ನ್ಯಾಯಮೂರ್ತಿ ವಿರುದ್ಧ ಸಿಟ್ಟು: ವಕೀಲರಿಂದ ಕೋರ್ಟ್ ರೂಂ ಧ್ವಂಸ
ಪ್ರಯಾಗರಾಜ್ : ನ್ಯಾಯಾಲಯದ ಕಾರ್ಯಕಲಾಪವನ್ನು ಸಮರ್ಪಕವಾಗಿ ನಡೆಸುತ್ತಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿ ಅಜಯ್ ಭಾನೋತ್ ಅವರ ವಿರುದ್ಧ ಆರೋಪ ಹೊರಿಸಿದ ಕೆಲ ವಕೀಲರು ಬುಧವಾರ ನ್ಯಾಯಾಲಯದ ಕೊಠಡಿಯನ್ನು ಧ್ವಂಸಗೊಳಿಸಿದ ಘಟನೆ ನಡೆದಿದೆ. ಭಾನೋತ್ ಅವರು ಕೊಠಡಿ ಪ್ರವೇಶಿಸುತ್ತಿದ್ದಂತೆ ಘೋಷಣೆ ಕೂಗಿದ ಕೆಲವು ವಕೀಲರ ಗುಂಪು, ಪೀಠೋಪಕರಣ ಹಾಳುಗೆಡವಿತು.

ಪ್ರಯಾಗರಾಜ್ : ನ್ಯಾಯಾಲಯದ ಕಾರ್ಯಕಲಾಪವನ್ನು ಸಮರ್ಪಕವಾಗಿ ನಡೆಸುತ್ತಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿ ಅಜಯ್ ಭಾನೋತ್ ಅವರ ವಿರುದ್ಧ ಆರೋಪ ಹೊರಿಸಿದ ಕೆಲ ವಕೀಲರು ಬುಧವಾರ ನ್ಯಾಯಾಲಯದ ಕೊಠಡಿಯನ್ನು ಧ್ವಂಸಗೊಳಿಸಿದ ಘಟನೆ ನಡೆದಿದೆ. ಭಾನೋತ್ ಅವರು ಕೊಠಡಿ ಪ್ರವೇಶಿಸುತ್ತಿದ್ದಂತೆ ಘೋಷಣೆ ಕೂಗಿದ ಕೆಲವು ವಕೀಲರ ಗುಂಪು, ಪೀಠೋಪಕರಣ ಹಾಳುಗೆಡವಿತು.ಹೈಕೋರ್ಟ್ ವಕೀಲರ ಸಂಘದ ನೂತನ ಪದಾಧಿಕಾರಿಗಳು ನ್ಯಾಯಮೂರ್ತಿ ಭಾನೋತ್ ಅವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಮುಖ್ಯ ನ್ಯಾಯಮೂರ್ತಿ ಅರುಣ್ ಭನ್ಸಾಲಿ ಅವರಿಗೆ ಪತ್ರ ಬರೆದ ಮರುದಿನ ಈ ಘಟನೆ ನಡೆದಿದೆ.‘ಅಕ್ಟೋಬರ್ 27ರಂದು ಕಲಾಪ ವೇಳೆ ಎಜಿಎ ಸಾಲಿನ ಆಸನದ ವಿಚಾರಕ್ಕೆ ಭಾನೋತ್ ಅವರು ಹಿರಿಯ ವಕೀಲರೊಬ್ಬರ ವಿರುದ್ಧ ಕಿಡಿಕಾರಿ ಅಣಕಿಸಿದ್ದಲ್ಲದೆ, ಜೈಲಿಗೆ ಕಳುಹಿಸುವುದಾಗಿ ಹೇಳಿ ಅಪಮಾನ ಮಾಡಿದ್ದಾರೆ’ ಎಂದು ಆರೋಪಿಸಿ ರಿಜಿಸ್ಟ್ರಾರ್ ಜನರಲ್ಗೆ ಪತ್ರ ಬರೆದು ದೂರು ಸಲ್ಲಿಸಲಾಗಿತ್ತು.
Read the complete story at Prajavani