ಪಶ್ಚಿಮ ಪದವೀಧರರ ಕ್ಷೇತ್ರ: ಬಿಜೆಪಿ ಅಭ್ಯರ್ಥಿ ಸಂಕನೂರಗೆ ‘ಹ್ಯಾಟ್ರಿಕ್’ ಗೆಲುವು
ಧಾರವಾಡ: ವಿಧಾನ ಪರಿಷತ್ತಿನ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆ ಮತ ಎಣಿಕೆ ಮುಗಿದಿದದ್ದು ಬಿಜೆಪಿ ಅಭ್ಯರ್ಥಿ ಎಸ್.ವಿ.ಸಂಕನೂರ 33,711 ಮತ ಗಳಿಸಿ ಗೆಲುವು ಸಾಧಿಸಿದ್ಧಾರೆ. ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್ನ ಮೋಹನ ಲಿಂಬಿಕಾಯಿ ಅವರನ್ನು 9,323 ಮತಗಳ ಅಂತರದಿಂದ ಸೋಲಿಸಿದ್ಧಾರೆ. ರಾತ್ರಿ 2 ಗಂಟೆ ಹೊತ್ತಿಗೆ ಸಂಕನೂರ ಅವರು ಮೂರನೇ ಬಾರಿಗೆ ಗೆಲುವು ಸಾಧಿಸಿದರು. ಮತ

ಧಾರವಾಡ: ವಿಧಾನ ಪರಿಷತ್ತಿನ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆ ಮತ ಎಣಿಕೆ ಮುಗಿದಿದದ್ದು ಬಿಜೆಪಿ ಅಭ್ಯರ್ಥಿ ಎಸ್.ವಿ.ಸಂಕನೂರ 33,711 ಮತ ಗಳಿಸಿ ಗೆಲುವು ಸಾಧಿಸಿದ್ಧಾರೆ. ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್ನ ಮೋಹನ ಲಿಂಬಿಕಾಯಿ ಅವರನ್ನು 9,323 ಮತಗಳ ಅಂತರದಿಂದ ಸೋಲಿಸಿದ್ಧಾರೆ. ರಾತ್ರಿ 2 ಗಂಟೆ ಹೊತ್ತಿಗೆ ಸಂಕನೂರ ಅವರು ಮೂರನೇ ಬಾರಿಗೆ ಗೆಲುವು ಸಾಧಿಸಿದರು. ಮತ ಎಣಿಕೆ ಕೊನೆ ಸುತ್ತು ಮುಗಿದಾಗ ಎಸ್.ವಿ.ಸಂಕನೂರ ಅವರು 33,711, ಕಾಂಗ್ರೆಸ್ನ ಮೋಹನ ಲಿಂಬಿಕಾಯಿ 24,388 ಅವರು ಮತಗಳನ್ನು ಪಡೆದರು. ಪಕ್ಷೇತರ ಅಭ್ಯರ್ಥಿ ಕಾಂತಕುಮಾರ್ ಅವರು 4,055 ಮತಗಳನ್ನು ಪಡೆದರು. ಮತ ಗಳಿಕೆಯಲ್ಲಿ ಐದು ಅಭ್ಯರ್ಥಿಗಳು ಮೂರಂಕಿ ಹಾಗೂ ಆರು ಅಭ್ಯರ್ಥಿಗಳು ಎರಡಂಕಿ ದಾಟಲಿಲ್ಲ. 10,245 ಮತ ಅಸಿಂಧು: ಒಟ್ಟು 73,691 ಮತ ಎಣಿಕೆಯಲ್ಲಿ 10,245 ಮತಗಳು ಅಸಿಂಧುವಾಗಿವೆ. 63,446 ಮತಗಳು ಸಿಂಧುವಾಗಿವೆ. ಎಸ್.ವಿ.ಸಂಕನೂರ ಸುದ್ದಿಗಾರರೊಂದಿಗೆ ಮಾತನಾಡಿ, ‘ಬಿಜೆಪಿ ಮತದಾರರ ಗೆಲುವು ಇದು. ಪಕ್ಷದ ನಾಯಕರು, ಕಾರ್ಯಕರ್ತರ ಶ್ರಮ ಗೆಲುವಿಗೆ ಕಾರಣ’ ಎಂದು ಸಂತಸ ಹಂಚಿಕೊಂಡರು ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ‘ಕಾಂಗ್ರೆಸ್ನವರು ಇವಿಎಂ ಸರಿಯಿಲ್ಲ ಎಂದು ಆಪಾದಿಸಿ, ಬ್ಯಾಲೆಟ್ ಪೇಪರ್ ಬೇಕು ಎಂದು ಹೇಳಿದ್ದರು. ಮತದಾರರು ಬ್ಯಾಲೆಟ್ ಪೇಪರ್ ಮೂಲಕ ನಡೆದ ಈ ಚುನಾವಣೆಯಲ್ಲೂ ಬಿಜೆಪಿಯನ್ನು ಬೆಂಬಲಿಸಿದ್ಧಾರೆ. ಕುಣಿಯಲಾರದವರು ನೆಲ ಡೊಂಕು ಎಂದಂತೆ ಕಾಂಗ್ರೆಸ್ನವರು ಆಡುತ್ತಾರೆ’ ಎಂದು ಟೀಕಿಸಿದರು.