ಕರ್ನಾಟಕದಲ್ಲಿ ‘ರಾಮಾಯಣ’ ಮಾರ್ನಿಂಗ್ ಶೋ ಟಿಕೆಟ್ ಬುಕಿಂಗ್ ಆರಂಭ
ಬಾಲಿವುಡ್ ನಿರ್ದೇಶಕ ನಿತೀಶ್ ತಿವಾರಿ ನಿರ್ದೇಶನದ, ನಟ ರಣಬೀರ್ ಕಪೂರ್, ಯಶ್ ಹಾಗೂ ಸಾಯಿ ಪಲ್ಲವಿ ಅಭಿನಯದ ಬಹುನಿರೀಕ್ಷಿತ ‘ರಾಮಾಯಣ’ ಸಿನಿಮಾ ನವೆಂಬರ್ 5ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ.ಕರ್ನಾಟಕದಲ್ಲಿ ಮಾರ್ನಿಂಗ್ ಶೋಗಾಗಿ ಮುಂಗಡ ಟಿಕೆಟ್ ಬುಕಿಂಗ್ ಇಂದು (ಅಕ್ಟೋಬರ್ 28) ಬೆಳಿಗ್ಗೆ 10 ಗಂಟೆಯಿಂದ ಆರಂಭಗೊಂಡಿದೆ. ಸಿನಿಮಾ ಬಿಡುಗಡೆಗೂ ಮುನ್ನವೇ ಪ್ರೇಕ್ಷಕರಲ್ಲ

ಬಾಲಿವುಡ್ ನಿರ್ದೇಶಕ ನಿತೀಶ್ ತಿವಾರಿ ನಿರ್ದೇಶನದ, ನಟ ರಣಬೀರ್ ಕಪೂರ್, ಯಶ್ ಹಾಗೂ ಸಾಯಿ ಪಲ್ಲವಿ ಅಭಿನಯದ ಬಹುನಿರೀಕ್ಷಿತ ‘ರಾಮಾಯಣ’ ಸಿನಿಮಾ ನವೆಂಬರ್ 5ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ.ಕರ್ನಾಟಕದಲ್ಲಿ ಮಾರ್ನಿಂಗ್ ಶೋಗಾಗಿ ಮುಂಗಡ ಟಿಕೆಟ್ ಬುಕಿಂಗ್ ಇಂದು (ಅಕ್ಟೋಬರ್ 28) ಬೆಳಿಗ್ಗೆ 10 ಗಂಟೆಯಿಂದ ಆರಂಭಗೊಂಡಿದೆ. ಸಿನಿಮಾ ಬಿಡುಗಡೆಗೂ ಮುನ್ನವೇ ಪ್ರೇಕ್ಷಕರಲ್ಲಿ ಭಾರಿ ಕುತೂಹಲ ಮೂಡಿಸಿದ್ದು, ದೊಡ್ಡ ಪರದೆಯಲ್ಲಿ ಈ ಮಹಾಕಾವ್ಯವನ್ನು ಕಣ್ಣುಂಬಿಕೊಳ್ಳಲು ಅಭಿಮಾನಿಗಳು ಕಾತರರಾಗಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಅವರು ಚಿತ್ರದಲ್ಲಿ ರಾವಣನ ಪಾತ್ರದಲ್ಲಿ ಅಭಿನಯಿಸುವುದರ ಜೊತೆಗೆ, ನಿರ್ಮಾಣದಲ್ಲೂ ಪಾಲುದಾರರಾಗಿದ್ದಾರೆ. ಯಶ್ ಅವರ ‘ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್’ ಸಂಸ್ಥೆಯ ವಿತರಣಾ ವಿಭಾಗವೇ ಕರ್ನಾಟಕದಲ್ಲಿ ಈ ಚಿತ್ರದ ವಿತರಣೆಯ ಜವಾಬ್ದಾರಿಯನ್ನು ವಹಿಸಿಕೊಂಡಿದೆ.ಈ ಪೌರಾಣಿಕ ಸಿನಿಮಾದಲ್ಲಿ ರವಿ ದುಬೆ, ಸನ್ನಿ ಡಿಯೋಲ್, ಅರುಣ್ ಗೋವಿಲ್, ಲಾರಾ ದತ್ತಾ, ರಕುಲ್ ಪ್ರೀತ್ ಸಿಂಗ್, ವಿವೇಕ್ ಒಬೆರಾಯ್ ಹಾಗೂ ಕುನಾಲ್ ಕಪೂರ್ ಮುಂತಾದ ತಾರಾಗಣವಿದೆ.ಹಿಂದಿ, ತಮಿಳು, ತೆಲುಗು, ಕನ್ನಡ ಹಾಗೂ ಮಲಯಾಳಂ ಭಾಷೆಗಳಲ್ಲಿ ಜಾಗತಿಕವಾಗಿ ಈ ಸಿನಿಮಾ ತೆರೆಕಾಣಲಿದೆ. ಚಿತ್ರದ ಎರಡನೇ ಭಾಗವು 2027ರ ದೀಪಾವಳಿ ವೇಳೆಗೆ ಬಿಡುಗಡೆಯಾಗುವ ಸಾಧ್ಯತೆಯಿದೆ.ಮೌಲ್ಯಗಳ ಮಹತ್ವ ಸಾರಿದ ಮಹಾಕಾವ್ಯ ರಾಮಾಯಣ‘ರಾಮಾಯಣ ಜೀವನಕ್ಕೆ ಮಾರ್ಗದರ್ಶಿ’ ಎಂದು ಪ್ರಾಧ್ಯಾಪಕ ಎಸ್.ಬಿ. ಜಾಧವ್ ಹೇಳಿದರು ‘ರಾಮಾಯಣ’ ಸಿನಿಮಾ ಬಿಡುಗಡೆಯಾಗುತ್ತಿರುವ ಹಿನ್ನೆಲೆಯಲ್ಲಿ ಹಾಗೂ ಐಮ್ಯಾಕ್ಸ್ ಚಿತ್ರಮಂದಿರಗಳ ಅಭಾವದಿಂದಾಗಿ ‘ಗಾಡ್ಜಿಲ್ಲಾ ಮೈನಸ್ ಜೀರೋ’ ಸಿನಿಮಾದ ಭಾರತದ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿದೆ.