ವಿಜಯ ರಾಘವೇಂದ್ರ ನಟನೆಯ ‘ಆನ್ ಡ್ಯೂಟಿ‘ ಸಾಹಸ ದೃಶ್ಯಗಳ ಚಿತ್ರೀಕರಣ
ನಟ ವಿಜಯ ರಾಘವೇಂದ್ರ ಪ್ರಮುಖ ಪಾತ್ರದಲ್ಲಿರುವ ಸಸ್ಪೆನ್ಸ್–ಆ್ಯಕ್ಷನ್ ಸಿನಿಮಾ ‘ಆನ್ ಡ್ಯೂಟಿ’ಯ ಸಾಹಸ ಸನ್ನಿವೇಶಗಳ ಚಿತ್ರೀಕರಣ ಈಚೆಗೆ ನಡೆಯಿತು.ಮಾಕಿನೇನಿ ಸಾಯಿ ಕೃಷ್ಣರಾಜು ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಸಂಜೀವ್ ಮೆಗೋಟಿ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ.ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನದ ದೃಶ್ಯಗಳಲ್ಲಿ ವಿಜಯ ರಾಘವೇಂದ್ರ, ಕೃಷ್ಣಸಾಯಿ,

ನಟ ವಿಜಯ ರಾಘವೇಂದ್ರ ಪ್ರಮುಖ ಪಾತ್ರದಲ್ಲಿರುವ ಸಸ್ಪೆನ್ಸ್–ಆ್ಯಕ್ಷನ್ ಸಿನಿಮಾ ‘ಆನ್ ಡ್ಯೂಟಿ’ಯ ಸಾಹಸ ಸನ್ನಿವೇಶಗಳ ಚಿತ್ರೀಕರಣ ಈಚೆಗೆ ನಡೆಯಿತು.ಮಾಕಿನೇನಿ ಸಾಯಿ ಕೃಷ್ಣರಾಜು ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಸಂಜೀವ್ ಮೆಗೋಟಿ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ.ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನದ ದೃಶ್ಯಗಳಲ್ಲಿ ವಿಜಯ ರಾಘವೇಂದ್ರ, ಕೃಷ್ಣಸಾಯಿ, ಸ್ಮೃತಿ ವೆಂಕಟೇಶ್, ಭಾವನಾ ಚಂದ್ರ, ವಿನಯಾ ಪ್ರಸಾದ್ ಹಾಗೂ ಸಂಜೀವ್ ಮೆಗೋಟಿ ಅಭಿನಯಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕ ಸಂಜೀವ್ ಮೆಗೋಟಿ, ಈಗಾಗಲೇ ಶೇ 75ರಷ್ಟು ಚಿತ್ರೀಕರಣ ಪೂರ್ಣಗೊಂಡಿದ್ದು, ಸಾಹಸ ಸನ್ನಿವೇಶಗಳು ಮತ್ತು ಹಾಡುಗಳ ಚಿತ್ರೀಕರಣ ಮಾತ್ರ ಬಾಕಿ ಉಳಿದಿದೆ ಎಂದು ತಿಳಿಸಿದರು.ನಿರ್ಮಾಪಕ ಹಾಗೂ ನಟ ಕೃಷ್ಣಸಾಯಿ ಮಾತನಾಡಿ, ‘ಚಿತ್ರದಲ್ಲಿ ಸೂರ್ಯ–ಚಂದ್ರ ಎಂಬ ಎರಡು ಪಾತ್ರಗಳಲ್ಲಿ ನಾನು ಮತ್ತು ವಿಜಯ ರಾಘವೇಂದ್ರ ಕಾಣಿಸಿಕೊಳ್ಳುತ್ತಿದ್ದೇವೆ’ ಎಂದರು.‘ಕಥೆ ಇಷ್ಟವಾಯಿತು. ಚಿತ್ರದಲ್ಲಿ ನನ್ನ ಪಾತ್ರ ವಿಭಿನ್ನವಾಗಿದೆ. ಮುಖ್ಯವಾಗಿ, ‘ಗಣೇಶ ಮತ್ತೆ ಬಂದ’ ಚಿತ್ರದ ಬಳಿಕ ಇಪ್ಪತ್ತು ವರ್ಷಗಳ ನಂತರ ವಿನಯಾ ಪ್ರಸಾದ್ ಅವರೊಂದಿಗೆ ನಟಿಸುತ್ತಿರುವುದು ಖುಷಿ ನೀಡಿದೆ’ ಎಂದು ವಿಜಯ ರಾಘವೇಂದ್ರ ಹೇಳಿದರು.ಸಾಹಸ ನಿರ್ದೇಶನದ ಜೊತೆಗೆ ಥ್ರಿಲ್ಲರ್ ಮಂಜು ಕೂಡ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸ್ಮೃತಿ ವೆಂಕಟೇಶ್, ಬೇಬಿ ಅನ್ವಿಕಾ, ಭಾವನಾ ಚಂದ್ರ, ಧರ್ಮ, ಪ್ರೇಮಾ, ರವಿಕಿರಣ್ ಹಾಗೂ ಸಂಜೀವ್ ಮೆಗೋಟಿ ತಾರಾಗಣದಲ್ಲಿದ್ದಾರೆ.ಚಿತ್ರಕ್ಕೆ ಹರೀಶ್ ಅವರ ಛಾಯಾಚಿತ್ರಗ್ರಹಣ, ಆರೋಹಣ ಸುಧೀಂದ್ರ ಅವರ ಸಂಗೀತ ಮತ್ತು ರೇಣುಕಾ ಬಾಬು ಅವರ ಸಂಕಲನವಿದೆ.261028-51-515413992