ಲೂಲಾ ಗೆಲುವಿಗೆ ‘ಡಿಜಿಟಲ್ ಸೇನೆ’ಯ ಬಲ: 1 ಕೋಟಿ ಸದಸ್ಯರ ವಾಟ್ಸ್ಆ್ಯಪ್ ಚಾನಲ್!
ಬ್ರೆಜಿಲ್ ಅಧ್ಯಕ್ಷೀಯ ಚುನಾವಣೆಯಲ್ಲಿ ಮೊದಲ ಸುತ್ತಿನಲ್ಲಿ ಹಿನ್ನಡೆ ಅನುಭವಿಸಿದ್ದ ಲೂಯಿಜ್ ಇನಾಸಿಯೊ ಲೂಲಾ ಡ ಸಿಲ್ವಾ, ಅಂತಿಮ ಸುತ್ತಿನಲ್ಲಿ ಅನಿರೀಕ್ಷಿತ ಗೆಲುವು ಸಾಧಿಸಿದರು. ಜಿದ್ದಾ ಜಿದ್ದಿನಿಂದ ಕೂಡಿದ್ದ ಪೈಪೋಟಿಯಲ್ಲಿ ಕೊನೆಗೆ ಲೂಲಾ ಗೆಲುವಿನ ನಗೆ ಬೀರಿದ್ದರು. ಅವರ ಈ ಗೆಲುವಿನ ಹಿಂದೆ ಮಹತ್ತರ ಪಾತ್ರ ವಹಿಸಿದ್ದು ವಾಟ್ಸ್ಆ್ಯಪ್! ಬ್ರೆಜಿಲ್ ಚುನಾವಣೆ: 4ನೇ
ಬ್ರೆಜಿಲ್ ಅಧ್ಯಕ್ಷೀಯ ಚುನಾವಣೆಯಲ್ಲಿ ಮೊದಲ ಸುತ್ತಿನಲ್ಲಿ ಹಿನ್ನಡೆ ಅನುಭವಿಸಿದ್ದ ಲೂಯಿಜ್ ಇನಾಸಿಯೊ ಲೂಲಾ ಡ ಸಿಲ್ವಾ, ಅಂತಿಮ ಸುತ್ತಿನಲ್ಲಿ ಅನಿರೀಕ್ಷಿತ ಗೆಲುವು ಸಾಧಿಸಿದರು. ಜಿದ್ದಾ ಜಿದ್ದಿನಿಂದ ಕೂಡಿದ್ದ ಪೈಪೋಟಿಯಲ್ಲಿ ಕೊನೆಗೆ ಲೂಲಾ ಗೆಲುವಿನ ನಗೆ ಬೀರಿದ್ದರು. ಅವರ ಈ ಗೆಲುವಿನ ಹಿಂದೆ ಮಹತ್ತರ ಪಾತ್ರ ವಹಿಸಿದ್ದು ವಾಟ್ಸ್ಆ್ಯಪ್! ಬ್ರೆಜಿಲ್ ಚುನಾವಣೆ: 4ನೇ ಬಾರಿಗೆ ಅಧ್ಯಕ್ಷರಾಗಿ ಲೂಲಾ ಡಾ ಸಿಲ್ವಾ ಆಯ್ಕೆ‘ಲೂಲಾ ಸೇನೆ’ ಎಂಬ ವಾಟ್ಸ್ಆ್ಯಪ್ ಚಾನಲ್ ಇಡೀ ಚುನಾವಣೆಯ ದಿಕ್ಕನ್ನೇ ಬದಲಾಯಿಸಿತು. ಲೂಲಾ ಪರ ಸಂದೇಶಗಳು, ಮೀಮ್ಸ್ ಮತ್ತು ಕಿರು ವಿಡಿಯೊಗಳನ್ನು ಹಂಚಿಕೊಳ್ಳುವ ಮೂಲಕ ಬೆಂಬಲಿಗರು ಆನ್ಲೈನ್ನಲ್ಲಿ ಪ್ರಚಾರ ನಡೆಸಿದರು. ವಿವಿಧ ರಾಜಕೀಯ ಅಭಿಪ್ರಾಯ ಹೊಂದಿದ್ದ ಮತದಾರರನ್ನು ಒಗ್ಗೂಡಿಸಿದ ಈ ಡಿಜಿಟಲ್ ಅಭಿಯಾನ, ಲೂಲಾ ಅವರ ರಾಜಕೀಯ ಪುನರಾಗಮನದಲ್ಲಿ ಮಹತ್ವದ ಪಾತ್ರ ವಹಿಸಿತು.