ಸುದ್ದಿ ಪ್ರಕಟಣೆಗೆ ಮುನ್ನ ಅನುಮತಿ ಪಡೆಯಬೇಕಿಲ್ಲ: ಸುಪ್ರೀಂ ಕೋರ್ಟ್ಗೆ ಡಿಎನ್ಪಿಎ
ನವದೆಹಲಿ: ‘ಸುದ್ದಿ ಪ್ರಕಟಿಸುವ ಮೊದಲು ಆ ವಿಷಯಕ್ಕೆ ಸಂಬಂಧಿಸಿದವರಿಂದ ಅನುಮತಿ ಪಡೆಯುಂತಾದರೆ ಎಲ್ಲ ಪತ್ರಿಕಾಲಯಗಳನ್ನೂ ಮುಚ್ಚಬೇಕಾಗುತ್ತವೆ ಅಷ್ಟೆ’ ಎಂದು ಡಿಜಿಟಲ್ ನ್ಯೂಸ್ ಪಬ್ಲಿಷರ್ಸ್ ಅಸೋಸಿಯೇಷನ್ (ಡಿಎನ್ಪಿಎ) ಸುಪ್ರೀಂ ಕೋರ್ಟ್ನಲ್ಲಿ ಮಂಗಳವಾರ ವಾದಿಸಿತು.ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿಗಳಾದ ಜಾಯ್ಮಾಲ್ಯಾ ಬಾಗ್ಚಿ ಮತ್ತು ವಿ. ಮೋಹನಾ

ನವದೆಹಲಿ: ‘ಸುದ್ದಿ ಪ್ರಕಟಿಸುವ ಮೊದಲು ಆ ವಿಷಯಕ್ಕೆ ಸಂಬಂಧಿಸಿದವರಿಂದ ಅನುಮತಿ ಪಡೆಯುಂತಾದರೆ ಎಲ್ಲ ಪತ್ರಿಕಾಲಯಗಳನ್ನೂ ಮುಚ್ಚಬೇಕಾಗುತ್ತವೆ ಅಷ್ಟೆ’ ಎಂದು ಡಿಜಿಟಲ್ ನ್ಯೂಸ್ ಪಬ್ಲಿಷರ್ಸ್ ಅಸೋಸಿಯೇಷನ್ (ಡಿಎನ್ಪಿಎ) ಸುಪ್ರೀಂ ಕೋರ್ಟ್ನಲ್ಲಿ ಮಂಗಳವಾರ ವಾದಿಸಿತು.ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿಗಳಾದ ಜಾಯ್ಮಾಲ್ಯಾ ಬಾಗ್ಚಿ ಮತ್ತು ವಿ. ಮೋಹನಾ ಅವರ ಪೀಠ ಡಿಜಿಟಲ್ ವೈಯಕ್ತಿಕ ದತ್ತಾಂಶ ರಕ್ಷಣೆ ಕಾಯ್ದೆ (ಡಿಪಿಡಿಪಿ) ಕುರಿತು ಡಿಎನ್ಪಿಎ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿತು. ಈ ಸಂಬಂಧ ಕಾನೂನು ಸಚಿವಾಲಯ ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯಕ್ಕೆ ಸುಪ್ರೀಂ ಕೋರ್ಟ್ ನೋಟಿಸ್ ಜಾರಿ ಮಾಡಿತು.ಕಾಯ್ದೆಗೆ ತಡೆ ನೀಡಬೇಕು ಎಂದೂ ಅರ್ಜಿಯಲ್ಲಿ ಮನವಿ ಮಾಡಲಾಗಿತ್ತು. ಆದರೆ, ತಡೆ ನೀಡಲು ಪೀಠ ನಿರಾಕರಿಸಿತು. ಡಿಎನ್ಪಿಎನಲ್ಲಿ ಉದ್ಯಮಿಗಳಾದ ಅಂಬಾನಿ ಮತ್ತು ಅದಾನಿ ಅವರ ಮಾಧ್ಯಮ ಕಂಪನಿಗಳೂ ಸೇರಿ ದೇಶದ ಒಟ್ಟು 21 ಡಿಜಿಟಲ್ ಸುದ್ದಿ ಪ್ರಕಾಶಕರು ಇದ್ದಾರೆ. ನ.17ರಂದು ಮುಂದಿನ ವಿಚಾರಣೆ ನಡೆಯಲಿದೆ.261028-51-1148372181
Read the complete story at Prajavani