ಕರ್ನಾಟಕದಲ್ಲಿ ಅಧಿಕಾರದಲ್ಲಿರೂ ಕಾಂಗ್ರೆಸ್ ಒಂದೇ ಒಂದು ಸ್ಥಾನ ಗೆದ್ದಿಲ್ಲ – ನಿತಿನ್ ನಬಿನ್ ಟೀಕೆ
– ಇನ್ಮುಂದೆ ಕಾಂಗ್ರೆಸ್ ಆಟ ನಡೆಯಲ್ಲ – ರಾಹುಲ್ ಗಾಂಧಿಗೆ ನಬಿನ್ ತಿರುಗೇಟು ನವದೆಹಲಿ: ಲೋಕಸಭೆಯ ವಿಪಕ್ಷ ನಾಯಕನಿಗೆ ಯಾವುದೇ ಸಾಂವಿಧಾನಿಕ ಸಂಸ್ಥೆಗಳ ಮೇಲೂ ನಂಬಿಕೆ ಇಲ್ಲದಂತಾಗಿದೆ. ಸದನದಲ್ಲಿ ಪ್ರಶ್ನೆಗಳನ್ನು ಎತ್ತುತ್ತಾರೆ, ಆದರೆ ಉತ್ತರಗಳನ್ನ ಎದುರಿಸುವ ಸಮಯ ಬಂದಾಗ ಸದನದಿಂದಲೇ ಪಲಾಯನ ಮಾಡುತ್ತಾರೆ. ಇಂದು ಅವರು ಅನುಸರಿಸುತ್ತಿರುವ ರಾಜಕೀಯ ಮನಸ್ಥಿತಿ ದೇಶದ ಮ

– ಇನ್ಮುಂದೆ ಕಾಂಗ್ರೆಸ್ ಆಟ ನಡೆಯಲ್ಲ – ರಾಹುಲ್ ಗಾಂಧಿಗೆ ನಬಿನ್ ತಿರುಗೇಟು ನವದೆಹಲಿ: ಲೋಕಸಭೆಯ ವಿಪಕ್ಷ ನಾಯಕನಿಗೆ ಯಾವುದೇ ಸಾಂವಿಧಾನಿಕ ಸಂಸ್ಥೆಗಳ ಮೇಲೂ ನಂಬಿಕೆ ಇಲ್ಲದಂತಾಗಿದೆ. ಸದನದಲ್ಲಿ ಪ್ರಶ್ನೆಗಳನ್ನು ಎತ್ತುತ್ತಾರೆ, ಆದರೆ ಉತ್ತರಗಳನ್ನ ಎದುರಿಸುವ ಸಮಯ ಬಂದಾಗ ಸದನದಿಂದಲೇ ಪಲಾಯನ ಮಾಡುತ್ತಾರೆ. ಇಂದು ಅವರು ಅನುಸರಿಸುತ್ತಿರುವ ರಾಜಕೀಯ ಮನಸ್ಥಿತಿ ದೇಶದ ಮುಂದೆ ಒಂದು ವಿಭಿನ್ನ ಸವಾಲನ್ನೇ ಸೃಷ್ಟಿಸಿದೆ. ಆದರೆ, ದೇಶದ ಜನರಿಗೆ ಪ್ರತಿಯೊಂದು ಸವಾಲನ್ನೂ ಹೇಗೆ ಎದುರಿಸಬೇಕು ಎಂಬುದು ಚೆನ್ನಾಗಿ ತಿಳಿದಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ (Nitin Nabin) ಹೇಳಿದ್ದಾರೆ. ಸುದ್ದಿವಾಹಿನಿಯೊಂದರ ಕಾನ್ಕ್ಲೈವ್ನಲ್ಲಿ ಮಾತನಾಡಿರುವ ನಬಿನ್, ಸ್ವತಃ ಕಾಂಗ್ರೆಸ್ ಕಾರ್ಯಕರ್ತರೊಬ್ಬರೇ (Congress