ತಯಾರಿಕೆ ಮತ್ತು ಗಣಿಗಾರಿಕೆ ವಲಯ: ಐಐಪಿ ಶೇ 6.7ಕ್ಕೆ ಇಳಿಕೆ
ನವದೆಹಲಿ: ತಯಾರಿಕೆ ಮತ್ತು ಗಣಿಗಾರಿಕೆ ವಲಯದ ಉತ್ಪಾದನೆಯಲ್ಲಿನ ಇಳಿಕೆಯಿಂದ ದೇಶದ ಕೈಗಾರಿಕಾ ಉತ್ಪಾದನಾ ಸೂಚ್ಯಂಕವು (ಐಐಪಿ) ಸೆಪ್ಟೆಂಬರ್ ತಿಂಗಳಿನಲ್ಲಿ ಶೇ 6.7ಕ್ಕೆ ಇಳಿದಿದೆ. ಆಗಸ್ಟ್ ತಿಂಗಳಿನಲ್ಲಿ ಪ್ರಗತಿಯು ಶೇ 8ರಷ್ಟು ದಾಖಲಾಗಿತ್ತು. ಕಳೆದ ವರ್ಷದ ಸೆಪ್ಟೆಂಬರ್ನಲ್ಲಿ ತಯಾರಿಕಾ ವಲಯದ ಬೆಳವಣಿಗೆ ಶೇ 8.6ರಷ್ಟಾಗಿತ್ತು. ಅದು ಈ ಬಾರಿ ಶೇ 7.6ಕ್ಕೆ ಇಳಿದಿದ

ನವದೆಹಲಿ: ತಯಾರಿಕೆ ಮತ್ತು ಗಣಿಗಾರಿಕೆ ವಲಯದ ಉತ್ಪಾದನೆಯಲ್ಲಿನ ಇಳಿಕೆಯಿಂದ ದೇಶದ ಕೈಗಾರಿಕಾ ಉತ್ಪಾದನಾ ಸೂಚ್ಯಂಕವು (ಐಐಪಿ) ಸೆಪ್ಟೆಂಬರ್ ತಿಂಗಳಿನಲ್ಲಿ ಶೇ 6.7ಕ್ಕೆ ಇಳಿದಿದೆ. ಆಗಸ್ಟ್ ತಿಂಗಳಿನಲ್ಲಿ ಪ್ರಗತಿಯು ಶೇ 8ರಷ್ಟು ದಾಖಲಾಗಿತ್ತು. ಕಳೆದ ವರ್ಷದ ಸೆಪ್ಟೆಂಬರ್ನಲ್ಲಿ ತಯಾರಿಕಾ ವಲಯದ ಬೆಳವಣಿಗೆ ಶೇ 8.6ರಷ್ಟಾಗಿತ್ತು. ಅದು ಈ ಬಾರಿ ಶೇ 7.6ಕ್ಕೆ ಇಳಿದಿದೆ. ವಿದ್ಯುತ್ ಮತ್ತು ಅನಿಲ ಉತ್ಪಾದನೆಯು ಶೇ 11.2ರಷ್ಟಿದೆ ಎಂದು ರಾಷ್ಟ್ರೀಯ ಸಾಂಖ್ಯಿಕ ಕಚೇರಿ (ಎನ್ಎಸ್ಒ) ತಿಳಿಸಿದೆ. ಪ್ರಸಕ್ತ ಆರ್ಥಿಕ ವರ್ಷದ ಮೊದಲಾರ್ಧದಲ್ಲಿ (ಏಪ್ರಿಲ್ನಿಂದ ಸೆಪ್ಟೆಂಬರ್) ಐಐಪಿ ಬೆಳವಣಿಗೆ ಶೇ 6.8ರಷ್ಟಾಗಿದೆ ಎಂದು ತಿಳಿಸಿದೆ.
Read the complete story at Prajavani