ್ಲಿ ರಾಜ್ಯದ ಖಜಾನೆ ಖಾಲಿ ಮಾಡಿದ ಕಾಂಗ್ರೆಸ್ ಸರ್ಕಾರ, ಈಗ ಸರ್ಕಾರಿ ಬಸ್ಗಳಿಗೆ ಡೀಸೆಲ್ ಒದಗಿಸಲೂ ವಿಫಲವಾಗಿದೆಯೇ? ಇದು ಕರ್ನಾಟಕದ ಜನತೆಗೆ ಮಾಡುತ್ತಿರುವ ದ್ರೋಹವಲ್ಲವೇ? ಎಂದು ಪ್ರಶ್ನಿಸಿದ್ದಾರೆ.ಕೊಪ್ಪಳದ ಬಸ್ ಘಟಕದಲ್ಲಿ ಡೀಸೆಲ್ ಖಾಲಿಯಾಗಿ ಬಸ್ಗಳ ಸಂಚಾರವೇ ಸ್ಥಗಿತಗೊಂಡಿವೆ.ಸಾಮಾನ್ಯ ಜನರ ಜೀವನಾಡಿಯಾಗಿರುವ ಸಾರ್ವಜನಿಕ ಸಾರಿಗೆ ವ್ಯವಸ್ಥೆಯೇ ಹದಗೆಟ್ಟರೆ ಬಡವರು, ವಿದ್ಯಾರ್ಥಿಗಳು, ಕಾರ್ಮಿಕರು ಮತ್ತು ನೌಕರರ ಗತಿಯೇನು?ಗ್ಯಾರಂಟಿಗಳ ಹೆಸರಿನಲ್ಲಿ ಆಡಳಿತ ನಡೆಸುವುದೇ ಸಾಧನೆಯಲ್ಲ, ಜನರಿಗೆ ಅಗತ್ಯವಿರುವ ಮೂಲಸೌಕರ್ಯಗಳನ್ನು ಸಮರ್ಪಕವಾಗಿ ನಿರ್ವಹಿಸುವುದೂ ಸರ್ಕಾರದ ಜವಾಬ್ದಾರಿ ಎಂದು ಹೇಳಿದ್ದಾರೆ.ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ, ಬಿಜೆಪಿ ಜಿಲ್ಲಾ ಅಧ್ಯಕ್ಷ ನವೀನ್ ಗುಳಗಣ್ಣನವರ, ಮುಖಂಡರಾದ ಸುನಿಲ್ ಹೆಸರೂರ, ಗಣೇಶ ಹೊರತಟ್ನಾಳ ಇತರರು ಇದ್ದರು.