ನೆತನ್ಯಾಹು ಅಧಿಕಾರಕ್ಕೆ ಕುತ್ತು: ಸಮ್ಮಿಶ್ರ ಸರ್ಕಾರ ರಚನೆ?
ಜೆರುಸಲೇಂ: ಇಸ್ರೇಲ್ನ ಮಹತ್ವದ ಸಾರ್ವತ್ರಿಕ ಚುನಾವಣೆಯ ಮೂರನೆಯ ಎರಡರಷ್ಟು ಮತಗಳ ಎಣಿಕೆ ಕಾರ್ಯ ಬುಧವಾರ ಪೂರ್ಣಗೊಂಡಿದ್ದು, ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಪಕ್ಷವು, ವಿರೋಧ ಪಕ್ಷಗಳಿಗಿಂತ ಹೆಚ್ಚಿನ ಮತಗಳನ್ನು ಪಡೆದು ಮುನ್ನಡೆ ಕಾಯ್ದುಕೊಂಡಿದೆ. ಆದರೆ, ಬಹುಮತದ ಕೊರತೆಯನ್ನು ಎದುರಿಸುತ್ತಿದೆ. ಗುರುವಾರ ಸಂಜೆ ಅಥವಾ ಶುಕ್ರವಾರ ಬೆಳಿಗ್ಗೆ ವೇಳೆಗೆ ಯಾವ ಪಕ

ಜೆರುಸಲೇಂ: ಇಸ್ರೇಲ್ನ ಮಹತ್ವದ ಸಾರ್ವತ್ರಿಕ ಚುನಾವಣೆಯ ಮೂರನೆಯ ಎರಡರಷ್ಟು ಮತಗಳ ಎಣಿಕೆ ಕಾರ್ಯ ಬುಧವಾರ ಪೂರ್ಣಗೊಂಡಿದ್ದು, ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಪಕ್ಷವು, ವಿರೋಧ ಪಕ್ಷಗಳಿಗಿಂತ ಹೆಚ್ಚಿನ ಮತಗಳನ್ನು ಪಡೆದು ಮುನ್ನಡೆ ಕಾಯ್ದುಕೊಂಡಿದೆ. ಆದರೆ, ಬಹುಮತದ ಕೊರತೆಯನ್ನು ಎದುರಿಸುತ್ತಿದೆ. ಗುರುವಾರ ಸಂಜೆ ಅಥವಾ ಶುಕ್ರವಾರ ಬೆಳಿಗ್ಗೆ ವೇಳೆಗೆ ಯಾವ ಪಕ್ಷ ಎಷ್ಟು ಸ್ಥಾನ ಪಡೆಯಲಿದೆ ಎಂಬ ಸ್ಪಷ್ಟ ಚಿತ್ರಣ ಲಭಿಸಲಿದೆ. ಬುಧವಾರ ಸಂಜೆಯವರೆಗೆ ಶೇ 66ರಷ್ಟು ಮತಗಳ ಎಣಿಕೆ ಪೂರ್ಣಗೊಂಡಿದ್ದು, ಸಂಸತ್ತಿನ 120 ಸ್ಥಾನಗಳಲ್ಲಿ ನೆತನ್ಯಾಹು ಬಣವು 54 ಸ್ಥಾನಗಳಲ್ಲಿ, ಅವರ ಪ್ರತಿಸ್ಪರ್ಧಿ ಗಡಿ ಐಸೆನ್ಕೋಟ್ ಬಣವು 48 ಸ್ಥಾನಗಳಲ್ಲಿ ಹಾಗೂ ಅಲಿಪ್ತ ಅರಬ್ ಪಕ್ಷಗಳು 18 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿವೆ. ನವೆಂಬರ್ 4ರಂದು ಅಂತಿಮ ಫಲಿತಾಂಶ ಪ್ರಕಟಗೊಳ್ಳಲಿದೆ.