MLC ಚುನಾವಣೆ: ಯೋಗಿ ಭದ್ರಕೋಟೆಯಲ್ಲಿ ಬಿಜೆಪಿಗೆ ಜಯ, ಮೋದಿ ಕ್ಷೇತ್ರದಲ್ಲಿ ಸೋಲು
ಲಖನೌ: ಉತ್ತರ ಪ್ರದೇಶದ 11 ವಿಧಾನ ಪರಿಷತ್ (ಎಂಎಲ್ಸಿ) ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 6 ಕ್ಷೇತ್ರಗಳಲ್ಲಿ ಜಯಗಳಿಸಿದ್ದರೆ, ಸಮಾಜವಾದಿ ಪಾರ್ಟಿ (ಎಸ್ಪಿ) 3 ಕ್ಷೇತ್ರಗಳಲ್ಲಿ ಗೆಲುವಿನ ನಗೆ ಬೀರಿದೆ.ಮತ ಎಣಿಕೆ ಮುಂದುವರಿದಿರುವ 2 ಕ್ಷೇತ್ರಗಳಲ್ಲಿ ಎಸ್ಪಿ ಅಭ್ಯರ್ಥಿಗಳು ಮುನ್ನಡೆ ಸಾಧಿಸಿದ್ದಾರೆ. ತಡರಾತ್ರಿ ವೇಳೆಗೆ ಅಂತಿಮ ಫಲಿತಾಂಶ ಹೊರಬೀಳುವ ನಿರೀಕ್ಷೆ

ಲಖನೌ: ಉತ್ತರ ಪ್ರದೇಶದ 11 ವಿಧಾನ ಪರಿಷತ್ (ಎಂಎಲ್ಸಿ) ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 6 ಕ್ಷೇತ್ರಗಳಲ್ಲಿ ಜಯಗಳಿಸಿದ್ದರೆ, ಸಮಾಜವಾದಿ ಪಾರ್ಟಿ (ಎಸ್ಪಿ) 3 ಕ್ಷೇತ್ರಗಳಲ್ಲಿ ಗೆಲುವಿನ ನಗೆ ಬೀರಿದೆ.ಮತ ಎಣಿಕೆ ಮುಂದುವರಿದಿರುವ 2 ಕ್ಷೇತ್ರಗಳಲ್ಲಿ ಎಸ್ಪಿ ಅಭ್ಯರ್ಥಿಗಳು ಮುನ್ನಡೆ ಸಾಧಿಸಿದ್ದಾರೆ. ತಡರಾತ್ರಿ ವೇಳೆಗೆ ಅಂತಿಮ ಫಲಿತಾಂಶ ಹೊರಬೀಳುವ ನಿರೀಕ್ಷೆಯಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.ಲಖನೌ, ಮೀರತ್-ಸಹಾರನ್ಪುರ, ಬರೇಲಿ-ಮೊರಾದಾಬಾದ್ ಮತ್ತು ಗೋರಖ್ಪುರ-ಫೈಜಾಬಾದ್ ಶಿಕ್ಷಕರ ಕ್ಷೇತ್ರಗಳನ್ನು ಬಿಜೆಪಿ ಗೆದ್ದುಕೊಂಡಿದ್ದರೆ, ವಾರಣಾಸಿ ಮತ್ತು ಆಗ್ರಾ ಶಿಕ್ಷಕರ ಕ್ಷೇತ್ರಗಳಲ್ಲಿ ಎಸ್ಪಿ ವಿಜಯ ಪತಾಕೆ ಹಾರಿಸಿದೆ.ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ತವರು ಕ್ಷೇತ್ರವಾದ ಗೋರಖ್ಪುರದಲ್ಲಿ ಕಮಲ ಪಡೆಯ ಅಭ್ಯರ್ಥಿ ಧ್ರುವ ತ್ರಿಪಾಠಿ ಅವರು ಪಕ್ಷೇತರ ಅಭ್ಯರ್ಥಿ ರಾಜೀವ್ ಯಾದವ್ ವಿರುದ್ಧ 307 ಮತಗಳ ಕಡಿಮೆ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಆದಾಗ್ಯೂ, ಪ್ರಧಾನಿ ನರೇಂದ್ರ ಮೋದಿ ಅವರ ಲೋಕಸಭಾ ಕ್ಷೇತ್ರವಾದ ವಾರಾಣಸಿಯಲ್ಲಿ ಬಿಜೆಪಿಗೆ ಹಿನ್ನಡೆಯಾಗಿದೆ. ಎಸ್ಪಿ ಅಭ್ಯರ್ಥಿ ಲಾಲ್ ಬಹದ್ದೂರ್ ಯಾದವ್ ಅವರು ಕಮಲ ಪಡೆಯ ಪ್ರಮೋದ್ ಮಿಶ್ರಾ ವಿರುದ್ಧ 5,000ಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಜೊತೆಗೆ ವಾರಾಣಸಿಯ ಪದವೀಧರ ಕ್ಷೇತ್ರದಲ್ಲಿ ಎಸ್ಪಿ ಅಭ್ಯರ್ಥಿ ಆಶುತೋಷ್ ಸಿನ್ಹಾ ಮುನ್ನಡೆಯಲ್ಲಿದ್ದಾರೆ.ಆಗ್ರಾ ಮತ್ತು ಮೀರತ್-ಸಹಾರನ್ಪುರ ಪದವೀಧರ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದರೆ, ಅಲಹಾಬಾದ್-ಜಾನ್ಸಿಯಿಂದ ಎಸ್ಪಿ ವಿಜಯಶಾಲಿಯಾಗಿದೆ. ಅಲ್ಲದೆ ಲಖನೌ ಪದವೀಧರ ಕ್ಷೇತ್ರದಲ್ಲೂ ಎಸ್ಪಿ ಮುನ್ನಡೆಯಲ್ಲಿದೆ.ವಾರಾಣಸಿಯಲ್ಲಿ ತಮ್ಮ ಪಕ್ಷದ ಗೆಲುವನ್ನು ಎಸ್ಪಿ ಅಧ್ಯಕ್ಷ ಅಖಿಲೇಶ್ ಯಾದವ್ ಶ್ಲಾಘಿಸಿದ್ದಾರೆ. ‘ಈ ಫಲಿತಾಂಶವು ಬಿಜೆಪಿಯ ವೈಫಲ್ಯಗಳ ರೋಡ್ ಶೋ ಆಗಿದೆ’ ಎಂದು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.ಬಿಜೆಪಿಗರು ಚುನಾವಣಾ ಫಲಿತಾಂಶ ಬದಲಿಸಲು ಯಾವ ಹಂತಕ್ಕಾದರೂ ಹೋಗುತ್ತಾರೆ ಎಂದಿರುವ ಅಖಿಲೇಶ್, ಜಾಗರೂಕರಾಗಿರುವಂತೆ ಪಕ್ಷದ ಕಾರ್ಯಕರ್ತರಿಗೆ ಸೂಚಿಸಿದ್ದಾರೆ.ಎಸ್ಪಿ ಪರ ಮೃದು ಧೋರಣೆ ಹೊಂದಿರುವ ಅಧಿಕಾರಿಗಳಿಂದ ಅಕ್ರಮ ನಡೆದಿದೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ.ಉತ್ತರ ಪ್ರದೇಶದ ಉಪ ಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಮಾತನಾಡಿ, ‘ಪಕ್ಷದ ನಿರೀಕ್ಷೆಗೆ ತಕ್ಕಂತೆ ವಿಧಾನಪರಿಷತ್ ಚುನಾವಣೆ ಫಲಿತಾಂಶ ಬಂದಿಲ್ಲ. ವಾರಾಣಸಿ ಫಲಿತಾಂಶವನ್ನು ಪರೋಕ್ಷವಾಗಿ ಉಲ್ಲೇಖಿಸಿದ ಅವರು, ಎಸ್ಪಿ ಗೆಲ್ಲಬಾರದು ಎಂದುಕೊಂಡಿದ್ದ ಕಡೆಯಲ್ಲೆಲ್ಲಾ ಗೆಲುವು ಸಾಧಿಸಿದೆ’ ಎಂದಿದ್ದಾರೆ.MLC ಚುನಾವಣೆಯಲ್ಲಿ ‘ಕೈ’ ಶೂನ್ಯ ಸಾಧನೆ: ದುರ್ಬಿನ್ ಹಾಕಿ ಹುಡುಕಬೇಕೆಂದ ಮೋದಿ