ಪಾಕಿಸ್ತಾನಕ್ಕೆ ಬೇಹುಗಾರಿಕೆ: ಬಿಹಾರ ಮೂಲದ ಇಬ್ಬರ ಬಂಧನ
ಅಮರಾವತಿ: ಭಾರತೀಯ ಸಿಮ್ ಕಾರ್ಡ್ಗಳ ಒಟಿಪಿ ಬಳಸಿ ವಾಟ್ಸ್ಆ್ಯಪ್ ಖಾತೆಗಳನ್ನು ಸಕ್ರಿಯಗೊಳಿಸಿ ಪಾಕಿಸ್ತಾನದ ಬೇಹುಗಾರಿಕೆಗೆ ಸಹಕಾರ ನೀಡುತ್ತಿದ್ದ ಇಬ್ಬರನ್ನು ಆಂಧ್ರ ಪ್ರದೇಶದ ಪೊಲೀಸರು ಬುಧವಾರ ಬಂಧಿಸಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.ಆರೋಪಿಗಳನ್ನು ಬಿಹಾರದ ರಕ್ಸೌಲ್ನ ನಿವಾಸಿಗಳಾದ ಪಿಒಎಸ್ ಏಜೆಂಟ್ ರಾಜ ಕುಮಾರ್ ಮತ್ತು ಆದಿತ್ಯ ಕುಮಾರ್ ಅಲಿಯಾಸ್ ಆದಿತ್ಯ

ಅಮರಾವತಿ: ಭಾರತೀಯ ಸಿಮ್ ಕಾರ್ಡ್ಗಳ ಒಟಿಪಿ ಬಳಸಿ ವಾಟ್ಸ್ಆ್ಯಪ್ ಖಾತೆಗಳನ್ನು ಸಕ್ರಿಯಗೊಳಿಸಿ ಪಾಕಿಸ್ತಾನದ ಬೇಹುಗಾರಿಕೆಗೆ ಸಹಕಾರ ನೀಡುತ್ತಿದ್ದ ಇಬ್ಬರನ್ನು ಆಂಧ್ರ ಪ್ರದೇಶದ ಪೊಲೀಸರು ಬುಧವಾರ ಬಂಧಿಸಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.ಆರೋಪಿಗಳನ್ನು ಬಿಹಾರದ ರಕ್ಸೌಲ್ನ ನಿವಾಸಿಗಳಾದ ಪಿಒಎಸ್ ಏಜೆಂಟ್ ರಾಜ ಕುಮಾರ್ ಮತ್ತು ಆದಿತ್ಯ ಕುಮಾರ್ ಅಲಿಯಾಸ್ ಆದಿತ್ಯ ಕುಮಾರ್ ಪಾಂಡೆ ಎಂದು ಗುರುತಿಸಲಾಗಿದೆ.ಪಾಕಿಸ್ತಾನದ ಗುಪ್ತಚರ ಕಾರ್ಯಗಳ(ಪಿಐಒಎಸ್) ಬೇಹುಗಾರಿಕೆ ಜಾಲದೊಂದಿಗೆ ಸಂಪರ್ಕವಿರುವ ಇವರನ್ನು ಆಂಧ್ರಪ್ರದೇಶ ಕೌಂಟರ್ ಗುಪ್ತಚರ ಕೋಶ(ಎಪಿ ಸಿಐ ಕೋಶ) ಬಂಧಿಸಿದೆ.ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ, ಭಾರತೀಯ ನೌಕಾಪಡೆಯಲ್ಲಿ ಗುತ್ತಿಗೆ ಕಾರು ಚಾಲಕನಾಗಿದ್ದ ಅಣ್ಣಮ್ ಸಾಯಿ ವರಪ್ರಸಾದ್ನನ್ನು ಅ. 1ರಂದು ವಿಶಾಖಪಟ್ಟಣದಲ್ಲಿ ಹಾಗೂ ನೌಕಾಪಡೆಯಲ್ಲಿ ನೌಕರನಾಗಿದ್ದ ಪ್ರದೀಪ್ ಮುಖರ್ಜಿಯನ್ನು ಅ.3ರಂದು ಕೊಯಮತ್ತೂರಿನಲ್ಲಿ ಬಂಧಿಸಿದ್ದರು.
Read the complete story at Prajavani