ಇಸ್ರೇಲ್ನ ದೀರ್ಘಾವಧಿ ಪ್ರಧಾನಿ (ಎರಡು ದಶಕ) ಎಂಬ ಹೆಗ್ಗಳಿಕೆಯ ನೆತನ್ಯಾಹು ಅವರ ನಾಯಕತ್ವದ ಮೇಲಿನ ಜನಾಭಿಪ್ರಾಯ ಸಂಗ್ರಹ ಎಂದೇ ಈ ಚುನಾವಣೆಯನ್ನು ವಿಶ್ಲೇಷಿಸಲಾಗುತ್ತಿದೆ. ಇರಾನ್, ಲೆಬನಾನ್, ಗಾಜಾಪಟ್ಟಿಯ ಸಂಘರ್ಷ ಸೇರಿ ಯುದ್ಧದ ಕಾರ್ಮೋಡದ ನಡುವೆಯೇ ನಡೆದ ಈ ಚುನಾವಣೆಯಲ್ಲಿ ದಾಖಲೆ ಪ್ರಮಾಣದಲ್ಲಿ ಮತಗಳು ಚಲಾವಣೆಗೊಂಡಿವೆ. ನೆತನ್ಯಾಹು ಬಗ್ಗೆ ತೀರ್ಪು ನೀಡಲು ದಶಕಗಳಲ್ಲೇ ಅತಿ ಹೆಚ್ಚು ಮತದಾರರು ಬಂದಿದ್ದರು ಎಂದು ಸುದ್ದಿಸಂಸ್ಥೆ ವರದಿ ಮಾಡಿದೆ. ಚುನಾವಣೋತ್ತರ ಸಮೀಕ್ಷೆಗಳು ಮಾಜಿ ಸೇನಾ ಮುಖ್ಯಸ್ಥ ಮತ್ತು ರಾಜಕೀಯದಲ್ಲಿ ಹೊಸಬರಾದ ಐಸೆನ್ಕೋಟ್ (66) ನೇತೃತ್ವದ ವಿರೋಧಿ ಬಣವು ಈ ಬಾರಿ ನೆತನ್ಯಾಹು (77) ಅವರಿಗೆ ತೀವ್ರ ಪೈಪೋಟಿ ನೀಡಲಿದೆ ಎಂದು ಹೇಳಿದ್ದವು. ಮೂರನೆಯ ಎರಡರಷ್ಟು ಮತಗಳ ಎಣಿಕೆ ಕಾರ್ಯ ಪೂರ್ಣಗೊಂಡಾಗ ಎರಡೂ ಪಕ್ಷಗಳು ಬಹುಮತಕ್ಕೆ ಬೇಕಾಗುವ ಕನಿಷ್ಠ ಸ್ಥಾನದಿಂದ ಬಹಳ ದೂರದಲ್ಲಿವೆ. ನೆತನ್ಯಾಹು ವಿರುದ್ಧದ ಮತಗಳು ಅಲಿಪ್ತ ಅರಬ್ ಪಕ್ಷಗಳಿಗೆ ಲಾಭವಾಗಿ ಪರಿಗಣಿಸಿವೆ. ಇಸ್ರೇಲ್ನಲ್ಲಿ ತಾನು ತೆಗೆದುಕೊಂಡ ಯಹೂದಿ ರಾಷ್ಟ್ರೀಯತಾವಾದಿ ನಿಲುವನ್ನು ಅಲ್ಪಸಂಖ್ಯಾತರು ದುರ್ಬಲಗೊಳಿಸುತ್ತಿದ್ದಾರೆ ಎಂದು ನೆತನ್ಯಾಹು ನಿರಂತರವಾಗಿ ಆರೋಪಿಸಿದ್ದರು. ಅವರ ಈ ಧೋರಣೆಯು ಅರಬ್ ಪಕ್ಷಗಳಿಗೆ ಮತಗಳಾಗಿ ಪರಿವರ್ತನೆಗೊಂಡಿವೆ. –ನೆತನ್ಯಾಹು ಇಸ್ರೇಲ್ ಪ್ರಧಾನಿ ಬಲವಾದ ಬಲಪಂಥೀಯ ಸರ್ಕಾರಕ್ಕಾಗಿ ಯಹೂದಿ ಮತ್ತು