ಕರ್ನಾಟಕಕ್ಕೆ ಮೊದಲ ಜಯದ ಕನವರಿಕೆ
ಮೈಸೂರು: ಅನೀಶ್ವರ್ ಗೌತಮ್ ಚೊಚ್ಚಲ ಶತಕದ ಬಲದಿಂದ ಮೊದಲ ಇನಿಂಗ್ಸ್ನಲ್ಲಿ ಬೃಹತ್ ಮೊತ್ತ ಪೇರಿಸಿದ ಕರ್ನಾಟಕವು ಜಯದ ಕನವರಿಕೆಯಲ್ಲಿದೆ. ಮೂರನೇ ದಿನದಾಟದ ಅಂತ್ಯಕ್ಕೆ ತ್ರಿಪುರಾ 198 ರನ್ ಹಿನ್ನಡೆ ಅನುಭವಿಸಿದ್ದು, ಇನ್ನು 7 ವಿಕೆಟ್ ಉಳಿಸಿಕೊಂಡಿದೆ.ಇಲ್ಲಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರಣಜಿ ಎಲೀಟ್ ಬಿ ಗುಂಪಿನ ಪಂದ್ಯದ ಮ

ಮೈಸೂರು: ಅನೀಶ್ವರ್ ಗೌತಮ್ ಚೊಚ್ಚಲ ಶತಕದ ಬಲದಿಂದ ಮೊದಲ ಇನಿಂಗ್ಸ್ನಲ್ಲಿ ಬೃಹತ್ ಮೊತ್ತ ಪೇರಿಸಿದ ಕರ್ನಾಟಕವು ಜಯದ ಕನವರಿಕೆಯಲ್ಲಿದೆ. ಮೂರನೇ ದಿನದಾಟದ ಅಂತ್ಯಕ್ಕೆ ತ್ರಿಪುರಾ 198 ರನ್ ಹಿನ್ನಡೆ ಅನುಭವಿಸಿದ್ದು, ಇನ್ನು 7 ವಿಕೆಟ್ ಉಳಿಸಿಕೊಂಡಿದೆ.ಇಲ್ಲಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರಣಜಿ ಎಲೀಟ್ ಬಿ ಗುಂಪಿನ ಪಂದ್ಯದ ಮೂರನೇ ದಿನವಾದ ಬುಧವಾರ ಕರ್ನಾಟಕ 9 ವಿಕೆಟ್ಗೆ 490 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು. ಕೆಳಕ್ರಮಾಂಕದಲ್ಲಿನ ಉತ್ತಮ ಜೊತೆಯಾಟಗಳು ಬಲ ತುಂಬಿದವು. 296 ರನ್ಗಳ ಹಿನ್ನಡೆಯೊಂದಿಗೆ ಎರಡನೇ ಇನಿಂಗ್ಸ್ ಆರಂಭಿಸಿದ ತ್ರಿಪುರಾ ದಿನದಾಟದ ಅಂತ್ಯಕ್ಕೆ 3 ವಿಕೆಟ್ ನಷ್ಟಕ್ಕೆ 98 ರನ್ ಗಳಿಸಿದೆ. ಶ್ರೀದಮ್ ಪಾಲ್ (30) ಹಾಗೂ ಪರ್ವೇಜ್ ಸುಲ್ತಾನ್ (0) ಕೊನೆಯ ದಿನಕ್ಕೆ ಆಟ ಉಳಿಸಿಕೊಂಡಿದ್ದಾರೆ.