ಸಂಖ್ಯೆ–ಸುದ್ದಿ | ಎಸ್ಐಆರ್: ಒಳಹೊರಗು
ಎಸ್ಐಆರ್ಗೂ ಮೊದಲಿನ ರಾಜ್ಯದ ಮತದಾರರ ಪಟ್ಟಿಗೆ ಹೋಲಿಸಿದರೆ, ಒಟ್ಟು 99.03 ಲಕ್ಷದಷ್ಟು ಮತದಾರರ ಹೆಸರುಗಳನ್ನು ಎಸ್ಐಆರ್ ಪ್ರಕ್ರಿಯೆಯಲ್ಲಿ ಕೈಬಿಡಲಾಗಿದೆ.ಜಿಲ್ಲಾವಾರು ಮತದಾರರ ಅಂಕಿ ಅಂಶಗಳನ್ನು ಅವಲೋಕಿಸಿದರೆ, ಎಲ್ಲ ಜಿಲ್ಲೆಗಳಲ್ಲೂ ಮತದಾರರ ಸಂಖ್ಯೆಯಲ್ಲಿ ಗಣನೀಯ ಇಳಿಕೆಯಾಗಿದೆ.ಬೆಂಗಳೂರಿನಲ್ಲಿ ಗರಿಷ್ಠ: ಬೆಂಗಳೂರಿನಲ್ಲಿ ಎಸ್ಐಆರ್ಗೂ ಮುನ್ನ 1.03 ಕೋಟಿ ಮತದಾರ

ಎಸ್ಐಆರ್ಗೂ ಮೊದಲಿನ ರಾಜ್ಯದ ಮತದಾರರ ಪಟ್ಟಿಗೆ ಹೋಲಿಸಿದರೆ, ಒಟ್ಟು 99.03 ಲಕ್ಷದಷ್ಟು ಮತದಾರರ ಹೆಸರುಗಳನ್ನು ಎಸ್ಐಆರ್ ಪ್ರಕ್ರಿಯೆಯಲ್ಲಿ ಕೈಬಿಡಲಾಗಿದೆ.ಜಿಲ್ಲಾವಾರು ಮತದಾರರ ಅಂಕಿ ಅಂಶಗಳನ್ನು ಅವಲೋಕಿಸಿದರೆ, ಎಲ್ಲ ಜಿಲ್ಲೆಗಳಲ್ಲೂ ಮತದಾರರ ಸಂಖ್ಯೆಯಲ್ಲಿ ಗಣನೀಯ ಇಳಿಕೆಯಾಗಿದೆ.ಬೆಂಗಳೂರಿನಲ್ಲಿ ಗರಿಷ್ಠ: ಬೆಂಗಳೂರಿನಲ್ಲಿ ಎಸ್ಐಆರ್ಗೂ ಮುನ್ನ 1.03 ಕೋಟಿ ಮತದಾರರಿದ್ದರು. ಆಯೋಗ ಈಗ ಪ್ರಕಟಿಸಿರುವ ಪಟ್ಟಿಯಲ್ಲಿ 59.11 ಲಕ್ಷ ಮತದಾರರಷ್ಟೇ ಇದ್ದಾರೆ. ಈ ಪ್ರಕಾರ ರಾಜಧಾನಿಯಲ್ಲಿ ಒಟ್ಟು 43.89 ಲಕ್ಷದಷ್ಟು ಮತದಾರರ ಸಂಖ್ಯೆ ಕಡಿಮೆಯಾಗಿದೆ.ನಂತರದ ಸ್ಥಾನದಲ್ಲಿ ಮೈಸೂರು ಇದೆ. ಅಲ್ಲಿ ಮತದಾರರ ಸಂಖ್ಯೆ 5.18 ಲಕ್ಷದಷ್ಟು ಕುಸಿದಿದೆ ನಂತರದ ಸ್ಥಾನಗಳಲ್ಲಿ ಕಲಬುರಗಿ ಮತ್ತು ಬೆಳಗಾವಿ ಜಿಲ್ಲೆಗಳಿವೆ. ಅಲ್ಲಿ ಕ್ರಮವಾಗಿ 4.76 ಲಕ್ಷ ಮತ್ತು 4.53 ಲಕ್ಷ ಮತದಾರರು ಕಡಿಮೆಯಾಗಿದೆ.