ಗುಲಾಬಿ ಮಾರ್ಗ: ಕಾಳೇನ ಅಗ್ರಹಾರದಿಂದ ತಾವರೆಕೆರೆವರೆ; ಸಿಎಂಆರ್ಎಸ್ ಅನುಮತಿ
ಬೆಂಗಳೂರು: ಮೆಟ್ರೊ ರೈಲ್ವೆ ಸುರಕ್ಷತಾ ಆಯೋಗವು (ಸಿಎಂಆರ್ಎಸ್) ನಮ್ಮ ಮೆಟ್ರೊ ಗುಲಾಬಿ ಮಾರ್ಗದ ಎತ್ತರಿಸಿದ ವಿಭಾಗದಲ್ಲಿ ಮೆಟ್ರೊ ಸಂಚಾರಕ್ಕೆ ಅನುಮೋದನೆ ನೀಡಿದೆ.ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗಿನ 7.5 ಕಿ.ಮೀ. ಎತ್ತರಿಸಿದ ಮಾರ್ಗದಲ್ಲಿ ಸಿಎಂಆರ್ಎಸ್ ಆಯುಕ್ತ ವಿ. ವೆಂಕಟಸುಬ್ರಮಣಿಯನ್ ನೇತೃತ್ವದ ತಂಡವು ಅ.6ರಿಂದ 8ರವರೆಗೆ ಮೂರುದಿನ ವಿವಿಧ ಪರೀಕ್ಷೆ

ಬೆಂಗಳೂರು: ಮೆಟ್ರೊ ರೈಲ್ವೆ ಸುರಕ್ಷತಾ ಆಯೋಗವು (ಸಿಎಂಆರ್ಎಸ್) ನಮ್ಮ ಮೆಟ್ರೊ ಗುಲಾಬಿ ಮಾರ್ಗದ ಎತ್ತರಿಸಿದ ವಿಭಾಗದಲ್ಲಿ ಮೆಟ್ರೊ ಸಂಚಾರಕ್ಕೆ ಅನುಮೋದನೆ ನೀಡಿದೆ.ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗಿನ 7.5 ಕಿ.ಮೀ. ಎತ್ತರಿಸಿದ ಮಾರ್ಗದಲ್ಲಿ ಸಿಎಂಆರ್ಎಸ್ ಆಯುಕ್ತ ವಿ. ವೆಂಕಟಸುಬ್ರಮಣಿಯನ್ ನೇತೃತ್ವದ ತಂಡವು ಅ.6ರಿಂದ 8ರವರೆಗೆ ಮೂರುದಿನ ವಿವಿಧ ಪರೀಕ್ಷೆಗಳನ್ನು ನಡೆಸಿತ್ತು. ಕೆಲವು ಬದಲಾವಣೆಗಳನ್ನು ಮಾಡಲು ಬಿಎಂಆರ್ಸಿಎಲ್ಗೆ ಸೂಚಿಸಿತ್ತು.ಆಯೋಗ ತಿಳಿಸಿದ ಲೋಪಗಳನ್ನು ಸರಿಪಡಿಸಿ ಬಿಎಂಆರ್ಸಿಎಲ್ ವರದಿ ಸಲ್ಲಿಸಿತ್ತು. ವರದಿ ಪರಿಶೀಲಿಸಿದ ಬಳಿಕ ಬುಧವಾರ ಅನುಮೋದನೆ ನೀಡಿದೆ.ಯಾವುದೇ ಮೆಟ್ರೊ ಮಾರ್ಗಗಳಲ್ಲಿ ಮೆಟ್ರೊ ಸಂಚರಿಸಲು ಅಂತಿಮ ಅನುಮೋದನೆಯನ್ನು ಸಿಎಂಆರ್ಎಸ್ ನೀಡಬೇಕು. ಇದೀಗ ಅನುಮೋದನೆ ಪಡೆಯಲಾಗಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರವು ನಿಗದಿ ಮಾಡಿದ ದಿನ ಉದ್ಘಾಟನೆಗೊಳ್ಳಲಿದೆ. ನವೆಂಬರ್ ಎರಡನೇ ವಾರದ ಅಂತ್ಯಕ್ಕೆ ಮೆಟ್ರೊ ಸಂಚಾರಕ್ಕೆ ಚಾಲನೆ ದೊರೆಯುವ ಸಾಧ್ಯತೆ ಇದೆ ಎಂದು ಬಿಎಂಆರ್ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.