ಹಾಸನಾಂಬೆ ದರ್ಶನೋತ್ಸವ: ಭಕ್ತರಿಗೆ KSRTC ಕಡೆಯಿಂದ ‘ವಿಶೇಷ ಪ್ಯಾಕೇಜ್ ಟೂರ್’ ಆರಂಭ
ಹಾಸನಾಂಬೆ ದೇವಿಯ ದರ್ಶನೋತ್ಸವವು ರಾಜ್ಯದ ಪ್ರಮುಖ ಧಾರ್ಮಿಕ ಉತ್ಸವಗಳಲ್ಲಿ ಒಂದಾಗಿದ್ದು, ವರ್ಷಕ್ಕೊಮ್ಮೆ ಮಾತ್ರ ಭಕ್ತರಿಗೆ ಹಾಸನಾಂಬೆ ದೇವಿಯ ದರ್ಶನ ಪಡೆಯುವ ಅವಕಾಶವಿರುತ್ತದೆ. ಹೀಗಾಗಿ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಿಂದ ಲಕ್ಷಾಂತರ ಭಕ್ತರು ಹಾಸನಕ್ಕೆ ಆಗಮಿಸುತ್ತಾರೆ.ಅಕ್ಟೋಬರ್ 29ರಿಂದ ನವೆಂಬರ್ 11ರವರೆಗೆ ನಡೆಯಲಿರುವ ಈ ಬಾರಿಯ ದರ್ಶನೋತ್ಸವಕ್ಕೆ ಹೆಚ್ಚಿನ ಸ

ಹಾಸನಾಂಬೆ ದೇವಿಯ ದರ್ಶನೋತ್ಸವವು ರಾಜ್ಯದ ಪ್ರಮುಖ ಧಾರ್ಮಿಕ ಉತ್ಸವಗಳಲ್ಲಿ ಒಂದಾಗಿದ್ದು, ವರ್ಷಕ್ಕೊಮ್ಮೆ ಮಾತ್ರ ಭಕ್ತರಿಗೆ ಹಾಸನಾಂಬೆ ದೇವಿಯ ದರ್ಶನ ಪಡೆಯುವ ಅವಕಾಶವಿರುತ್ತದೆ. ಹೀಗಾಗಿ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಿಂದ ಲಕ್ಷಾಂತರ ಭಕ್ತರು ಹಾಸನಕ್ಕೆ ಆಗಮಿಸುತ್ತಾರೆ.ಅಕ್ಟೋಬರ್ 29ರಿಂದ ನವೆಂಬರ್ 11ರವರೆಗೆ ನಡೆಯಲಿರುವ ಈ ಬಾರಿಯ ದರ್ಶನೋತ್ಸವಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬರುವ ನಿರೀಕ್ಷೆಯಿದೆ. ಈ ಹಿನ್ನೆಲೆಯಲ್ಲಿ ಸುಗಮ, ಸುರಕ್ಷಿತ ಹಾಗೂ ಶಿಸ್ತುಬದ್ಧ ದರ್ಶನಕ್ಕಾಗಿ ಜಿಲ್ಲಾಡಳಿತ ಅಗತ್ಯ ವ್ಯವಸ್ಥೆಗಳನ್ನು ಮಾಡಿಕೊಳ್ಳುತ್ತಿದೆ.ಹಾಸನಾಂಬೆ: ದಸರಾ ಮಾದರಿ ವಿದ್ಯುತ್ ದೀಪಾಲಂಕಾರಹಾಸನಾಂಬೆ: ಮಧ್ಯಾಹ್ನ12.30ರೊಳಗೆ ಗಣ್ಯರ ದರ್ಶನ#Karnataka #Hassan #hasanamba2026 hassanamba special package tour #KSRTC Karnataka State Road Transport Corporation pic.twitter.com/imR4z1yQDM— KSRTC (@KSRTC_Journeys) October 26, 2026 ಕೆಎಸ್ಆರ್ಟಿಸಿಯಿಂದ ವಿಶೇಷ ಬಸ್ ಸೇವೆ...ಹಾಸನಾಂಬೆ ದರ್ಶನಕ್ಕೆ ತೆರಳುವ ಭಕ್ತರ ಅನುಕೂಲಕ್ಕಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು (KSRTC) ‘ಶ್ರೀ ಹಾಸನಾಂಬ ಪ್ಯಾಕೇಜ್ ಟೂರ್’ ಯೋಜನೆಯನ್ನು ಪರಿಚಯಿಸಿದೆ. ‘ಭಕ್ತಿಯ ಹೆಜ್ಜೆಗಳಿಗೆ ಕೆಎಸ್ಆರ್ಟಿಸಿ ಜೊತೆಯಾಗಲಿದೆ’ ಎಂಬ ಶೀರ್ಷಿಕೆಯಡಿ ವಿಶೇಷ ಅಶ್ವಮೇಧ ಬಸ್ಗಳ ಪ್ರವಾಸ ಸೌಲಭ್ಯ ಕಲ್ಪಿಸಲಾಗಿದೆ. ಅಕ್ಟೋಬರ್ 30ರಿಂದ ಈ ಸೇವೆಯು ಆರಂಭವಾಗಲಿದ್ದು, ಭಕ್ತರು ಸಾರಿಗೆ ಬಸ್ಗಳ ಮೂಲಕ ದೇವಿ ದರ್ಶನ ಪಡೆದು ಸುಲಭವಾಗಿ ಹಿಂತಿರುಗಬಹುದಾಗಿದೆ.ಈ ಕುರಿತು ಕೆಎಸ್ಆರ್ಟಿಸಿ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ. ಬೆಂಗಳೂರು ಮತ್ತು ಮೈಸೂರಿನಿಂದ ಈ ವಿಶೇಷ ಪ್ಯಾಕೇಜ್ ಆರಂಭವಾಗಲಿದ್ದು, ಹಾಸನಾಂಬ ದೇವಿಯ ಶೀಘ್ರ ದರ್ಶನ ಟಿಕೆಟ್ ದರ ₹1000 ಹಾಗೂ ಪ್ರಯಾಣ ದರ ₹1000 ಸೇರಿದಂತೆ ಒಟ್ಟು ಮೊತ್ತವನ್ನು ನಿಗದಿಪಡಿಸಲಾಗಿದೆ.ಪ್ರಯಾಣಿಕರು ತಮ್ಮ ಊಟೋಪಹಾರ ಹಾಗೂ ದೇವಾಲಯಗಳಲ್ಲಿನ ಇತರೆ ಪ್ರವೇಶ ಶುಲ್ಕಗಳನ್ನು ಪ್ರತ್ಯೇಕವಾಗಿ ಭರಿಸಬೇಕಾಗುತ್ತದೆ. ಮಕ್ಕಳಿಗೆ ರಿಯಾಯಿತಿ ದರ ನಿಗದಿಪಡಿಸಲಾಗಿದ್ದು, ಮುಂಗಡ ಟಿಕೆಟ್ ಬುಕಿಂಗ್ಗೆ ಕೆಎಸ್ಆರ್ಟಿಸಿ http://www.ksrtc.in ವೆಬ್ಸೈಟ್ ಅನ್ನು ಸಂಪರ್ಕಿಸಬಹುದು.