ಮೈಸೂರು | ಎಂಐಟಿಯಲ್ಲಿ ‘ಹ್ಯಾಕ್ಮಿಟ್ಟನ್’: 120 ತಂಡ ಭಾಗಿ
ಮೈಸೂರು: ತಾಂಡವಪುರದ ಮಹಾರಾಜ ತಾಂತ್ರಿಕ ಸಂಸ್ಥೆ (ಎಂಐಟಿ)ಯಲ್ಲಿ ‘ಹ್ಯಾಕ್ಮಿಟ್ಟನ್ 3.0’– ರಾಷ್ಟ್ರಮಟ್ಟದ 24 ಗಂಟೆಗಳ ಹ್ಯಾಕಥಾನ್ ಆಯೋಜಿಸಲಾಯಿತು. ರಾಜ್ಯದ ವಿವಿಧ ಭಾಗಗಳಿಂದ 90 ಪದವಿ ಹಾಗೂ 30 ಡಿಪ್ಲೊಮಾ ಸೇರಿದಂತೆ ಒಟ್ಟು 120 ತಂಡಗಳು ಭಾಗವಹಿಸಿದ್ದವು.ಕಾಲೇಜಿನ ಕಂಪ್ಯೂಟರ್ ಸೈನ್ಸ್ ಅಂಡ್ ಎಂಜಿನಿಯರಿಂಗ್ (ಎಐ ಮತ್ತು ಎಂಎಲ್) ವಿಭಾಗದಿಂದ ವಿಗ್ಯಾನ್ಲ್ಯಾ

ಮೈಸೂರು: ತಾಂಡವಪುರದ ಮಹಾರಾಜ ತಾಂತ್ರಿಕ ಸಂಸ್ಥೆ (ಎಂಐಟಿ)ಯಲ್ಲಿ ‘ಹ್ಯಾಕ್ಮಿಟ್ಟನ್ 3.0’– ರಾಷ್ಟ್ರಮಟ್ಟದ 24 ಗಂಟೆಗಳ ಹ್ಯಾಕಥಾನ್ ಆಯೋಜಿಸಲಾಯಿತು. ರಾಜ್ಯದ ವಿವಿಧ ಭಾಗಗಳಿಂದ 90 ಪದವಿ ಹಾಗೂ 30 ಡಿಪ್ಲೊಮಾ ಸೇರಿದಂತೆ ಒಟ್ಟು 120 ತಂಡಗಳು ಭಾಗವಹಿಸಿದ್ದವು.ಕಾಲೇಜಿನ ಕಂಪ್ಯೂಟರ್ ಸೈನ್ಸ್ ಅಂಡ್ ಎಂಜಿನಿಯರಿಂಗ್ (ಎಐ ಮತ್ತು ಎಂಎಲ್) ವಿಭಾಗದಿಂದ ವಿಗ್ಯಾನ್ಲ್ಯಾಬ್ಸ್ ಇನ್ನೊವೇಷನ್ ಪ್ರೈವೇಟ್ ಲಿ. ಸಹಯೋಗ ಹಾಗೂ ಸಿನೆಫಿಯನ್ ಕಂಪನಿ ಸಹಭಾಗಿತ್ವದಲ್ಲಿ ನಡೆಸಲಾಯಿತು.ವಿಜೇತರಿಗೆ ₹1 ಲಕ್ಷ ನಗದು ಬಹುಮಾನ ಮೊತ್ತದ ಜೊತೆ ಇಂಟರ್ನ್ಶಿಪ್ ಅವಕಾಶ ಒದಗಿಸಲಾಗುವುದು ಎಂದು ತಿಳಿಸಲಾಯಿತು.ಮಹಾರಾಜ ಎಜುಕೇಷನ್ ಟ್ರಸ್ಟ್ ಜಂಟಿ ಕಾರ್ಯದರ್ಶಿ ಚೇತನ್ ಎಚ್.ಕೆ., ಕಂಪ್ಯೂಟರ್ ಸೈನ್ಸ್ ಅಂಡ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ರಂಜಿತ್ ಕೆ.ಎನ್., ಕಾಲೇಜಿನ ಪ್ರಾಂಶುಪಾಲ ವೈ.ಟಿ. ಕೃಷ್ಣೇಗೌಡ, ವಿಗ್ಯಾನ್ಲ್ಯಾಬ್ಸ್ ಬೆಳವಣಿಗೆ ಮತ್ತು ಪಾಲುದಾರಿಕೆ ವಿಭಾಗದ ನಿರ್ದೇಶಕ ಶಿವಾನಂದ ಸಾಲ್ಗಾಮೆ, ಮುಖ್ಯ ಮಾರುಕಟ್ಟೆ ಅಧಿಕಾರಿ ವಿಜಯಾನಂದ್ ಗುರುದೇವ್ ಮಾತನಾಡಿದರು.ಕಾಲೇಜಿನ ಸುನಿಲ್ ಸಿ., ಬೋಧಕ ಸಂಯೋಜಕ ಮಹಾದೇವ ಪ್ರಸಾದ್ ವೈ.ಎನ್. ಮತ್ತು ಮಾಲತಿ ಎಂ. ನಿರ್ವಹಿಸಿದರು.