ವಿಳಂಬ: 2019ರಲ್ಲಿ ಆರಂಭವಾಗಿರುವ ಗುಲಾಬಿ ಮಾರ್ಗದ ಕಾಮಗಾರಿ 2023ರಲ್ಲಿ ಮುಕ್ತಾಯವಾಗಬೇಕಿತ್ತು. ಆದರೆ, ಕೋವಿಡ್ ಇನ್ನಿತರ ಕಾರಣದಿಂದ ನಿಧಾನಗತಿಯಲ್ಲಿ ಕಾಮಗಾರಿ ಸಾಗಿತ್ತು. 2024ಕ್ಕೆ ಪೂರ್ಣಗೊಳಿಸುವ ಗುರಿ ಮರುನಿಗದಿಯಾಗಿತ್ತು. ಆ ನಂತರ 2025ರ ಅಂತ್ಯಕ್ಕೆ ಪಾರ್ಶ್ವವಾಗಿ ಎತ್ತರಿಸಿದ ಮಾರ್ಗದಲ್ಲಿ ಸಂಚಾರ ಆಂಭಿಸುವ ಗುರಿ ಇಟ್ಟುಕೊಳ್ಳಲಾಗಿತ್ತು. 2026ರ ಮೇಗೆ ಗಡುವು ವಿಸ್ತರಣೆ ಆಗಿತ್ತು. ಕೊನೆಗೂ ಇನ್ನೆರಡು ವಾರಗಳಲ್ಲಿ ಎತ್ತರಿಸಿದ ಮಾರ್ಗದಲ್ಲಿ ಮೆಟ್ರೊ ಸಂಚರಿಸುವುದು ಖಚಿತವಾಗಿದೆ.ನಾಗವಾರದಿಂದ ಬನ್ನೇರುಘಟ್ಟ ರಸ್ತೆಯಲ್ಲಿರುವ ಕಾಳೇನ ಅಗ್ರಹಾರದವರೆಗೆ ಸುಮಾರು 21 ಕಿಲೋಮೀಟರ್ ದೂರದ ಗುಲಾಬಿ ಮಾರ್ಗದಲ್ಲಿ ಎತ್ತರಿಸಿದ ಮಾರ್ಗ 7.5 ಕಿ.ಮೀ., ಸುರಂಗ ಮಾರ್ಗ 13.5 ಕಿ.ಮೀ. ಇದೆ.ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿನಮ್ಮ ಮೆಟ್ರೊ ಗುಲಾಬಿ ಮಾರ್ಗದ ಉದ್ಘಾಟನೆಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ನವೆಂಬರ್ 15ರಂದು ಬೆಂಗಳೂರಿಗೆ ಬರಲಿದ್ದಾರೆ. ಸಂತಸದ ವಿಚಾರ: ಕೃಷ್ಣ ಬೈರೇಗೌಡ ಮೆಟ್ರೊ ರೈಲ್ವೆ ಸುರಕ್ಷರಾ ಆಯುಕ್ತರು ಗುಲಾಬಿ ಮಾರ್ಗದಲ್ಲಿ ಮೆಟ್ರೊ ಸಂಚಾರಕ್ಕೆ ಅನುಮತಿ ನೀಡಿರುವುದು ಸಂತಸದ ಸಂಗತಿ ಎಂದು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ. ‘ಸುದೀರ್ಘ ಪ್ರಯತ್ನದ ನಂತರ ನಮಗೆ ಈಗ ಸುರಕ್ಷತಾ ಮಂಜೂರಾತಿ ದೊರೆತಿದೆ. ಕೇಂದ್ರ ಸರ್ಕಾರವು ಉದ್ಘಾಟನೆಗೆ ದಿನಾಂಕವನ್ನು ನೀಡಿದ ತಕ್ಷಣವೇ ಸಾರ್ವಜನಿಕ ಸೇವೆಯನ್ನು ಪ್ರಾರಂಭಿಸಲು ನಾವು ಸಿದ್ಧರಾಗಿದ್ದೇವೆ. ದಿನಾಂಕ ನಿಗದಿಗೆ ಕೋರಿ ನಾವು ಈಗಾಗಲೇ ಪತ್ರ ಬರೆದಿದ್ದೇವೆ. ನಮ್ಮ ಮೆಟ್ರೊ ಜಾಲವನ್ನು ವಿಸ್ತರಿಸುವ ಮೂಲಕ ಜನರಿಗೆ ಮತ್ತಷ್ಟು ಉತ್ತಮ ಸೇವೆ ನೀಡುವತ್ತ ಇನ್ನೊಂದು ಹೆಜ್ಜೆಯಿಡಲು ಹಾಗೂ ಎತ್ತರಿಸಿದ ವಿಭಾಗವನ್ನು ಉದ್ಘಾಟಿಸಲು ಕಾತರರಾಗದ್ದೇವೆ’ ಎಂದು ಅವರು ಹೇಳಿದ್ದಾರೆ.