ಮೈಸೂರು ಜಿಲ್ಲೆಯಲ್ಲಿ ಎಸ್ಐಆರ್ಗೂ ಮುನ್ನ 27.99 ಲಕ್ಷ ಮತದಾರರು ಪಟ್ಟಿಯಲ್ಲಿದ್ದರೆ, ಈಗ ಆ ಸಂಖ್ಯೆ 22.81 ಲಕ್ಷಕ್ಕೆ ಇಳಿದಿದೆ. ಕಲಬುರಗಿ ಜಿಲ್ಲೆಯಲ್ಲಿ ಮೊದಲು 23.71 ಲಕ್ಷ ಮತದಾರರು ಇದ್ದರು. ಈಗಿನ ಪಟ್ಟಿಯಲ್ಲಿ 18.95 ಲಕ್ಷ ಮಂದಿ ಇದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ ಮೊದಲು 41.07 ಲಕ್ಷ ಮತದಾರರು ಇದ್ದರೆ, ಈಗ ಮತದಾರರ ಪಟ್ಟಿಯಲ್ಲಿ 36.54 ಲಕ್ಷ ಮಂದಿಯ ಹೆಸರುಗಳಿವೆ.ಉಡುಪಿ ಜಿಲ್ಲೆಯಲ್ಲಿ ಅತಿ ಕಡಿಮೆ, ಅಂದರೆ 49 ಸಾವಿರದಷ್ಟು ಮತದಾರರ ಸಂಖ್ಯೆ ಕಡಿಮೆಯಾಗಿದೆ . ಕೊಡಗಿನಲ್ಲಿ 55 ಸಾವಿರ, ಚಿಕ್ಕಮಗಳೂರು ಜಿಲ್ಲೆಯಲ್ಲಿ 85 ಸಾವಿರ, ಉತ್ತರ ಕನ್ನಡ ಜಿಲ್ಲೆಗಳಲ್ಲಿ 89 ಸಾವಿರ ಮತದಾರರು ಕಡಿಮೆಯಾಗಿದ್ದಾರೆ. ಗೆಲುವಿನ ಅಂತರಕ್ಕಿಂತ ಹೆಚ್ಚು ಮತ ಕಳೆದುಕೊಂಡವರುಗೆಲುವಿನ ಅಂತರಕ್ಕಿಂತ ಹೆಚ್ಚು ಮತ ಕಳೆದುಕೊಂಡವರು ರಾಜ್ಯ ರಾಜಕಾರಣದ ಪ್ರಮುಖ ನಾಯಕರು ಪ್ರತಿನಿಧಿಸುತ್ತಿರುವ ಕ್ಷೇತ್ರಗಳಲ್ಲಿ ಅವರ ಹಿಂದಿನ ಗೆಲುವಿನ ಅಂತರಕ್ಕಿಂತ ಹೆಚ್ಚು ಮತದಾರರನ್ನು ಎಸ್ಐಆರ್ನ ಅಂತಿಮ ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ. ಕಾಂಗ್ರೆಸ್ನ ಎಂ.ಬಿ.ಪಾಟೀಲ, ಈಶ್ವರ ಖಂಡ್ರೆ, ಪ್ರಿಯಾಂಕ್ ಖರ್ಗೆ, ಬಿಜೆಪಿಯ ಬಿ.ವೈ.ವಿಜಯೇಂದ್ರ, ಆರ್.ಅಶೋಕ, ಜೆಡಿಎಸ್ನ ಎಚ್.ಡಿ.ಕುಮಾರಸ್ವಾಮಿ ಅವರೂ ಈ ಸಾಲಿನಲ್ಲಿದ್ದಾರೆ. ಆದರೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ ಮತ್ತು ಅಹಿಂದ ಸಮುದಾಯಗಳ ಮುಂದಿನ ನಾಯಕ ಎಂದು ಬಿಂಬಿತರಾಗಿದ್ದ ಸತೀಶ ಜಾರಕಿಹೊಳಿ ಅವರ ಕ್ಷೇತ್ರಗಳಲ್ಲಿ ಅವರ ಗೆಲುವಿನ ಅಂತರಕ್ಕಿಂತ ಕಡಿಮೆ ಮತದಾರರನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ.ಡಿ.ಕೆ.ಶಿವಕುಮಾರ್ಕನಕಪುರ ಕ್ಷೇತ್ರದಲ್ಲಿ ಎಸ್ಐಆರ್ಗೂ ಮುನ್ನ 2.36 ಲಕ್ಷ ಮತದಾರರು ಇದ್ದರು. ಈಗ 2.07 ಲಕ್ಷ ಮತದಾರರು ಉಳಿದಿದ್ದಾರೆ. 