ಶ್ರೇಯಸ್ ಮೋಡಿ:ಎರಡನೇ ಇನಿಂಗ್ಸ್ನಲ್ಲಿ ತಿರುಗೇಟು ನೀಡುವ ತ್ರಿಪುರಾ ಬ್ಯಾಟರ್ಗಳ ಪ್ರಯತ್ನಕ್ಕೆ ಎದುರಾಳಿ ತಂಡದ ನಾಯಕ ಶ್ರೇಯಸ್ ಗೋಪಾಲ್ (25ಕ್ಕೆ3 ವಿಕೆಟ್) ಅಡ್ಡಿಯಾದರು. ಆರಂಭಿಕ ಋತುರಾಜ್ ಘೋಷ್ ರಾಯ್ (13) 11ನೇ ಓವರ್ನಲ್ಲಿ ಶ್ರೇಯಸ್ ಗೋಪಾಲ್ ಎಸೆತದಲ್ಲಿ ಮಿಡ್ ಆನ್ನಲ್ಲಿ ರೋಹನ್ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಬಿಕ್ರಂ ಕುಮಾರ್ ದಾಸ್ (26) ಅವರಿಗೆ 19ನೇ ಓವರ್ನಲ್ಲಿ ಶ್ರೇಯಸ್ ಪೆವಿಲಿಯನ್ ದಾರಿ ತೋರಿಸಿದರು. ಭರ್ಜರಿ ಹೊಡೆತಕ್ಕೆ ಯತ್ನಿಸಿದ ಬಿಕ್ರಂ ಡೀಪ್ ಮಿಡ್ವಿಕೆಟ್ನಲ್ಲಿ ಮಯಂಕ್ ಅಗರವಾಲ್ಗೆ ಕ್ಯಾಚಿತ್ತರು.36ನೇ ಓವರ್ನಲ್ಲಿ ಮತ್ತೆ ಶ್ರೇಯಸ್ ಪ್ರವಾಸಿ ಆಟಗಾರರಿಗೆ ಆಘಾತ ನೀಡಿದರು. ಉತ್ತಮವಾಗಿ ಆಡುತ್ತಿದ್ದ ಬಾಬುಲ್ ಡೇ (28) ಅವರನ್ನು ಎಲ್ಬಿಡಬ್ಲ್ಯು ಬಲೆಗೆ ಕೆಡವಿ, ಬಾಬುಲ್–ಶ್ರೀದಮ್ ಪಾಲ್ ನಡುವಿನ 50 ರನ್ಗಳ ಜೊತೆಯಾಟ ಮುರಿದರು.ಅನೀಶ್ವರ್ ಶತಕದ ಸೊಬಗುಕರ್ನಾಟಕ ಪರ ಮೊದಲ ಇನಿಂಗ್ಸ್ನಲ್ಲಿ ಮಂಗಳವಾರ 33 ರನ್ ಗಳಿಸಿ ಅಜೇಯರಾಗಿ ಉಳಿದಿದ್ದ ಅನೀಶ್ವರ್ ಗೌತಮ್ ಬುಧವಾರ ರಣಜಿಯಲ್ಲಿ ತಮ್ಮ ಮೊದಲ ಶತಕದ (100, 201ಎ, 4X5, 6X2) ಮೂಲಕ ಸೊಗಸಾದ ಇನಿಂಗ್ಸ್ ಕಟ್ಟಿದರು. ಪಿಚ್ನ ಮರ್ಮ ಅರಿತು ತಾಳ್ಮೆಯ ಆಟವಾಡಿದರು.ಎಂಟನೇ ವಿಕೆಟ್ಗೆ ಅನೀಶ್ವರ್ ಹಾಗೂ ಎಲ್. ಮನ್ವಂತ್ಕುಮಾರ್ ( 51; 71 ಎ, 4X6, 6X2) ನಡುವಿನ 82 ರನ್ಗಳ ಜೊತೆಯಾಟ ಮೂಡಿಬಂತು. ಬಿರುಸಿನ ಹೊಡೆತಗಳ ಮೂಲಕ ರನ್ ವೇಗ ಹೆಚ್ಚಿಸಿದ ಮನ್ವಂತ್, ಮಿಡ್ ಆಫ್ನಲ್ಲಿ ಸಿಕ್ಸರ್ ಮೂಲಕ ಅರ್ಧಶತಕ ಪೂರೈಸಿದರು. ಆದರೆ, 114ನೇ ಓವರ್ನಲ್ಲಿ ಸಂದೀಪ್ ಸರ್ಕಾರ್ ಎಸೆತವನ್ನು ಮಿಡ್ ವಿಕೆಟ್ನತ್ತ ಆಡುವ ಯತ್ನದಲ್ಲಿ ಎಲ್ಬಿಡಬ್ಲ್ಯು ಬಲೆಗೆ ಬಿದ್ದರು.ಶತಕದ ಜೊತೆಯಾಟಅನೀಶ್ವರ್ ಹಾಗೂ ಹತ್ತನೇ ಆಟಗಾರನಾಗಿ ಕಣಕ್ಕಿಳಿದ ರಿತೇಶ್ ಭಟ್ಕಳ (74 ; 100 ಎ, 4X11, 6X1) ಶತಕದ ಜೊತೆಯಾಟವಾಡಿದರು. ಈ ಜೋಡಿ 177 ಎಸೆತಗಳಲ್ಲಿ 107 ರನ್ ಕಲೆಹಾಕಿ ತಂಡವನ್ನು ಬೃಹತ್ ಮೊತ್ತದತ್ತ ಕೊಂಡೊಯ್ಯಿತು.143ನೇ ಓವರ್ನಲ್ಲಿ ಪರ್ವೇಜ್ ಎಸೆತದಲ್ಲಿ ಒಂದು ರನ್ ಮೂಲಕ ಅನೀಶ್ವರ್ ಶತಕ ಪೂರ್ಣಗೊಳಿಸಿದರು. ಆದರೆ, ಈ ಸಂಭ್ರಮ ಹೆಚ್ಚು ಕಾಲ ಉಳಿಯಲಿಲ್ಲ. ಮರು ಎಸೆತದಲ್ಲೇ ಸಂತು ಸರ್ಕಾರ್ಗೆ ಕ್ಯಾಚಿತ್ತು ನಿರ್ಗಮಿಸಿದರು. ಕೊನೆಯ ಕ್ರಮಾಂಕದಲ್ಲೂ ಅಬ್ಬರದ ಆಟದ ಮೂಲಕ ರಿತೇಶ್ ರಂಜಿಸಿದರು. ಅವರೊಟ್ಟಿಗೆ ಶಿಖರ್ ಶೆಟ್ಟಿ (1) ಅಜೇಯರಾಗಿ ಉಳಿದರು.ಸಂಕ್ಷಿಪ್ತ ಸ್ಕೋರುಮೊದಲ ಇನಿಂಗ್ಸ್: ತ್ರಿಪುರಾ: 194. ಕರ್ನಾಟಕ: 144 ಓವರುಗಳಲ್ಲಿ 9 ವಿಕೆಟ್ಗೆ 490 ಡಿಕ್ಲೇರ್ (ಅನೀಶ್ವರ್ ಗೌತಮ್ 100, ರಿತೇಶ್ ಭಟ್ಕಳ ಔಟಾಗದೇ 74, ಎಲ್. ಮನ್ವಂತ್ಕುಮಾರ್ 51. ಪರ್ವೇಜ್ ಸುಲ್ತಾನ್ 94ಕ್ಕೆ 3, ಸಂದೀಪ್ ಸರ್ಕಾರ್ 147ಕ್ಕೆ 3). ಎರಡನೇ ಇನಿಂಗ್ಸ್: ತ್ರಿಪುರಾ: 38 ಓವರುಗಳಲ್ಲಿ 3 ವಿಕೆಟ್ಗೆ 98 (ಬಾಬುಲ್ ಡೇ 28, ಬಿಕ್ರಂಕುಮಾರ್ ದಾಸ್ 26, ಶ್ರೀದಮ್ ಪಾಲ್ ಔಟಾಗದೇ 30. ಶ್ರೇಯಸ್ ಗೋಪಾಲ್ 25ಕ್ಕೆ3)ಕರ್ನಾಟಕ ತಂಡದ ರಿತೇಶ್ ಭಟ್ಕಳ್ ಹಾಗೂ ಅನೀಶ್ವರ್ ಗೌತಮ್ ಜೋಡಿ – ಪ್ರಜಾವಾಣಿ ಚಿತ್ರ/ಅನೂಪ್ ರಾಘ .ಟಿ.ಕರ್ನಾಟಕ ಅನೀಶ್ವರ್ ಗೌತಮ್ ಶತಕ ಸಂಭ್ರಮ –ಪ್ರಜಾವಾಣಿ ಚಿತ್ರ/ಅನೂಪ್ ರಾಘ.ಟಿ. ಅರ್ಧಶತಕ ದಾಖಲಿಸಿದ ಎಲ್. ಮನ್ವಂತ್ ಕುಮಾರ್– ಪ್ರಜಾವಾಣಿ ಚಿತ್ರ/ಅನೂಪ್ ರಾಘ.ಟಿ.