ಮತ ಕಳವು ಸಂಕಥನ ತಿರಸ್ಕರಿಸಿದ ಮತದಾರ: ಬಿಎಸ್ವೈ
ಬೆಂಗಳೂರು: ‘ಮತ ಕಳವು ಕುರಿತ ಕಾಂಗ್ರೆಸ್ಸಿನ ಸುಳ್ಳಿನ ಸಂಕಥನವನ್ನು ಪ್ರಜ್ಞಾವಂತ ಮತದಾರರು ವಿಧಾನಪರಿಷತ್ತಿನ ಚುನಾವಣೆ ಮೂಲಕ ತಿರಸ್ಕರಿಸಿದ್ದಾರೆ. ಇವಿಎಂ ಇರಲಿ ಮತಪತ್ರದ ಮೂಲಕವೇ ಚುನಾವಣೆ ನಡೆಯಲಿ ಎನ್ಡಿಎ ಗೆಲುವು ಶತಃಸಿದ್ಧ’ ಎಂದು ಬಿಜೆಪಿ ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಹೇಳಿದರು.‘ವಿಧಾನಪರಿಷತ್ ಫಲಿತಾಂಶವು ರಾಜ್ಯ ಸರ್ಕಾರದ ವಿರುದ್ಧದ

ಬೆಂಗಳೂರು: ‘ಮತ ಕಳವು ಕುರಿತ ಕಾಂಗ್ರೆಸ್ಸಿನ ಸುಳ್ಳಿನ ಸಂಕಥನವನ್ನು ಪ್ರಜ್ಞಾವಂತ ಮತದಾರರು ವಿಧಾನಪರಿಷತ್ತಿನ ಚುನಾವಣೆ ಮೂಲಕ ತಿರಸ್ಕರಿಸಿದ್ದಾರೆ. ಇವಿಎಂ ಇರಲಿ ಮತಪತ್ರದ ಮೂಲಕವೇ ಚುನಾವಣೆ ನಡೆಯಲಿ ಎನ್ಡಿಎ ಗೆಲುವು ಶತಃಸಿದ್ಧ’ ಎಂದು ಬಿಜೆಪಿ ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಹೇಳಿದರು.‘ವಿಧಾನಪರಿಷತ್ ಫಲಿತಾಂಶವು ರಾಜ್ಯ ಸರ್ಕಾರದ ವಿರುದ್ಧದ ಜನಾಕ್ರೋಶಕ್ಕೆ ಹಿಡಿದ ಕನ್ನಡಿ’ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದರು.‘ಸರ್ಕಾರದ ಖಜಾನೆ ಲೂಟಿ, ಹಗಲು ದರೋಡೆ ಮಾಡಿ ಜನರಿಗೆ ದ್ರೋಹ ಮಾಡಿದ ಸರ್ಕಾರವಿದು. ಅಧಿಕಾರದಲ್ಲಿ ಮುಂದುವರೆಯುವ ನೈತಿಕ ಹಕ್ಕಿಲ್ಲ. ವಿಧಾನಪರಿಷತ್ತಿನ ಫಲಿತಾಂಶದ ಹಿನ್ನೆಲೆಯಲ್ಲಿ ಸರ್ಕಾರ ವಿಸರ್ಜನೆ ಮಾಡಬೇಕು. ಬನ್ನಿ ಹೊಸ ಜನಾದೇಶ ಪಡೆಯೋಣ’ ಎಂದು ಅವರು ಸವಾಲು ಹಾಕಿದರು.‘ಇದು ಮತಪತ್ರದ ಮೂಲಕ ನಡೆದ ಚುನಾವಣೆ. ಇವಿಎಂ ಮೂಲಕ ಈ ಚುನಾವಣೆ ನಡೆದಿಲ್ಲ. ಇದರಲ್ಲಿ ಮತದಾನದ ಪ್ರಮಾಣವೂ ಹೆಚ್ಚಾಗಿದೆ. ಆಡಳಿತಾರೂಢ ಪಕ್ಷದ ವಿರುದ್ಧ ಎನ್ಡಿಎ ಸ್ಪರ್ಧಿಸಿ ಎಲ್ಲ ಕ್ಷೇತ್ರಗಳನ್ನು ಗೆದ್ದುಕೊಂಡಿದೆ. ಆಡಳಿತ ವಿರೋಧಿ ಅಲೆ ಇರುವುದು ಸ್ಪಷ್ಟವಾಗಿದೆ’ ಎಂದರು.‘ಸ್ಟಿಂಗ್’ನಲ್ಲೇ ಕಾಲಹರಣ’: ‘ಸರ್ಕಾರದ ಆಡಳಿತವನ್ನು ಜನತೆ ಸಂಪೂರ್ಣ ತಿರಸ್ಕರಿಸಿದ್ದಾರೆ. ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರ, ಸ್ವಜನಪಕ್ಷಪಾತ, ಸ್ಟಿಂಗ್ ಕಾರ್ಯಾಚರಣೆಯಲ್ಲೇ ಕಾಲಹರಣ ಮಾಡುತ್ತಿದೆ’ ಎಂದು ಸಂಸದ ಗೋವಿಂದ ಕಾರಜೋಳ ಟೀಕಿಸಿದರು.‘ಕುರ್ಚಿ ಕಚ್ಚಾಟಕ್ಕಾಗಿ ಇವೆಲ್ಲ ನಡೆದಿದೆ. ರಾಜ್ಯದ ಸುಶಿಕ್ಷಿತ ಜನರು ಕಾಂಗ್ರೆಸ್ನ ದುರಾಡಳಿತ ಅಭಿವೃದ್ಧಿರಹಿತ ಭ್ರಷ್ಟಾಚಾರವನ್ನು ತಿರಸ್ಕರಿಸಿ, ವಿಧಾನಪರಿಷತ್ ಚುನಾವಣೆ ಮೂಲಕ ತೀರ್ಪು ನೀಡಿದ್ದಾರೆ’ ಎಂದು ಹೇಳಿದರು.ಬಸವರಾಜ ಬೊಮ್ಮಾಯಿ ಬಿಜೆಪಿ ಸಂಸದಮೂರೂವರೆ ವರ್ಷದ ಕಾಂಗ್ರೆಸ್ನ ದುರಾಳಿತದ ಬಗ್ಗೆ ಜನ ಭ್ರಮನಿರಸನ ಗೊಂಡಿರುವುದು ಬಹಳ ಸ್ಪಷ್ಟ. ಕಾಂಗ್ರೆಸ್ ಸರ್ಕಾರದ ಕೌಂಟ್ ಡೌನ್ ಶುರುವಾಗಿದೆ. ಈ ಫಲಿತಾಂಶವು ಡಿ.ಕೆ. ಶಿವಕುಮಾರ್ ಆಡಳಿತಕ್ಕೆ ಹಿಡಿದ ಕನ್ನಡಿ 2028ಕ್ಕೆ 160ಕ್ಕೂ ಹೆಚ್ಚು ಸ್ಥಾನ: ಅಶೋಕ ‘ವಿಧಾನಪರಿಷತ್ ಫಲಿತಾಂಶ 2028 ರ ವಿಧಾನಸಭೆ ಚುನಾವಣೆಗೆ ಮುನ್ಸೂಚನೆ. ಬಿಜೆಪಿ– ಜೆಡಿಎಸ್ ಒಂದಾಗಿ ಸ್ಪರ್ಧಿಸಿದರೆ 160 ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಬಹುದು’ ಎಂದು ವಿರೋಧಪಕ್ಷದ ನಾಯಕ ಆರ್.ಅಶೋಕ ವಿಶ್ವಾಸ ವ್ಯಕ್ತಪಡಿಸಿದರು. ‘ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿ–ಜೆಡಿಎಸ್ ಪಕ್ಷಗಳ ಜಿಲ್ಲಾಧ್ಯಕ್ಷರು ಯಾವುದೇ ಅಪಸ್ವರ ಎತ್ತದೇ ಸಮನ್ವಯದಿಂದ ಕೆಲಸ ಮಾಡಿದ್ದಾರೆ. ಹೀಗಾಗಿ ಎ.ಪಿ.ರಂಗನಾಥ್ ಗೆಲುವು ಸಾಧಿಸಿದ್ದಾರೆ. ಚುನಾವಣೆಯಲ್ಲಿ ಎಲ್ಲರ ಸಹಕಾರವೂ ಇತ್ತು. ಇವೆಲ್ಲದರ ಪರಿಣಾಮ ಸೋಲನ್ನೇ ಕಾಣದ ‘ಆಲ್ ಪಾರ್ಟಿ’ ಪುಟ್ಟಣ್ಣ ಮುಖಭಂಗ ಅನುಭವಿಸಿದ್ದಾರೆ’ ಎಂದರು. ‘ಪುಟ್ಟಣ್ಣ ಅವರನ್ನು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಅಭ್ಯರ್ಥಿ ಎಂದೇ ಬಿಂಬಿಸಿದ್ದರು. ಈಗ ಅವರು ಸೋತಿದ್ದಾರೆ. ಆದ್ದರಿಂದ ಈ ಸೋಲು ಶಿವಕುಮಾರ್ ಅವರ ವೈಯಕ್ತಿಕ ಸೋಲು. ಅವರಿಗೆ ಮೊದಲ ಆಘಾತವನ್ನು ಬಿಜೆಪಿ ಮತ್ತು ಜೆಡಿಎಸ್ ನೀಡಿವೆ’ ಎಂದು ಹೇಳಿದರು.