ರಾಮ ಅಲ್ಪಸಂಖ್ಯಾತನನ್ನು ಕೊಂದಿಲ್ಲ: ಕ್ಷಮೆಯಾಚಿಸಿದ ಉತ್ತರ ಪ್ರದೇಶ ಚುನಾವಣಾಧಿಕಾರಿ
ಲಖನೌ: ವಿಧಾನ ಪರಿಷತ್ ಚುನಾವಣೆ ವೇಳೆ ಮತದಾರರ ಪಟ್ಟಿಯಲ್ಲಿನ ಹೆಸರುಗಳಿಗೆ ಸಂಬಂಧಿಸಿದಂತೆ ವಿವಾದಾತ್ಮಕ ಹೇಳಿಕೆ ನೀಡಿದ್ದಕ್ಕಾಗಿ ಉತ್ತರ ಪ್ರದೇಶದ ಮುಖ್ಯ ಚುನಾವಣಾಧಿಕಾರಿ ನವದೀಪ್ ರಿನ್ವಾ ಕ್ಷಮೆಯಾಚಿಸಿದ್ದಾರೆ.ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ಅಧಿಕೃತ ಖಾತೆಯ ಮೂಲಕ ಇನ್ನು ಮುಂದೆ ಔಪಚಾರಿಕ ಸಂವಹನ ನಡೆಸುವುದಾಗಿ ತಿಳಿಸಿದ್ದ

ಲಖನೌ: ವಿಧಾನ ಪರಿಷತ್ ಚುನಾವಣೆ ವೇಳೆ ಮತದಾರರ ಪಟ್ಟಿಯಲ್ಲಿನ ಹೆಸರುಗಳಿಗೆ ಸಂಬಂಧಿಸಿದಂತೆ ವಿವಾದಾತ್ಮಕ ಹೇಳಿಕೆ ನೀಡಿದ್ದಕ್ಕಾಗಿ ಉತ್ತರ ಪ್ರದೇಶದ ಮುಖ್ಯ ಚುನಾವಣಾಧಿಕಾರಿ ನವದೀಪ್ ರಿನ್ವಾ ಕ್ಷಮೆಯಾಚಿಸಿದ್ದಾರೆ.ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ಅಧಿಕೃತ ಖಾತೆಯ ಮೂಲಕ ಇನ್ನು ಮುಂದೆ ಔಪಚಾರಿಕ ಸಂವಹನ ನಡೆಸುವುದಾಗಿ ತಿಳಿಸಿದ್ದಾರೆ.‘ಈ ಹಿಂದೆ ಹಂಚಿಕೊಂಡಿದ್ದ ಪೋಸ್ಟ್ನಲ್ಲಿನ ಮಾತಿನ ಧಾಟಿ, ಶೈಲಿ ಮತ್ತು ಕಟುವಾದ ಭಾಷೆಯು ಅಧಿಕೃತ ಖಾತೆಯಿಂದ ನಿರೀಕ್ಷಿಸಲಾಗುವ ಸಂವಹನದ ಸ್ವರೂಪಕ್ಕೆ ಹೊಂದಿಕೆಯಾಗುವುದಿಲ್ಲ. ಆ ಪೋಸ್ಟ್ನಿಂದ ಜನರಲ್ಲಿ ಉಂಟಾದ ಆಕ್ರೋಶವನ್ನು ನಾವು ಗಮನಿಸಿದ್ದೇವೆ. ಇದರಿಂದ ಆಘಾತಕ್ಕೊಳಗಾದ ಮತ್ತು ನೋವು ಅನುಭವಿಸಿದ ಎಲ್ಲರಲ್ಲೂ ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇವೆ. ಇನ್ನು ಮುಂದೆ ನಮ್ಮ ಸಂವಹನವು ಸಭ್ಯ ಮತ್ತು ಔಪಚಾರಿಕವಾಗಿರುತ್ತದೆ’ ಎಂದು ಅವರು ಪೋಸ್ಟ್ನಲ್ಲಿ ತಿಳಿಸಿದ್ದಾರೆ.ಏನಿದು ವಿವಾದ?ಅಲಹಾಬಾದ್–ಝಾನ್ಸಿ ಪದವೀಧರ ಕ್ಷೇತ್ರದ ಮತದಾರರ ಪಟ್ಟಿಯಲ್ಲಿನ ಹೆಸರುಗಳಿಗೆ ಸಂಬಂಧಿಸಿದಂತೆ ಅಕ್ರಮಗಳು ನಡೆದಿವೆ ಎಂದು ಪ್ರತಿಪಕ್ಷಗಳು ಆರೋಪಿಸಿದ್ದವು.