ಬಲಪಂಥೀಯ ಎದುರಾಳಿ ಫ್ಲಾವಿಯೊ ಬೊಲ್ಸೊನಾರೊ ಅವರನ್ನು ಸೋಲಿಸಿದ ಲೂಲಾ, ಬ್ರೆಜಿಲ್ ಚುನಾವಣಾ ಇತಿಹಾಸದಲ್ಲಿ ಮೊದಲ ಸುತ್ತಿನಲ್ಲಿ ಎರಡನೇ ಸ್ಥಾನ ಪಡೆದು, ಬಳಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆದ್ದ ಮೊದಲ ಅಭ್ಯರ್ಥಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. 2022ರಲ್ಲಿ ಫ್ಲಾವಿಯೊ ಅವರ ತಂದೆ ಜೈರ್ ಬೊಲ್ಸೊನಾರೊ ಅವರನ್ನು ಅಲ್ಪ ಅಂತರದಿಂದ ಸೋಲಿಸಿದ್ದ ಲೂಲಾ, ಈ ಬಾರಿ ಅದಕ್ಕಿಂತ ಸುಮಾರು ಎರಡು ಪಟ್ಟು ಹೆಚ್ಚಿನ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ.ಮೊದಲ ಸುತ್ತಿನ ಮತದಾನಕ್ಕೆ ಹೋಲಿಸಿದರೆ, ಎರಡನೇ ಸುತ್ತಿನಲ್ಲಿ ಲೂಲಾ ಅವರಿಗೆ ಒಂದು ಕೋಟಿಗೂ ಹೆಚ್ಚು ಹೆಚ್ಚುವರಿ ಮತಗಳು ಲಭಿಸಿದವು. ಎರಡನೇ ಸುತ್ತಿನಲ್ಲಿ ಲಭ್ಯವಿದ್ದ ಹೊಸ ಮತಗಳ ಪೈಕಿ ಸುಮಾರು ನಾಲ್ಕರಲ್ಲಿ ಮೂರು ಮತಗಳು ಲೂಲಾ ಪಾಲಾದವು. ಫ್ಲಾವಿಯೊ ಬೊಲ್ಸೊನಾರೊ ಮೊದಲ ಸುತ್ತಿಗೆ ಹೋಲಿಸಿದರೆ ಸುಮಾರು 40 ಲಕ್ಷ ಹೆಚ್ಚುವರಿ ಮತಗಳನ್ನು ಪಡೆದರು.ಲೂಲಾ ಅವರ ಗೆಲುವು ಲ್ಯಾಟಿನ್ ಅಮೆರಿಕದಲ್ಲಿ ಪ್ರಬಲವಾಗುತ್ತಿರುವ ಬಲಪಂಥೀಯ ರಾಜಕೀಯಕ್ಕೆ ಹಿನ್ನಡೆಯಾಗಿ ಪರಿಣಮಿಸಿದೆ. ಈ ರಾಜಕೀಯ ಚಳವಳಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆಂಬಲ ವ್ಯಕ್ತಪಡಿಸಿದ್ದರು. ಟ್ರಂಪ್ ಅವರ ಪ್ರಭಾವಕ್ಕೆ ಸವಾಲೊಡ್ಡಿರುವ ಲ್ಯಾಟಿನ್ ಅಮೆರಿಕದ ಏಕೈಕ ನಾಯಕ ಎಂಬ ನೆಲೆಯಲ್ಲಿ ಲೂಲಾ ಅವರ ಗೆಲುವು ಗಮನ ಸೆಳೆದಿದೆ.5G ಅಲ್ಲ 5.5G ನೆಟ್ವರ್ಕ್ ಬಗ್ಗೆ ಗೊತ್ತಾ, ಫೋನ್ನಲ್ಲಿ ಹೀಗೆ ಸಕ್ರಿಯಗೊಳಿಸಿ...