2023ರ ಚುನಾವಣೆಯಲ್ಲಿ ಶಿವಕುಮಾರ್ ಅವರು 1.22 ಲಕ್ಷ ಮತಗಳ ಅಂತರದಿಂದ ಗೆದ್ದಿದ್ದರು. ಈಗ ಅವರ ಕ್ಷೇತ್ರದಲ್ಲಿ 28,700 ಮತದಾರರನ್ನು ತೆಗೆದುಹಾಕಲಾಗಿದೆ.ಸಿದ್ದರಾಮಯ್ಯವರುಣಾ ಕ್ಷೇತ್ರದಲ್ಲಿ ಎಸ್ಐಆರ್ಗೂ ಮುನ್ನ 2.43 ಲಕ್ಷ ಮತದಾರರು ಇದ್ದರು. ಈಗ 2.14 ಲಕ್ಷ ಮತದಾರರು ಉಳಿದಿದ್ದಾರೆ. 2023ರ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರು 46,163 ಮತಗಳ ಅಂತರದಿಂದ ಗೆದ್ದಿದ್ದರು. ಈಗ ಅವರ ಕ್ಷೇತ್ರದಲ್ಲಿ 29,020 ಮತದಾರರನ್ನು ತೆಗೆದುಹಾಕಲಾಗಿದೆ.ಸತೀಶ ಜಾರಕಿಹೊಳಿಯಮಕನಮರಡಿ ಕ್ಷೇತ್ರದಲ್ಲಿ ಎಸ್ಐಆರ್ಗೂ ಮುನ್ನ 2.09 ಲಕ್ಷ ಮತದಾರರು ಇದ್ದರು. ಈಗ 1.93 ಲಕ್ಷ ಮತದಾರರು ಉಳಿದಿದ್ದಾರೆ. 2023ರ ಚುನಾವಣೆಯಲ್ಲಿ ಸತೀಶ ಜಾರಕಿಹೊಳಿ ಅವರು 57,211 ಮತಗಳ ಅಂತರದಿಂದ ಗೆದ್ದಿದ್ದರು. ಈಗ ಅವರ ಕ್ಷೇತ್ರದಲ್ಲಿ 16,599 ಮತದಾರರನ್ನು ತೆಗೆದುಹಾಕಲಾಗಿದೆ.ಜಿ.ಪರಮೇಶ್ವರಕೊರಟಗೆರೆ ಕ್ಷೇತ್ರದಲ್ಲಿ ಎಸ್ಐಆರ್ಗೂ ಮುನ್ನ 2.09 ಲಕ್ಷ ಮತದಾರರು ಇದ್ದರು. ಈಗ 1.95 ಲಕ್ಷ ಮತದಾರರಷ್ಟೇ ಉಳಿದಿದ್ದಾರೆ. ಹಿಂದಿನ ಚುನಾವಣೆಯಲ್ಲಿ ಪರಮೇಶ್ವರ ಅವರ ಗೆಲುವಿನ ಅಂತರಕ್ಕಿಂತ ತುಸು ಕಡಿಮೆ ಮತದಾರರನ್ನು ಎಸ್ಐಆರ್ನಲ್ಲಿ ತೆಗೆದುಹಾಕಲಾಗಿದೆ.14,3472023ರ ಚುನಾವಣೆಯಲ್ಲಿ ಜಿ.ಪರಮೇಶ್ವರ ಅವರ ಗೆಲುವಿನ ಅಂತರ14,243ಈ ಕ್ಷೇತ್ರದಲ್ಲಿ ತೆಗೆದುಹಾಕಲಾದ ಮತದಾರರುಎಚ್.ಡಿ.ಕುಮಾರಸ್ವಾಮಿಎಚ್.ಡಿ.