ಈ ಪಟ್ಟಿಯಲ್ಲಿ ಮತದಾರರೊಬ್ಬರ ಹೆಸರನ್ನು ‘ರಾಮ್ ನೇ ಶರ್ಮಾ ಕೋ ಮಾರಾ’ (ರಾಮನು ಶರ್ಮಾನನ್ನು ಕೊಂದನು) ಎಂದು ನಮೂದಿಸಲಾಗಿತ್ತು. ಮತ್ತೊಂದು ಪ್ರಕರಣದಲ್ಲಿ ಮತದಾರನ ತಂದೆಯ ಹೆಸರಿನ ಜಾಗದಲ್ಲಿ ‘ಬಿ.ಕಾಂ’ ಎಂದು ದಾಖಲಿಸಲಾಗಿತ್ತು.ಈ ವಿಚಾರವನ್ನು ಪ್ರಸ್ತಾಪಿಸಿದ್ದ ಆಮ್ ಆದ್ಮಿ ಪಕ್ಷದ (ಎಎಪಿ) ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್, ಮತದಾರರ ಪಟ್ಟಿಯಲ್ಲಿ ಅಕ್ರಮ ನಡೆದಿರುವುದಾಗಿ ಆರೋಪಿಸಿದ್ದರು.हालिया विधान परिषद के चुनाव की मतदाता सूची में एक अजीबोगरीब नाम “राम ने शर्मा को मारा” भी है। कंप्यूटर/सॉफ्टवेयर जातिवादी नहीं है। हमारे द्वारा गलती किया जाना स्वीकार है लेकिन हमारे सौभाग्य से गलती होते समय भी जाति का भेदभाव नहीं हुआ है। भगवान का यह भी शुक्र है की राम ने किसी अल्पसंख्यक को नहीं मारा है। नहीं तो जातिवादी होने के साथ-साथ सांप्रदायिक होने का इल्ज़ाम भी लगता।— CEO Uttar Pradesh (@ceoup) October 25, 2026 ಈ ಆರೋಪಗಳಿಗೆ ಎಕ್ಸ್ನಲ್ಲಿ ಪ್ರತಿಕ್ರಿಯಿಸಿದ್ದ ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ ಕಚೇರಿ, ‘ಕಂಪ್ಯೂಟರ್ಗಳು, ಸಾಫ್ಟ್ವೇರ್ಗಳು ಜಾತಿವಾದಿಗಳಲ್ಲ. ನಮ್ಮ ತಪ್ಪನ್ನು ನಾವು ಒಪ್ಪಿಕೊಳ್ಳುತ್ತೇವೆ. ಆದರೆ, ತಪ್ಪು ಸಂಭವಿಸಿದ ಸಂದರ್ಭದಲ್ಲಿಯೂ ಯಾವುದೇ ಜಾತಿ ತಾರತಮ್ಯ ನಡೆದಿಲ್ಲ. ಒಂದು ವೇಳೆ ರಾಮನು ಅಲ್ಪಸಂಖ್ಯಾತ ಸಮುದಾಯದ ವ್ಯಕ್ತಿಯನ್ನು ಕೊಂದಿದ್ದರೆ, ನಮ್ಮನ್ನು ಜಾತಿವಾದಿಗಳೆಂದು ಮಾತ್ರವಲ್ಲದೆ ಕೋಮುವಾದಿಗಳೆಂದೂ ಆರೋಪಿಸುತ್ತಿದ್ದರು. ದೇವರಿಗೆ ಧನ್ಯವಾದಗಳು’ ಎಂಬರ್ಥದ ಹೇಳಿಕೆಯನ್ನು ನೀಡಿತ್ತು.ಈ ಪೋಸ್ಟ್ನಲ್ಲಿನ ಭಾಷೆಗೆ ಪ್ರತಿಪಕ್ಷಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದವು. ವಿವಾದದ ಬೆನ್ನಲ್ಲೇ ಚುನಾವಣಾಧಿಕಾರಿ ಕ್ಷಮೆಯಾಚಿಸಿದ್ದಾರೆ.