Worker), ʻಮೋದಿ ಜಿ ಅವರನ್ನು ಎಂದಿಗೂ ಅಧಿಕಾರದಿಂದ ಕೆಳಗಿಳಿಸಲು ಸಾಧ್ಯವಿಲ್ಲʼ ಎಂದು ಹೇಳಿದ್ದಾರೆ. ಕಾಂಗ್ರೆಸ್ನ ಕಾರ್ಯವೈಖರಿ ಮತ್ತು ಅವರ ನಡೆಗಳನ್ನ ಗಮನಿಸಿದರೆ, ದೇಶಕ್ಕೆ ಸರಿಯಾದ ದಿಕ್ಕು ತೋರಿಸಲು ಬಿಜೆಪಿಯ ಹಾಗೂ ಮೋದಿ (PM Modi) ಜಿ ಅವರ ನಾಯಕತ್ವ ಮಾತ್ರ ಸಮರ್ಥವಾಗಿದೆ ಎಂಬುದು ಸ್ಪಷ್ಟವಾಗುತ್ತದೆ ಎಂದಿದ್ದಾರೆ. ಕಾಂಗ್ರೆಸ್ ದೇಶದ ಜನರ ಕ್ಷಮೆ ಕೇಳಬೇಕು ಇದೇ ವೇಳೆ ಸಿಖ್ಖರ ದಂಗೆ ಉಲ್ಲೇಖಿಸಿದ ನಬಿನ್, 1984ರ ನವೆಂಬರ್ 1ರಂದು ದೆಹಲಿಯಲ್ಲಿ ಸಿಖ್ಖರ ಮೇಲೆ ನಡೆದ ದೌರ್ಜನ್ಯವನ್ನು ನೆನೆದು ಕಾಂಗ್ರೆಸ್ ಆಳವಾದ ಪಶ್ಚಾತ್ತಾಪ ವ್ಯಕ್ತಪಡಿಸಬೇಕು. ಈ ವಿಚಾರದಲ್ಲಿ ಕಾಂಗ್ರೆಸ್ ದೇಶದ ಜನರ ಕ್ಷಮೆಯಾಚಿಸಬೇಕಿದೆ. ಆದರೆ, ಇದೇ ನವೆಂಬರ್ 1ರಂದು ಕಾಂಗ್ರೆಸ್ ಆಯೋಜಿಸುತ್ತಿರುವ ಪ್ರತಿಭಟನೆ ಅವರ ನೈಜ ಮನಸ್ಥಿತಿಯನ್ನು ಸ್ಪಷ್ಟವಾಗಿ ತೋರಿಸುತ್ತದೆ ಎಂದು ಕಿಡಿ ಕಾರಿದ್ದಾರೆ. ಗಾಂಧಿ ಕುಟುಂಬದ ನಿರ್ಧಾರವೇ ಅಂತಿಮ ತಮ್ಮ ರ್ಯಾಲಿಯನ್ನು ಮುಂದೂಡುವಂತೆ ದೆಹಲಿಯ ವ್ಯಾಪಾರಿಗಳು ರಾಹುಲ್ ಗಾಂಧಿಯವರಿಗೆ ಮನವಿ ಮಾಡಿದ್ದರು. ಆದರೆ, ಅವರ ಮನವಿಯನ್ನು ರಾಹುಲ್ ಗಾಂಧಿ ತಿರಸ್ಕರಿಸಿದ್ದಾರೆ. ಇದರಿಂದ ರಾಹುಲ್ ಗಾಂಧಿ ಅಥವಾ ಅವರ ಕುಟುಂಬ ತೆಗೆದುಕೊಳ್ಳುವ ನಿರ್ಧಾರವೇ ಅಂತಿಮ ಎಂಬುದು ಸ್ಪಷ್ಟವಾಗುತ್ತದೆ. ಕಾಂಗ್ರೆಸ್ ಅಧ್ಯಕ್ಷರಿಗೂ ಈ ನಿರ್ಧಾರದಲ್ಲಿ ಯಾವುದೇ ಮಾತಿಲ್ಲದಂತಾಗಿದೆ ಕುಟುಕಿದ್ದಾರೆ. ಕರ್ನಾಟಕದಲ್ಲಿ ಒಂದೇ ಒಂದು ಸ್ಥಾನ ಗೆದ್ದಿಲ್ಲ ಇನ್ನು, ವಿಧಾನ ಪರಿಷತ್ ಚುನಾವಣೆಗಳು ಬ್ಯಾಲೆಟ್ ಪೇಪರ್ಗಳ ಮೂಲಕ ನಡೆದಿದ್ದವು. ಆದ್ರೆ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದರೂ, ಒಂದೇ ಒಂದು ಸ್ಥಾನವನ್ನೂ ಗೆಲ್ಲಲು ಸಾಧ್ಯವಾಗಲಿಲ್ಲ. ಇವಿಎಂ ಯಂತ್ರಗಳ ಬಗ್ಗೆ ನಿರಂತರವಾಗಿ ಪ್ರಶ್ನೆಗಳನ್ನು ಎತ್ತುತ್ತಿದ್ದವರು ಇದೇ ರಾಹುಲ್ ಗಾಂಧಿ. ಚುನಾವಣಾ ಆಯೋಗವೇ ಅವರಿಗೆ ಸವಾಲು ಹಾಕಿದ ಬಳಿಕ, ರಾಹುಲ್ ಗಾಂಧಿ ಕಡೆಯಿಂದ ಈ ವಿಚಾರವಾಗಿ ಮತ್ತಷ್ಟು ಪ್ರಶ್ನೆಗಳು ಕೇಳಿಬರಲಿಲ್ಲ ಎಂದು ತಿರುಗೇಟು ನೀಡಿದರು. ಎಸ್ಐಆರ್ ಪ್ರಕ್ರಿಯೆಯಲ್ಲಿ ಅಕ್ರಮಗಳು ನಡೆದಿದ್ದರೆ, ಕೇರಳದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದಾಗ ರಾಹುಲ್ ಗಾಂಧಿ ಏಕೆ ಪ್ರಶ್ನೆ ಎತ್ತಲಿಲ್ಲ? ಎಂಬುದಕ್ಕೂ ಉತ್ತರಿಸಬೇಕು. ಚುನಾವಣಾ ಪ್ರಕ್ರಿಯೆಯ ಮೇಲೆ ನಂಬಿಕೆ ಇರಲಿಲ್ಲ ಎಂದಾದರೆ, ತಮ್ಮದೇ ಪಕ್ಷ ಅಧಿಕಾರಕ್ಕೆ ಬಂದಾಗ ಸರ್ಕಾರಕ್ಕೆ ರಾಜೀನಾಮೆ ನೀಡುವಂತೆ ಅವರು ಏಕೆ ಸೂಚಿಸಲಿಲ್ಲ? ಪಶ್ಚಿಮ ಬಂಗಾಳದಲ್ಲಿ ಸೋತಾಗ ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂದು ಕಾಂಗ್ರೆಸ್ ನಾಯಕರು ಕೂಗಾಡುತ್ತಾರೆ. ಆದರೆ, ಕೇರಳದಲ್ಲಿ ಗೆದ್ದಾಗ ಇದೇ ವಿಚಾರವಾಗಿ ಮೌನ ವಹಿಸುತ್ತಾರೆ. ಈ ರೀತಿಯ ದ್ವಂದ್ವ ನಿಲುವು ಇನ್ನು ಮುಂದೆ ನಡೆಯುವುದಿಲ್ಲ ಎಂದು ಕಾಂಗ್ರೆಸ್ಗೆ ಅರ್ಥವಾಗಬೇಕು ಎಂದು ಎಚ್ಚರಿಕೆ ನೀಡಿದ್ದಾರೆ.