ಸಮ ಸಮಾಜ ನಿರ್ಮಾಣ ನಮ್ಮ ಕರ್ತವ್ಯ: ಚರಂತಿಮಠ
ಬಾಗಲಕೋಟೆ: ಮಹರ್ಷಿ ವಾಲ್ಮೀಕಿಯವರ ಆಶಯದಂತೆ ಸಮಾನತೆ, ಸೌಹಾರ್ದತೆ ಮತ್ತು ಮಾನವೀಯತೆಯಿಂದ ಕೂಡಿದ ಸಮಾಜ ನಿರ್ಮಿಸುವ ಕರ್ತವ್ಯ ನಮ್ಮೆಲ್ಲರ ಮೇಲಿದೆ ಎಂದು ಮಾಜಿ ಶಾಸಕ ವೀರಣ್ಣ ಚರಂತಿಮಠ ಹೇಳಿದರು.ನಗರದ ಶಿವಾನಂದ ಜಿನ್ದಲ್ಲಿರುವ ಬಿಜೆಪಿ ಕಾರ್ಯಾಲಯದಲ್ಲಿ ಬಾಗಲಕೋಟೆ ಮತಕ್ಷೇತ್ರದ ವತಿಯಿಂದ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕ

ಬಾಗಲಕೋಟೆ: ಮಹರ್ಷಿ ವಾಲ್ಮೀಕಿಯವರ ಆಶಯದಂತೆ ಸಮಾನತೆ, ಸೌಹಾರ್ದತೆ ಮತ್ತು ಮಾನವೀಯತೆಯಿಂದ ಕೂಡಿದ ಸಮಾಜ ನಿರ್ಮಿಸುವ ಕರ್ತವ್ಯ ನಮ್ಮೆಲ್ಲರ ಮೇಲಿದೆ ಎಂದು ಮಾಜಿ ಶಾಸಕ ವೀರಣ್ಣ ಚರಂತಿಮಠ ಹೇಳಿದರು.ನಗರದ ಶಿವಾನಂದ ಜಿನ್ದಲ್ಲಿರುವ ಬಿಜೆಪಿ ಕಾರ್ಯಾಲಯದಲ್ಲಿ ಬಾಗಲಕೋಟೆ ಮತಕ್ಷೇತ್ರದ ವತಿಯಿಂದ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪ ಸಲ್ಲಿಸಿ ಮಾತನಾಡಿದ ಅವರು, ವಿಶ್ವಶ್ರೇಷ್ಠ ಮಹಾಕಾವ್ಯ, ಆದಿಕಾವ್ಯವಾದ ರಾಮಾಯಣವನ್ನು ಜಗತ್ತಿಗೆ ನೀಡಿದ ಕೀರ್ತಿ ಮಹರ್ಷಿ ವಾಲ್ಮೀಕಿಯವರದ್ದಾಗಿದೆ ಎಂದರು.ಸತ್ಯ, ಧರ್ಮ, ಕರ್ತವ್ಯನಿಷ್ಠೆ ಹಾಗೂ ಮೌಲ್ಯಗಳ ಮಹತ್ವ ಸಾರುವ ಶ್ರೀರಾಮನ ಕತೆ ಮೂಲಕ ಆದರ್ಶ ರಾಮರಾಜ್ಯದ ಪರಿಕಲ್ಪನೆಯನ್ನು ಜಗತ್ತಿಗೆ ಪರಿಚಯಿಸಿದ್ದಾರೆ. ಅವರ ತಪಸ್ವಿ ಜೀವನ, ಅಪಾರ ಜ್ಞಾನ, ಮಾನವೀಯ ಮೌಲ್ಯಗಳು ಹಾಗೂ ಸಾಮಾಜಿಕ ಸಮಾನತೆಯ ಸಂದೇಶಗಳು ಯುಗಯುಗಾಂತರಗಳಿಂದಲೂ ಮನುಕುಲಕ್ಕೆ ಸನ್ಮಾರ್ಗ ತೋರಿಸುತ್ತಿವೆ ಎಂದರು.ಎಸ್ಟಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜು ನಾಯ್ಕರ ಮಾತನಾಡಿ, ವಾಲ್ಮೀಕಿ ಜಯಂತಿ ಆಚರಿಸದೇ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ, ಜಿಲ್ಲಾ ಸಚಿವರ, ಶಾಸಕರ, ಜಿಲ್ಲಾಧಿಕಾರಿಗಳ ಸಭೆಯನ್ನು ಬೆಳಗಾವಿಯಲ್ಲಿ ಕರೆದಿದ್ದಾರೆ. ಇದು ವಾಲ್ಮೀಕಿಯವರಿಗೆ ಮಾಡಿದ ಅವಮಾನ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಬಸವರಾಜ ಯಂಕಂಚಿ, ಜಿ.ಎನ್. ಪಾಟೀಲ, ಯಲ್ಲಪ್ಪ ಕ್ಯಾದಿಗೇರ, ಯಲ್ಲಪ್ಪ ಬೆಂಡಿಗೇರಿ, ಸತ್ಯನಾರಾಯಣ ಹೇಮಾದ್ರಿ, ರಂಗಣ್ಣ ನಾಯ್ಕರ, ವೆಂಕಟೇಶ ನಾಯ್ಕರ, ಬಸವರಾಜ ಹುನಗುಂದ, ಶಿವಾನಂದ ಟವಳಿ, ಮಹಾದೇವ ನಾಯ್ಕರ, ಸುರೇಶ ಮಜ್ಜಗಿ ಇದ್ದರು.261027-19-304901845