ಮೂಡಿಗೆರೆ: ಮಾದಕ ವಸ್ತುಗಳ ವಿರುದ್ಧ ಎಸ್ಕೆಎಸ್ಎಸ್ಎಫ್ ಜಾಗೃತಿ ಮೆರವಣಿಗೆ
ಮೂಡಿಗೆರೆ: ಮಾದಕ ವಸ್ತುಗಳು ಮತ್ತು ಡ್ರಗ್ಸ್ ಸೇವನೆಯ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಎಸ್ಕೆಎಸ್ಎಸ್ಎಫ್ ವಿಖಾಯ ಚಿಕ್ಕಮಗಳೂರು ಜಿಲ್ಲಾ ಸಮಿತಿ ವತಿಯಿಂದ ಮೂಡಿಗೆರೆಯಲ್ಲಿ ಬೃಹತ್ ಜಾಗೃತಿ ಮೆರವಣಿಗೆ ಮತ್ತು ಸಾರ್ವಜನಿಕ ಸಮಾವೇಶ ಆಯೋಜಿಸಲಾಗಿತ್ತು.ಪಟ್ಟಣದ ವಿವಿಧ ರಸ್ತೆಗಳಲ್ಲಿ ಸಾಗಿದ ಮೆರವಣಿಗೆ ಲಯನ್ಸ್ ವೃತ್ತದ ಬಳಿ ತಲುಪಿದ ಬಳಿಕ ಸಾರ್ವಜನಿ

ಮೂಡಿಗೆರೆ: ಮಾದಕ ವಸ್ತುಗಳು ಮತ್ತು ಡ್ರಗ್ಸ್ ಸೇವನೆಯ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಎಸ್ಕೆಎಸ್ಎಸ್ಎಫ್ ವಿಖಾಯ ಚಿಕ್ಕಮಗಳೂರು ಜಿಲ್ಲಾ ಸಮಿತಿ ವತಿಯಿಂದ ಮೂಡಿಗೆರೆಯಲ್ಲಿ ಬೃಹತ್ ಜಾಗೃತಿ ಮೆರವಣಿಗೆ ಮತ್ತು ಸಾರ್ವಜನಿಕ ಸಮಾವೇಶ ಆಯೋಜಿಸಲಾಗಿತ್ತು.ಪಟ್ಟಣದ ವಿವಿಧ ರಸ್ತೆಗಳಲ್ಲಿ ಸಾಗಿದ ಮೆರವಣಿಗೆ ಲಯನ್ಸ್ ವೃತ್ತದ ಬಳಿ ತಲುಪಿದ ಬಳಿಕ ಸಾರ್ವಜನಿಕ ಸಮಾವೇಶವಾಗಿ ರೂಪುಗೊಂಡಿತು. ಸಮಾವೇಶದಲ್ಲಿ ಮಾದಕ ವ್ಯಸನದಿಂದ ಯುವಜನತೆ ಮತ್ತು ಸಮಾಜದ ಮೇಲಾಗುವ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸಲಾಯಿತು.ಬಿಳಗುಳದ ಖತೀಬರಾದ ಸಲೀಮ್ ಅರ್ಶದಿ ಅವರು ದುವಾ ನೆರವೇರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಜಿಲ್ಲಾ ಕಾರ್ಯದರ್ಶಿ ಝೈದ್ ಫೈಝಿ ಖಲಂದರಿ ಸ್ವಾಗತ ಕೋರಿದರು. ಮೂಡಿಗೆರೆ ಕೇಂದ್ರದ ಖತೀಬರಾದ ಮುಸ್ತಫ ಯಾಮನಿ ಕಾರ್ಯಕ್ರಮ ಉದ್ಘಾಟಿಸಿದರು. ಎಸ್ಕೆಎಸ್ಎಸ್ಎಫ್ ಜಿಲ್ಲಾಧ್ಯಕ್ಷ ಸ್ವಾದಿಕ್ ಅಝ್ಹರಿ ಅಧ್ಯಕ್ಷತೆ ವಹಿಸಿದ್ದರು.ಸಿನಾನ್ ಫೈಝಿ ಖಲಂದರಿ ಅವರು ಸಭಿಕರಿಗೆ ಮಾದಕ ವಸ್ತುಗಳ ವಿರುದ್ಧ ಪ್ರತಿಜ್ಞೆ ಬೋಧಿಸಿದರು. ಎಸ್ಕೆಎಸ್ಎಸ್ಎಫ್ ರಾಜ್ಯ ಕಾರ್ಯದರ್ಶಿ ಅನೀಸ್ ಕೌಸರಿ ಮುಖ್ಯ ಭಾಷಣ ಮಾಡಿ, ಡ್ರಗ್ಸ್ ವಿರುದ್ಧ ಜಾಗೃತಿ ಮೂಡಿಸಿದರು. ಶಶಿ ಕುಮಾರ್ ಟಿ.ಸಿ. ಅವರು ಆರೋಗ್ಯ ಶಿಬಿರದ ಕುರಿತು ಮಾಹಿತಿ ನೀಡಿದರು.ಜಿಲ್ಲಾ ಸಂಘಟನಾ ಕಾರ್ಯದರ್ಶಿ ಯಾಸೀರ್ ಚಕಮಕ್ಕಿ ವಂದನಾರ್ಪಣೆ ಸಲ್ಲಿಸಿದರು. ವಿಖಾಯ ನಾಯಕ ರಹೀಮ್ ಅಝ್ಹರಿ ಕಾರ್ಯಕ್ರಮ ನಿರೂಪಿಸಿದರು.ಕಾರ್ಯಕ್ರಮದಲ್ಲಿ ಕರ್ನಾಟಕ ವಿಖಾಯ ಚೇರ್ಮನ್ ಇಸ್ಮಾಯಿಲ್ ತಂಙಳ್ ಉಪ್ಪಿನಂಗಡಿ, ಕೇಂದ್ರ ವಿದ್ಯಾಭ್ಯಾಸ ಸದಸ್ಯ ಸಿ.ಕೆ. ಇಬ್ರಾಹಿಂ ಹಾಜಿ, ಎ.ಸಿ. ಅಯೂಬ್ ಹಾಜಿ, ಜಂಇಯತುಲ್ ಮುಅಲ್ಲಿಮೀನ್ ಜಿಲ್ಲಾ ಕಾರ್ಯದರ್ಶಿ ಬದುರುದೀನ್ ದಾರಿಮಿ ಸಕಲೇಶಪುರ, ಎಸ್ಕೆಎಸ್ಎಸ್ಎಫ್ ವಲಯ ಅಧ್ಯಕ್ಷ ಶರೀಫ್ ಬಿಳಗುಳ, ಕಾರ್ಯದರ್ಶಿ ನಿಯಾಝ್ ಮೂಡಿಗೆರೆ, ಜಿಲ್ಲಾ ಮಾಜಿ ಅಧ್ಯಕ್ಷ ಅಝೀಝ್ ಅರಬಿ, ಜಿಲ್ಲಾ ಕೋಶಾಧಿಕಾರಿ ವಾಹಿದ್ ಮೂಡಿಗೆರೆ ಸೇರಿದಂತೆ ಹಾಸನ ಜಿಲ್ಲೆಯ ವಿಖಾಯ ನಾಯಕರು ಹಾಗೂ ಇತರ ಪ್ರಮುಖರು ಉಪಸ್ಥಿತರಿದ್ದರು.