ಝಿಯೋನಿಸ್ಟ್ ಬಹುಸಂಖ್ಯಾತರು ಒಂದಾಗಬೇಕು ‘ಹೊಸ ಸರ್ಕಾರ ನಮ್ಮ ಜವಾಬ್ದಾರಿ’ ಐಸೆನ್ಕೋಟ್ ಬಣವು ಅರಬ್ ಪಕ್ಷಗಳೊಂದಿಗೆ ಒಪ್ಪಂದ ಮಾಡಿಕೊಂಡರೆ ಬಹುಮತಕ್ಕೆ ಬೇಕಿರುವಷ್ಟು ಸ್ಥಾನಗಳನ್ನು ಸುಲಭವಾಗಿ ಪಡೆಯಲಿದ್ದಾರೆ. ಐಸೆನ್ಕೋಟ್ ಬಣದ ಭಾಗವಾಗಿರುವ ಇಸ್ರೇಲ್ನ ಪ್ರಮುಖ ಎಡಪಂಥೀಯ ಪಕ್ಷವೊಂದರ ಮುಖಂಡ ಯೇರ್ ಗೋಲನ್ ಈ ಸಾಧ್ಯತೆಯ ಬಗ್ಗೆ ಸ್ಪಷ್ಟವಾಗಿ ಹೇಳಿದ್ದಾರೆ. ‘ಯಹೂದಿ ಮತಗಳು ಮತ್ತು ಅರಬ್ ಮತಗಳ ನಡುವಿನ ನೆತನ್ಯಾಹು ಅವರ ಜನಾಂಗೀಯ ವಿಭಜನೆಯನ್ನು ನಾವು ಇನ್ನು ಮುಂದೆ ಒಪ್ಪಿಕೊಳ್ಳಬಾರದು. ಇಸ್ರೇಲ್ನ ಅರಬ್ ನಾಗರಿಕರ ಜತೆಗೂಡಿ ಹೊಸ ಸರ್ಕಾರವನ್ನು ರಚಿಸಲು ನಮಗೆ ಅವಕಾಶವಿದೆ. ಇದು ನಮ್ಮ ಜವಾಬ್ದಾರಿ’ ಎಂದು ಅವರು ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ. ನೆತನ್ಯಾಹು ವಿಶ್ವಾಸ ಅಂತಿಮ ಫಲಿತಾಂಶದಲ್ಲಿ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಲಭಿಸದಿದ್ದರೂ ಈ ಬಿಕ್ಕಟ್ಟು ತಾತ್ಕಾಲಿಕವಾಗಿ ನೆತನ್ಯಾಹು ಅವರಿಗೆ ಪ್ರಯೋಜನವಾಗಬಹುದು. ಹೊಸ ಸರ್ಕಾರ ರಚನೆಯಾಗುವರೆಗೆ ಅವರು ಉಸ್ತುವಾರಿ ಪ್ರಧಾನಿಯಾಗಿ ಮುಂದುವರಿಯುತ್ತಾರೆ. ’ಬಹುಮತ ಗಳಿಸುವ ನಿರೀಕ್ಷೆ ಇಲ್ಲದಿದ್ದರೂ ನೆತನ್ಯಾಹು ಮತ್ತು ಐಸೆನ್ಕೋಟ್ ಇಬ್ಬರೂ ಸರ್ಕಾರ ರಚಿಸುವುದಾಗಿ ಅದಮ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ನೆತನ್ಯಾಹು ಅವರನ್ನು ಅಭಿನಂದಿಸಿದ್ದು ’ಅವರ ಬೆಂಬಲವು ಬಹಳಷ್ಟು ಸಹಾಯ ಮಾಡಿದೆ’ ಎಂದು ಹೇಳಿದ್ದಾರೆ.