ಮೈಸೂರು: ಯತೀಂದ್ರ ವಿರುದ್ಧ ಪ್ರತಿಭಟನೆ ಕೈಬಿಡಲು ಪ್ರಮೋದಾದೇವಿ ಒಡೆಯರ್ ಮನವಿ
ಮೈಸೂರು: ಅರಮನೆ ಜಾಗದ ಕುರಿತು ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ನೀಡಿರುವ ಹೇಳಿಕೆ ಖಂಡಿಸಿ ಮೈಸೂರು ರಾಜವಂಶಸ್ಥರ ಬೆಂಬಲಿಗರು ಹಾಗೂ ಅಭಿಮಾನಿಗಳು ಅ.29ರಂದು ಕೋಟೆ ಆಂಜನೇಯ ದೇವಸ್ಥಾನದ ಆವರಣದಲ್ಲಿ ಪ್ರತಿಭಟನೆ ಹಮ್ಮಿಕೊಂಡಿರುವ ಬಗ್ಗೆ ಪೋಸ್ಟ್ಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿವೆ.‘ಕೆಲವು ಸಂಘಟಕರನ್ನು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಸಂಪರ್ಕಿಸಿದ್ದು,

ಮೈಸೂರು: ಅರಮನೆ ಜಾಗದ ಕುರಿತು ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ನೀಡಿರುವ ಹೇಳಿಕೆ ಖಂಡಿಸಿ ಮೈಸೂರು ರಾಜವಂಶಸ್ಥರ ಬೆಂಬಲಿಗರು ಹಾಗೂ ಅಭಿಮಾನಿಗಳು ಅ.29ರಂದು ಕೋಟೆ ಆಂಜನೇಯ ದೇವಸ್ಥಾನದ ಆವರಣದಲ್ಲಿ ಪ್ರತಿಭಟನೆ ಹಮ್ಮಿಕೊಂಡಿರುವ ಬಗ್ಗೆ ಪೋಸ್ಟ್ಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿವೆ.‘ಕೆಲವು ಸಂಘಟಕರನ್ನು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಸಂಪರ್ಕಿಸಿದ್ದು, ಪ್ರತಿಭಟನೆ ಕೈಬಿಡುವಂತೆ ಕೋರಿದ್ದಾರೆ’ ಎಂದು ಅರಮನೆಯ ಸಂವಹನ ವಿಭಾಗದ ಶಿವೇಂದ್ರ ಜಿ. ಅರಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.‘ರಾಜಮನೆತನದ ಬಗ್ಗೆ ಸಾರ್ವಜನಿಕರು ವ್ಯಕ್ತಪಡಿಸಿರುವ ಕಾಳಜಿ, ಬೆಂಬಲ ಮತ್ತು ಭಾವನೆಗಳನ್ನು ಗೌರವಿಸಿದ್ದಾರೆ. ಅಂತೆಯೇ, ಪ್ರಸ್ತುತ ಪರಿಸ್ಥಿತಿಯು ಸಹಜ ಸ್ಥಿತಿಗೆ ಮರಳಲು ಅವಕಾಶ ಕೊಡುವುದು ಸೂಕ್ತ ಎಂದೂ ಹೇಳಿದ್ದಾರೆ. ಈ ವಿಷಯವನ್ನು ತರಾತುರಿಯಲ್ಲಿ ನಿರ್ವಹಿಸುವುದು ಅಥವಾ ರಾಜಕೀಯಗೊಳಿಸುವುದು ಪರಿಸ್ಥಿತಿಯನ್ನು ಇನ್ನಷ್ಟು ಬಿಗಡಾಯಿಸಬಹುದೇ ಹೊರತು, ಶಾಂತಿಯುತ ಹಾಗೂ ವಿವೇಚನಾಪೂರ್ಣ ಪ್ರತಿಕ್ರಿಯೆಗೆ ಪೂರಕ ಆಗುವುದಿಲ್ಲ ಎಂದು ಹೇಳಿದ್ದಾರೆ’ ಎಂದು ತಿಳಿಸಿದ್ದಾರೆ.‘ತಪ್ಪು ತಿಳಿವಳಿಕೆಯನ್ನು ಮಾತುಕತೆ ಮೂಲಕ ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಬಹುದು. ಹೀಗಾಗಿ, ಉದ್ದೇಶಿತ ಪ್ರತಿಭಟನೆ ಕೈಬಿಡಬೇಕು. ಸದ್ಯದ ಗೊಂದಲಮಯ ವಾತಾವರಣ ತಿಳಿಯಾದ ನಂತರ, ಸಾರ್ವಜನಿಕರ ಭಾವನೆಗಳಿಗೆ ಧಕ್ಕೆಯಾಗದಂತೆ ಅಧಿಕೃತ ಹೇಳಿಕೆ ಕೊಡಲಿದ್ದಾರೆ’ ಎಂದು ಮಾಹಿತಿ ನೀಡಿದ್ದಾರೆ.ಅರಮನೆ ಸರ್ಕಾರದ್ದು, ರಾಜರಿಗೆ ಉಳಿದುಕೊಳ್ಳಲು ಜಾಗ ಕೊಟ್ಟಿದ್ದೀವಷ್ಟೆ: ಯತೀಂದ್ರಅರಮನೆ ಜಾಗದ ವಿಚಾರದಲ್ಲಿ ನನ್ನ ಹೇಳಿಕೆಗೆ ಬದ್ಧ, ಕ್ಷಮೆ ಕೇಳಲ್ಲ: ಯತೀಂದ್ರ