ವಾಟ್ಸ್ಆ್ಯಪ್ನಿಂದ ಆರಂಭವಾದ ಡಿಜಿಟಲ್ ಸೇನೆಮೊದಲ ಸುತ್ತಿನ ಮತದಾನದಲ್ಲಿ ಲೂಲಾ ಅವರು ಫ್ಲಾವಿಯೊ ಬೊಲ್ಸೊನಾರೊ ಅವರಿಗಿಂತ 22 ಲಕ್ಷ ಮತಗಳಷ್ಟು ಹಿಂದೆ ಉಳಿದಿದ್ದರು. ಅವರ ಗೆಲುವಿನ ಸಾಧ್ಯತೆ ಕ್ಷೀಣಿಸಿದೆ ಎಂಬ ವಿಶ್ಲೇಷಣೆಗಳು ಪ್ರಕಟವಾಗಿದ್ದವು. ಈ ಸಂದರ್ಭದಲ್ಲಿ ಎಡಪಂಥೀಯ ಸಂಸದ ಆಂದ್ರೆ ಜಾನೋನಿಸ್ ವಾಟ್ಸ್ಆ್ಯಪ್ ಮೂಲಕ ಬೆಂಬಲಿಗರನ್ನು ಒಗ್ಗೂಡಿಸುವ ಕಾರ್ಯ ಆರಂಭಿಸಿದರು.ಮೊದಲ ಸುತ್ತಿನ ಸೋಲಿನ ಮರುದಿನ ಬೆಳಿಗ್ಗೆ 6 ಗಂಟೆಗೆ, 53 ಸಾವಿರ ಅನುಯಾಯಿಗಳಿದ್ದ ತಮ್ಮ ವಾಟ್ಸ್ಆ್ಯಪ್ ಚಾನಲ್ಗೆ ‘ಲೂಲಾ ಸೇನೆ’ ಎಂದು ಮರುನಾಮಕರಣ ಮಾಡಿದ ಜಾನೋನಿಸ್, ಬೆಂಬಲಿಗರು ತಕ್ಷಣವೇ ಪ್ರಚಾರಕ್ಕೆ ಧುಮುಕುವಂತೆ ಕರೆ ನೀಡಿದರು.ಡಿಜಿಟಲ್ ಸೇನಾಪತಿಯಂತೆ ಕಾರ್ಯನಿರ್ವಹಿಸಿದ ಜಾನೋನಿಸ್, ಬೆಂಬಲಿಗರಿಗೆ ನಿರಂತರವಾಗಿ ಕಾರ್ಯಸೂಚಿಗಳನ್ನು ನೀಡುತ್ತಿದ್ದರು. ಲೂಲಾ ಪರ ಇರುವ ಪೋಸ್ಟ್ಗಳಿಗೆ ಪ್ರತಿಕ್ರಿಯಿಸುವುದು, ಅವುಗಳನ್ನು ಲೈಕ್ ಮಾಡುವುದು ಮತ್ತು ಹಂಚಿಕೊಳ್ಳುವ ಮೂಲಕ ಹೆಚ್ಚು ಜನರಿಗೆ ತಲುಪಿಸುವಂತೆ ಸೂಚಿಸುತ್ತಿದ್ದರು. ‘ವೈರಲ್ ಮಾಡಿ’ ಎಂಬುದು ಅವರ ಪ್ರಮುಖ ಕರೆಯಾಗಿತ್ತು. ಮುಂದಿನ ಐದು ದಿನಗಳಲ್ಲಿ ಚಾನಲ್ನ ಸದಸ್ಯರ ಸಂಖ್ಯೆ 34 ಲಕ್ಷಕ್ಕೆ ಏರಿತು. ಕ್ರಮೇಣ ಅದು ಒಂದು ಕೋಟಿ ಸದಸ್ಯರನ್ನು ತಲುಪಿತು.ವಾಟ್ಸ್ಆ್ಯಪ್ ಮಾತೃಸಂಸ್ಥೆ ಮೆಟಾ ತನ್ನ ವೇದಿಕೆಗಳಲ್ಲಿ ಬಲಪಂಥೀಯ ಪ್ರತಿಸ್ಪರ್ಧಿಗೆ ಹೆಚ್ಚು ಅನುಕೂಲ ಮಾಡಿಕೊಡುತ್ತಿದೆ ಎಂದು ಲೂಲಾ ಅವರ ಪ್ರಚಾರ ತಂಡ ಮತ್ತು ಸ್ವತಂತ್ರ ನಿಗಾ ಸಂಸ್ಥೆಗಳು ಆರೋಪಿಸಿದರು. ಬಳಿಕ ಅಭಿಯಾನ ಮತ್ತಷ್ಟು ಚುರುಕಾಯಿತು. ಅಲ್ಗಾರಿದಮ್ಗಳ ಪ್ರಭಾವವನ್ನು ಮೀರಿ ಹೆಚ್ಚಿನ ಜನರನ್ನು ತಲುಪಲು ಜಾನೋನಿಸ್ ಮತ್ತು ಬೆಂಬಲಿಗರು ಬ್ರೆಜಿಲ್ನ ಹಳದಿ ಬಣ್ಣದ ಫುಟ್ಬಾಲ್ ಜರ್ಸಿ ಧರಿಸಿ ವಿಡಿಯೊಗಳನ್ನು ಚಿತ್ರೀಕರಿಸಿದರು. ಬೊಲ್ಸೊನಾರೊ ಬೆಂಬಲಿಗರು ಬಳಸುತ್ತಿದ್ದ ಆನ್ಲೈನ್ ಪ್ರಚಾರ ತಂತ್ರಗಳನ್ನೂ ಅಳವಡಿಸಿಕೊಂಡರು.ವಾಟ್ಸ್ಆ್ಯಪ್ ಚಾನಲ್ನ ಅನುಯಾಯಿಗಳ ಸಂಖ್ಯೆ ಅಲ್ಪಾವಧಿಯಲ್ಲಿ ಭಾರಿ ಪ್ರಮಾಣದಲ್ಲಿ ಹೆಚ್ಚಾದದ್ದು ಕಂಡು ಬೊಲ್ಸೊನಾರೊ ಕೋರ್ಟ್ ಮೆಟ್ಟಿಲೇರಿದರು. ಈ ಬೆಳವಣಿಗೆಯ ಬಗ್ಗೆ ಪರಿಶೀಲಿಸುವಂತೆ ಚುನಾವಣಾ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಮೆಟಾಗೆ ಸೂಚಿಸಿದರು. ಆದರೆ, ಚಾನಲ್ನ ಬೆಳವಣಿಗೆಯಲ್ಲಿ ಯಾವುದೇ ಅಕ್ರಮ ನಡೆದಿಲ್ಲ ಎಂದು ಮೆಟಾ ತಿಳಿಸಿತು.ಮೊದಲ ಉದ್ಯೋಗಕ್ಕೆ ಎ.ಐ ಕನ್ನ? ಭಾರತದ ಯುವ ಜನರ ಕನಸಿಗೆ ಎದುರಾದ ಬಿಕ್ಕಟ್ಟು!ಪ್ರತಿಸ್ಪರ್ಧಿಯ ವಿರುದ್ಧ ಆನ್ಲೈನ್ ಪ್ರಚಾರಫ್ಲಾವಿಯೊ ಬೊಲ್ಸೊನಾರೊ ವಿರುದ್ಧದ ಭ್ರಷ್ಟಾಚಾರ ಆರೋಪ, ಅದರ ತನಿಖೆಯನ್ನು ಲೂಲಾ ಬೆಂಬಲಿಗರು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಪ್ರಚುರಪಡಿಸಿದರು. ರಿಯೊ ಡಿ ಜನೈರೊದ ಅಪರಾಧ ಜಗತ್ತಿನ ಕೆಲವು ವ್ಯಕ್ತಿಗಳೊಂದಿಗಿನ ಫ್ಲಾವಿಯೊ ಅವರ ಸಂಪರ್ಕದ ಬಗ್ಗೆಯೂ ಪ್ರಶ್ನೆಗಳನ್ನು ಎತ್ತಿದರು. ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ ಅವರ ತಂದೆ ಜೈರ್ ಬೊಲ್ಸೊನಾರೊ ಸರ್ಕಾರದ ನಿರ್ವಹಣೆಯನ್ನೂ ಟೀಕಿಸಿದರು.