ಚಿಣ್ಣರ ಕಲಾಶ್ರೀ ಶಿಬಿರ: ಭಾಗವಹಿಸಲು 9-16 ವರ್ಷದ ಮಕ್ಕಳಿಗೆ ಅವಕಾಶ
ವಿಜಯಪುರ: ರಾಜ್ಯಮಟ್ಟದ ಚಿಣ್ಣರ ಕಲಾಶ್ರೀ ಶಿಬಿರಕ್ಕೆ 9ರಿಂದ 16 ವರ್ಷದೊಳಗಿನ ಪ್ರತಿಭಾವಂತ ಮಕ್ಕಳನ್ನು ಆಯ್ಕೆ ಮಾಡಲು ಅಕ್ಟೋಬರ್ 29ರಂದು ಬೆಳಿಗ್ಗೆ 11 ಗಂಟೆಗೆ ನಗರದ ಜಿಲ್ಲಾ ಬಾಲಭವನದಲ್ಲಿ ಜಿಲ್ಲಾಮಟ್ಟದ ಸ್ಪರ್ಧೆ ಆಯೋಜಿಸಲಾಗಿದೆ.ಸೃಜನಾತ್ಮಕ ಕಲೆ: ಚಿತ್ರಕಲೆ, ಕರಕುಶಲ ಕಲೆ ಹಾಗೂ ಜೇಡಿಮಣ್ಣಿನ ಕಲೆ ವಿಭಾಗಗಳಲ್ಲಿ ಮಕ್ಕಳು ಕಡ್ಡಾಯವಾಗಿ ಭಾಗವಹಿಸಬೇಕು.ಸೃಜನಾತ್ಮಕ ಬರ

ವಿಜಯಪುರ: ರಾಜ್ಯಮಟ್ಟದ ಚಿಣ್ಣರ ಕಲಾಶ್ರೀ ಶಿಬಿರಕ್ಕೆ 9ರಿಂದ 16 ವರ್ಷದೊಳಗಿನ ಪ್ರತಿಭಾವಂತ ಮಕ್ಕಳನ್ನು ಆಯ್ಕೆ ಮಾಡಲು ಅಕ್ಟೋಬರ್ 29ರಂದು ಬೆಳಿಗ್ಗೆ 11 ಗಂಟೆಗೆ ನಗರದ ಜಿಲ್ಲಾ ಬಾಲಭವನದಲ್ಲಿ ಜಿಲ್ಲಾಮಟ್ಟದ ಸ್ಪರ್ಧೆ ಆಯೋಜಿಸಲಾಗಿದೆ.ಸೃಜನಾತ್ಮಕ ಕಲೆ: ಚಿತ್ರಕಲೆ, ಕರಕುಶಲ ಕಲೆ ಹಾಗೂ ಜೇಡಿಮಣ್ಣಿನ ಕಲೆ ವಿಭಾಗಗಳಲ್ಲಿ ಮಕ್ಕಳು ಕಡ್ಡಾಯವಾಗಿ ಭಾಗವಹಿಸಬೇಕು.ಸೃಜನಾತ್ಮಕ ಬರವಣಿಗೆ: ಕಥೆ, ಕವನ ಹಾಗೂ ಪ್ರಬಂಧ ಬರವಣಿಗೆ ವಿಭಾಗಗಳಲ್ಲಿ ಕಡ್ಡಾಯವಾಗಿ ಭಾಗವಹಿಸಬೇಕು.ಸೃಜನಾತ್ಮಕ ಪ್ರದರ್ಶನ ಕಲೆ: ಶಾಸ್ತ್ರೀಯ ನೃತ್ಯ, ಜಾನಪದ ನೃತ್ಯ, ಕರ್ನಾಟಕ ಹಾಗೂ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ, ವಾದ್ಯ ಸಂಗೀತ, ಸುಗಮ ಸಂಗೀತ, ಏಕಪಾತ್ರಾಭಿನಯ ಮತ್ತು ಯೋಗನೃತ್ಯ ಇವುಗಳಲ್ಲಿ ಯಾವುದಾದರೂ ಒಂದು ಕಲೆಯನ್ನು ಪ್ರದರ್ಶಿಸಲು ಅವಕಾಶವಿದೆ. ಗುಂಪು ಪ್ರದರ್ಶನಕ್ಕೆ ಅವಕಾಶವಿರುವುದಿಲ್ಲ.ವಿಜ್ಞಾನದಲ್ಲಿ ನೂತನ ಆವಿಷ್ಕಾರ: ವಿಜ್ಞಾನದ ಮಾದರಿ ಸಿದ್ಧಪಡಿಸಿ, ಅದರ ಕಾರ್ಯವೈಖರಿ ಹಾಗೂ ಮಹತ್ವವನ್ನು ವಿವರಿಸಬೇಕು. ಅಲ್ಲದೆ, ವಿಜ್ಞಾನ ಕ್ಷೇತ್ರಕ್ಕೆ ಸಂಬಂಧಿಸಿದಂತೆ ತೀರ್ಪುಗಾರರು ಕೇಳುವ ಪ್ರಶ್ನೆಗಳಿಗೆ ಉತ್ತರಿಸಬೇಕು.ಹೆಚ್ಚಿನ ಮಾಹಿತಿಗಾಗಿ ಮೊ. ಸಂಖ್ಯೆ 7760402239 ಸಂಪರ್ಕಿಸಬಹುದು.261028-26-753005848