ಕುಮಾರಸ್ವಾಮಿ ಅವರು 2023ರ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದಿದ್ದ ಚನ್ನಪಟ್ಟಣ ಕ್ಷೇತ್ರದಲ್ಲಿ ಎಸ್ಐಆರ್ಗೂ ಮುನ್ನ 2.35 ಲಕ್ಷ ಮತದಾರರು ಇದ್ದರು. ಈಗ 2.14 ಲಕ್ಷ ಮತದಾರರು ಉಳಿದಿದ್ದಾರೆ. ಕುಮಾರಸ್ವಾಮಿ ಅವರು ಲೋಕಸಭಾ ಸದಸ್ಯರಾಗಿ ಚುನಾಯಿತರಾದ ನಂತರ ಈ ಕ್ಷೇತ್ರದ ಶಾಸಕನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.15,9152023ರ ಚುನಾವಣೆಯಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರ ಗೆಲುವಿನ ಅಂತರ21,351ಈ ಕ್ಷೇತ್ರದಲ್ಲಿ ತೆಗೆದುಹಾಕಲಾದ ಮತದಾರರುಎಂ.ಬಿ.ಪಾಟೀಲಬಬಲೇಶ್ವರ ಕ್ಷೇತ್ರದಲ್ಲಿ ಎಸ್ಐಆರ್ಗೂ ಮುನ್ನ 2.25 ಲಕ್ಷ ಮತದಾರರು ಇದ್ದರು. ಈಗ 2.03 ಲಕ್ಷ ಮತದಾರರಷ್ಟೇ ಉಳಿದಿದ್ದಾರೆ. ಈ ಕ್ಷೇತ್ರದಲ್ಲಿ ಸಾಮೂಹಿಕವಾಗಿ ಮುಸ್ಲಿಂ ಮತದಾರರನ್ನು ತೆಗೆದುಹಾಕಲು 6,500ಕ್ಕೂ ಹೆಚ್ಚು ಅರ್ಜಿಗಳನ್ನು ಸಲ್ಲಿಸಲಾಗಿತ್ತು. ಈ ಅರ್ಜಿಗಳನ್ನು ತಿರಸ್ಕರಿಸಲಾಗಿತ್ತು. ಹೀಗಿದ್ದೂ ಹಿಂದಿನ ಚುನಾವಣೆಯಲ್ಲಿ ಎಂ.ಬಿ.ಪಾಟೀಲ ಅವರ ಗೆಲುವಿನ ಅಂತರಕ್ಕಿಂತ ಹೆಚ್ಚು ಮತದಾರರನ್ನು ಎಸ್ಐಆರ್ನಲ್ಲಿ ತೆಗೆದುಹಾಕಲಾಗಿದೆ.15,2162023ರ ಚುನಾವಣೆಯಲ್ಲಿ ಎಂ.ಬಿ.ಪಾಟೀಲ ಅವರ ಗೆಲುವಿನ ಅಂತರ21,890ಈ ಕ್ಷೇತ್ರದಲ್ಲಿ ತೆಗೆದುಹಾಕಲಾದ ಮತದಾರರುಈಶ್ವರ ಖಂಡ್ರೆಭಾಲ್ಕಿ ಕ್ಷೇತ್ರದಲ್ಲಿ ಎಸ್ಐಆರ್ಗೂ ಮುನ್ನ 2.43 ಲಕ್ಷ ಮತದಾರರು ಇದ್ದರು. ಈಗ 2.15 ಲಕ್ಷ ಮತದಾರರಷ್ಟೇ ಉಳಿದಿದ್ದಾರೆ. ಈ ಕ್ಷೇತ್ರದಲ್ಲಿ ಸಾಮೂಹಿಕವಾಗಿ ಮುಸ್ಲಿಂ ಮತದಾರರನ್ನು ತೆಗೆದುಹಾಕಲು 4,800ಕ್ಕೂ ಹೆಚ್ಚು ಅರ್ಜಿಗಳನ್ನು ಸಲ್ಲಿಸಲಾಗಿತ್ತು. ಈ ಅರ್ಜಿಗಳನ್ನು ತಿರಸ್ಕರಿಸಲಾಗಿತ್ತು. ಹೀಗಿದ್ದೂ ಹಿಂದಿನ ಚುನಾವಣೆಯಲ್ಲಿ ಈಶ್ವರ ಖಂಡ್ರೆ ಅವರ ಗೆಲುವಿನ ಅಂತರಕ್ಕಿಂತ ಹೆಚ್ಚು ಮತದಾರರನ್ನು ಎಸ್ಐಆರ್ನಲ್ಲಿ ತೆಗೆದುಹಾಕಲಾಗಿದೆ.27,7062023ರ ಚುನಾವಣೆಯಲ್ಲಿ ಈಶ್ವರ ಖಂಡ್ರೆ ಅವರ ಗೆಲುವಿನ ಅಂತರ28,547ಈ ಕ್ಷೇತ್ರದಲ್ಲಿ ತೆಗೆದುಹಾಕಲಾದ ಮತದಾರರುಪ್ರಿಯಾಂಕ್ ಖರ್ಗೆಚಿತ್ತಾಪುರ ಕ್ಷೇತ್ರದಲ್ಲಿ ಎಸ್ಐಆರ್ಗೂ ಮುನ್ನ 2.51 ಲಕ್ಷ ಮತದಾರರು ಇದ್ದರು. ಈಗ 2.00 ಲಕ್ಷ ಮತದಾರರಷ್ಟೇ ಉಳಿದಿದ್ದಾರೆ. ಹಿಂದಿನ ಚುನಾವಣೆಯಲ್ಲಿ ಪ್ರಿಯಾಂಕ್ ಖರ್ಗೆ ಅವರ ಗೆಲುವಿನ ಅಂತರಕ್ಕಿಂತ ಹೆಚ್ಚು ಮತದಾರರನ್ನು ಎಸ್ಐಆರ್ನಲ್ಲಿ ತೆಗೆದುಹಾಕಲಾಗಿದೆ.13,6402023ರ ಚುನಾವಣೆಯಲ್ಲಿ ಪ್ರಿಯಾಂಕ್ ಖರ್ಗೆ ಅವರ ಗೆಲುವಿನ ಅಂತರ50,839ಈ ಕ್ಷೇತ್ರದಲ್ಲಿ ತೆಗೆದುಹಾಕಲಾದ ಮತದಾರರುಬಿ.ವೈ.ವಿಜಯೇಂದ್ರಶಿಕಾರಿಪುರ ಕ್ಷೇತ್ರದಲ್ಲಿ ಎಸ್ಐಆರ್ಗೂ ಮುನ್ನ 2.06 ಲಕ್ಷ ಮತದಾರರು ಇದ್ದರು. ಈಗ 1.86 ಲಕ್ಷ ಮತದಾರರಷ್ಟೇ ಉಳಿದಿದ್ದಾರೆ. ಹಿಂದಿನ ಚುನಾವಣೆಯಲ್ಲಿ ವಿಜಯೇಂದ್ರ ಅವರ ಗೆಲುವಿನ ಅಂತರಕ್ಕಿಂತ ಹೆಚ್ಚು ಮತದಾರರನ್ನು ಎಸ್ಐಆರ್ನಲ್ಲಿ ತೆಗೆದುಹಾಕಲಾಗಿದೆ.11,0082023ರ ಚುನಾವಣೆಯಲ್ಲಿ ವಿಜಯೇಂದ್ರ ಅವರ ಗೆಲುವಿನ ಅಂತರ20,463ಈ ಕ್ಷೇತ್ರದಲ್ಲಿ ತೆಗೆದುಹಾಕಲಾದ ಮತದಾರರುಆರ್.ಅಶೋಕಪದ್ಮನಾಭನಗರ ಕ್ಷೇತ್ರದಲ್ಲಿ ಎಸ್ಐಆರ್ಗೂ ಮುನ್ನ 2.92 ಲಕ್ಷ ಮತದಾರರು ಇದ್ದರು. ಈಗ 1.70 ಲಕ್ಷ ಮತದಾರರಷ್ಟೇ ಉಳಿದಿದ್ದಾರೆ. ಹಿಂದಿನ ಚುನಾವಣೆಯಲ್ಲಿ ಅಶೋಕ ಅವರ ಗೆಲುವಿನ ಅಂತರಕ್ಕಿಂತ ಹೆಚ್ಚು ಮತದಾರರನ್ನು ಎಸ್ಐಆರ್ನಲ್ಲಿ ತೆಗೆದುಹಾಕಲಾಗಿದೆ.55,1752023ರ ಚುನಾವಣೆಯಲ್ಲಿ ಅಶೋಕ ಅವರ ಗೆಲುವಿನ ಅಂತರ1.22 ಲಕ್ಷಈ ಕ್ಷೇತ್ರದಲ್ಲಿ ತೆಗೆದುಹಾಕಲಾದ ಮತದಾರರು