ಅರ್ಜೆಂಟೀನಾ ಅಧ್ಯಕ್ಷ ಜಾವಿಯರ್ ಮಿಲೇ ಅವರ ಮಿತವ್ಯಯ ನೀತಿಗಳಿಂದ ಪ್ರೇರಣೆ ಪಡೆದಿದ್ದ ಫ್ಲಾವಿಯೊ ಬೊಲ್ಸೊನಾರೊ, ಸರ್ಕಾರದ ವೆಚ್ಚ ಕಡಿತಗೊಳಿಸುವ ಯೋಜನೆಗಳನ್ನು ಮುಂದಿಟ್ಟಿದ್ದರು. ಆದರೆ, ಈ ಯೋಜನೆಗಳು ಸ್ಪಷ್ಟವಾಗಿಲ್ಲ ಮತ್ತು ಅವುಗಳಿಂದ ಅಪಾಯಗಳು ಎದುರಾಗಬಹುದು ಎಂದು ಲೂಲಾ ಬೆಂಬಲಿಗರು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ನಡೆಸಿದರು. ‘ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವಾಗ ಲೂಲಾ ಕೂಡ ಈ ವಾಟ್ಸ್ಆ್ಯಪ್ ಚಾನಲ್ಗೆ ಸೇರ್ಪಡೆಯಾದರು. ಅದಕ್ಕೂ ಕೆಲವೇ ದಿನಗಳ ಮೊದಲು ಅವರು ತಮ್ಮ ಮೊದಲ ಸ್ಮಾರ್ಟ್ಫೋನ್ ಖರೀದಿಸಿದ್ದರು. ತಂತ್ರಜ್ಞಾನ ಬಳಕೆಯಲ್ಲಿ ಹೆಚ್ಚು ಆಸಕ್ತಿ ಹೊಂದಿರದ ಲೂಲಾ ಕೂಡ ಕೊನೆಯ ಕ್ಷಣದಲ್ಲಿ ಡಿಜಿಟಲ್ ಪ್ರಚಾರದ ಮಹತ್ವವನ್ನು ಅರಿತುಕೊಂಡರು. ಮತದಾರರ ಒಗ್ಗೂಡುವಿಕೆಮೊದಲ ಸುತ್ತಿನಲ್ಲಿ ಸಣ್ಣ ಸಂಪ್ರದಾಯವಾದಿ ಅಭ್ಯರ್ಥಿಗಳಿಗೆ ಮತ ಹಾಕಿದ್ದ ಸುಮಾರು 90 ಲಕ್ಷ ಮತದಾರರ ಪೈಕಿ ಹಲವರು ಎರಡನೇ ಸುತ್ತಿನಲ್ಲಿ ಫ್ಲಾವಿಯೊ ಬೊಲ್ಸೊನಾರೊ ಬದಲಿಗೆ ಲೂಲಾ ಅವರನ್ನು ಬೆಂಬಲಿಸಿದರು ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಇದು ವಾಟ್ಸ್ಆ್ಯಪ್ ಚಾನಲ್ ಮಾಡಿದ ಚಮತ್ಕಾರ.ಮೊದಲ ಸುತ್ತಿಗೆ ಹೋಲಿಸಿದರೆ ಎರಡನೇ ಸುತ್ತಿನಲ್ಲಿ ಸುಮಾರು 30 ಲಕ್ಷ ಹೆಚ್ಚುವರಿ ಮತಗಳು ಚಲಾವಣೆಯಾದವು. ಸಾಮಾನ್ಯವಾಗಿ ಮೊದಲ ಸುತ್ತಿನ ಬಳಿಕ ಮತದಾನದಿಂದ ದೂರ ಉಳಿಯುವವರ ಸಂಖ್ಯೆ ಹೆಚ್ಚಾಗುವ ಬ್ರೆಜಿಲ್ನಲ್ಲಿ ಈ ಬಾರಿ ಮತದಾನಕ್ಕೆ ಗೈರಾದವರ ಪ್ರಮಾಣ ಕಡಿಮೆಯಾಯಿತು. ಅಧ್ಯಕ್ಷೀಯ ಚುನಾವಣೆಗಳ ಇತಿಹಾಸದಲ್ಲೇ ಅತಿ ಕಡಿಮೆ ಗೈರುಹಾಜರಾತಿ ದಾಖಲಾಗಿತ್ತು. ಇದಕ್ಕೂ ಕಾರಣ ವಾಟ್ಸ್ಆ್ಯಪ್ ಚಾನಲ್!