ಪೆರೋಲ್ ಅವಧಿ ಮುಗಿದ 17 ಗಂಟೆ ಬಳಿಕ ಜೈಲಿಗೆ ಮರಳಿದ ಅಸಾರಾಂ ಬಾಪು ವಿರುದ್ಧ ಕೇಸ್
ಜೋಧಪುರ: ವೈದ್ಯಕೀಯ ಪೆರೋಲ್ ಪಡೆದು ಜೈಲಿನಿಂದ ಬಿಡುಗಡೆಯಾಗಿದ್ದ ಸ್ವಯಂಘೋಷಿತ ದೇವಮಾನವ ಅಸಾರಾಂ ಬಾಪುಗೆ ಮತ್ತೆ ಕಾನೂನು ಸಂಕಷ್ಟ ಎದುರಾಗಿದೆ. ಪೆರೋಲ್ ಅವಧಿ ಮುಗಿದ 17 ಗಂಟೆಗಳ ನಂತರ ಜೋಧ್ಪುರ ಕೇಂದ್ರ ಕಾರಾಗೃಹಕ್ಕೆ ಮರಳಿದ ಕಾರಣ ಎಫ್ಐಆರ್ ದಾಖಲಾಗಿದೆ.ಜೈಲಿಗೆ ಮರಳಿದ್ದು ತಡವಾದದ್ದಕ್ಕೆ ಸಂಬಂಧಿಸಿದಂತೆ ರತನಾಡಾ ಪೊಲೀಸರು ಕಾರಾಗೃಹ ಕಾಯ್ದೆಯ ಸೆಕ್ಷನ್ 58(ಬಿ) ಅ

ಜೋಧಪುರ: ವೈದ್ಯಕೀಯ ಪೆರೋಲ್ ಪಡೆದು ಜೈಲಿನಿಂದ ಬಿಡುಗಡೆಯಾಗಿದ್ದ ಸ್ವಯಂಘೋಷಿತ ದೇವಮಾನವ ಅಸಾರಾಂ ಬಾಪುಗೆ ಮತ್ತೆ ಕಾನೂನು ಸಂಕಷ್ಟ ಎದುರಾಗಿದೆ. ಪೆರೋಲ್ ಅವಧಿ ಮುಗಿದ 17 ಗಂಟೆಗಳ ನಂತರ ಜೋಧ್ಪುರ ಕೇಂದ್ರ ಕಾರಾಗೃಹಕ್ಕೆ ಮರಳಿದ ಕಾರಣ ಎಫ್ಐಆರ್ ದಾಖಲಾಗಿದೆ.ಜೈಲಿಗೆ ಮರಳಿದ್ದು ತಡವಾದದ್ದಕ್ಕೆ ಸಂಬಂಧಿಸಿದಂತೆ ರತನಾಡಾ ಪೊಲೀಸರು ಕಾರಾಗೃಹ ಕಾಯ್ದೆಯ ಸೆಕ್ಷನ್ 58(ಬಿ) ಅಡಿಯಲ್ಲಿ ಮಂಗಳವಾರ ರಾತ್ರಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ, ರಾತ್ರಿ ಸಮಯದಲ್ಲಿ ಹಿಂದಿರುಗಿದ್ದರಿಂದ, ಬಾಪುವನ್ನು ಸೇರಿಸಿಕೊಳ್ಳಲು ಜೈಲು ಅಧಿಕಾರಿಗಳು ನಿರಾಕರಿಸಿದ್ದರು.ಬಾಲಕಿ ಮೇಲೆ ಅತ್ಯಾಚಾರವೆಸಗಿದ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಬಾಪು, ಬುಧವಾರ ಬೆಳಿಗ್ಗೆ 10ಕ್ಕೆ ಜೈಲಿಗೆ ಶರಣಾಗಿದ್ದಾರೆ. ಆದರೆ, ಇಡೀ ರಾತ್ರಿ ಭಗತ್ ಕಿ ಕೋಠಿ ಎಂಬಲ್ಲಿ ಇರುವ ಆರೋಗ್ಯಂ ಆಸ್ಪತ್ರೆಯಲ್ಲಿ ಉಳಿದಿದ್ದರು ಎನ್ನಲಾಗಿದೆ.ರಾಜಸ್ಥಾನ ಹೈಕೋರ್ಟ್ ಅಕ್ಟೋಬರ್ 6ರಂದು ನೀಡಿದ್ದ 20 ದಿನಗಳ ಪೆರೋಲ್ ಅವಧಿ ಮಂಗಳವಾರ ಮುಗಿದಿತ್ತು. ಅದರಂತೆ ಸಂಜೆ 5ರೊಳಗೆ ಜೈಲಿಗೆ ಮರಳಬೇಕಿತ್ತು. ಆದರೆ, ಉಜ್ಜಯಿನಿಯಿಂದ ಏರ್ ಆಂಬುಲೆನ್ಸ್ ಮೂಲಕ ರಾತ್ರಿ 10ಕ್ಕೆ ಜೋಧಪುರಕ್ಕೆ ಬಂದ ಬಾಪು, ಜೈಲಿನ ಗೇಟ್ ತಲುಪಿದಾಗ ಸಮಯ ರಾತ್ರಿ 10.45 ಆಗಿತ್ತು.ಕೈದಿಗಳನ್ನು ರಾತ್ರಿ ವೇಳೆ ಜೈಲಿಗೆ ಸೇರಿಸಿಕೊಳ್ಳುವಂತಿಲ್ಲ ಎಂಬ ನಿಯಮದ ಅನುಸಾರ, ಬಾಪುಗೆ ಪ್ರವೇಶ ನಿರಾಕರಿಸಲಾಗಿತ್ತು. ನಂತರ, ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು.ಪೆರೋಲ್ ಅವಧಿ ವಿಸ್ತರಿಸುವಂತೆ ಕೋರಿ ಬಾಪು ಮಾಡಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ಮಂಗಳವಾರವೇ ತಿರಸ್ಕರಿಸಿತ್ತು.