ಬ್ರೆಜಿಲ್ನಲ್ಲಿ ಅಧ್ಯಕ್ಷೀಯ ಚುನಾವಣೆ ಹೇಗೆ ನಡೆಯುತ್ತದೆ?ಲೂಲಾ ಡ ಸಿಲ್ವಾ ಅವರ ಚುನಾವಣಾ ಗೆಲುವನ್ನು ಅರ್ಥ ಮಾಡಿಕೊಳ್ಳಲು ಮತದಾನ ವ್ಯವಸ್ಥೆ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯ.ಭಾರತದಲ್ಲಿ ಜನರು ಲೋಕಸಭಾ ಸದಸ್ಯರನ್ನು ಆಯ್ಕೆ ಮಾಡುತ್ತಾರೆ. ಬಹುಮತ ಹೊಂದಿರುವ ಪಕ್ಷ ಅಥವಾ ಮೈತ್ರಿಕೂಟದ ನಾಯಕ ಸಾಮಾನ್ಯವಾಗಿ ಪ್ರಧಾನಿಯಾಗುತ್ತಾರೆ. ಆದರೆ, ಬ್ರೆಜಿಲ್ನಲ್ಲಿ ಮತದಾರರು ಅಧ್ಯಕ್ಷರನ್ನು ನೇರವಾಗಿ ಆಯ್ಕೆ ಮಾಡುತ್ತಾರೆ.1.ಮೊದಲ ಸುತ್ತಿನ ಮತದಾನಬ್ರೆಜಿಲ್ನಲ್ಲಿ ಅಧ್ಯಕ್ಷೀಯ ಚುನಾವಣೆಯು ಎರಡು ಸುತ್ತುಗಳಲ್ಲಿ ನಡೆಯಬಹುದು.ಮತದಾರರು ತಮಗೆ ಇಷ್ಟವಾದ ಅಧ್ಯಕ್ಷೀಯ ಅಭ್ಯರ್ಥಿಗೆ ಮತ ಹಾಕುತ್ತಾರೆ.ಒಟ್ಟು ಮಾನ್ಯ ಮತಗಳಲ್ಲಿ ಶೇ 50ಕ್ಕಿಂತ ಹೆಚ್ಚು ಮತಗಳನ್ನು ಪಡೆದ ಅಭ್ಯರ್ಥಿ ಮೊದಲ ಸುತ್ತಿನಲ್ಲೇ ಗೆಲ್ಲುತ್ತಾರೆ.ಯಾವುದೇ ಅಭ್ಯರ್ಥಿಗೆ ಈ ಬಹುಮತ ಸಿಗದಿದ್ದರೆ, ಎರಡನೇ ಸುತ್ತಿನ ಮತದಾನ ನಡೆಯುತ್ತದೆ.2. ಎರಡನೇ ಸುತ್ತಿನ ಮತದಾನಮೊದಲ ಸುತ್ತಿನಲ್ಲಿ ಯಾವುದೇ ಅಭ್ಯರ್ಥಿಗೆ ಬಹುಮತ ಸಿಗದಿದ್ದರೆ, ಅತಿ ಹೆಚ್ಚು ಮತಗಳನ್ನು ಪಡೆದ ಇಬ್ಬರು ಅಭ್ಯರ್ಥಿಗಳು ಎರಡನೇ ಸುತ್ತಿಗೆ ಅರ್ಹತೆ ಪಡೆಯುತ್ತಾರೆ.ಎರಡನೇ ಸುತ್ತಿನಲ್ಲಿ ಈ ಇಬ್ಬರು ಅಭ್ಯರ್ಥಿಗಳ ನಡುವೆ ಮಾತ್ರ ಸ್ಪರ್ಧೆ ನಡೆಯುತ್ತದೆ.ಮತದಾರರು ಈ ಇಬ್ಬರಲ್ಲಿ ಒಬ್ಬರನ್ನು ಆಯ್ಕೆ ಮಾಡಬೇಕು.ಎರಡನೇ ಸುತ್ತಿನಲ್ಲಿ ಹೆಚ್ಚು ಮಾನ್ಯ ಮತಗಳನ್ನು ಪಡೆದ ಅಭ್ಯರ್ಥಿ ಅಧ್ಯಕ್ಷರಾಗಿ ಆಯ್ಕೆಯಾಗುತ್ತಾರೆ. ಆಳ-ಅಗಲ: ಯುದ್ಧ, ಸಂಘರ್ಷದ ನಡುವೆ ಇಸ್ರೇಲ್ ಚುನಾವಣೆ