ಕ್ರಿಮಿನಲ್ ನ್ಯಾಯಾಂಗ ನಿಂದನೆ ಪ್ರಕರಣ: ಖುದ್ದು ಹಾಜರಾಗಲು ರಾವುತ್ಗೆ ನಿರ್ದೇಶನ
ನವದೆಹಲಿ: ನ್ಯಾಯಾಂಗ ಮತ್ತು ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ವಿರುದ್ಧ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ದಾಖಲಾದ ಕ್ರಿಮಿನಲ್ ನ್ಯಾಯಾಂಗ ನಿಂದನೆ ಪ್ರಕರಣದ ವಿಚಾರಣೆಗೆ ವರ್ಚುವಲ್ ಆಗಿ ಹಾಜರಾಗುವಂತೆ ಪತ್ರಕರ್ತ ನಿಖಿಲ್ ವಾಗ್ಲೆ ಅವರಿಗೆ ಮತ್ತು ಖುದ್ದಾಗಿ ಹಾಜರಾಗುವಂತೆ ಶಿವಸೇನಾ (ಯುಬಿಟಿ) ಸಂಸದ ಸಂಜಯ್ ರಾವುತ್ ಅವರಿಗೆ ಸುಪ್ರೀಂ ಕೋರ್ಟ್ ನಿರ್ದೇಶಿಸಿದೆ.ವಿ

ನವದೆಹಲಿ: ನ್ಯಾಯಾಂಗ ಮತ್ತು ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ವಿರುದ್ಧ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ದಾಖಲಾದ ಕ್ರಿಮಿನಲ್ ನ್ಯಾಯಾಂಗ ನಿಂದನೆ ಪ್ರಕರಣದ ವಿಚಾರಣೆಗೆ ವರ್ಚುವಲ್ ಆಗಿ ಹಾಜರಾಗುವಂತೆ ಪತ್ರಕರ್ತ ನಿಖಿಲ್ ವಾಗ್ಲೆ ಅವರಿಗೆ ಮತ್ತು ಖುದ್ದಾಗಿ ಹಾಜರಾಗುವಂತೆ ಶಿವಸೇನಾ (ಯುಬಿಟಿ) ಸಂಸದ ಸಂಜಯ್ ರಾವುತ್ ಅವರಿಗೆ ಸುಪ್ರೀಂ ಕೋರ್ಟ್ ನಿರ್ದೇಶಿಸಿದೆ.ವಿರೋಧ ಪಕ್ಷಗಳ ನಿಯೋಗವನ್ನು ಖುದ್ದಾಗಿ ಭೇಟಿ ಮಾಡಲು ಸಿಜೆಐ ಈಚೆಗೆ ನಿರಾಕರಿಸಿದ್ದರು. ಆ ನಂತರ ವಾಗ್ಲೆ ಮತ್ತು ರಾವುತ್ ಅವರು ಸಿಜೆಐ ವಿರುದ್ಧ ಕೆಲ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಆರೋಪಿಸಿ ಸುಪ್ರೀಂ ಕೋರ್ಟ್ ವಕೀಲರ ಸಂಘವು ಸಲ್ಲಿಸಿದ ಅರ್ಜಿಯ ವಿಚಾರಣೆಯನ್ನು ಬುಧವಾರ ನಡೆಸಿದ ನ್ಯಾಯಮೂರ್ತಿಗಳಾದ ಅರವಿಂದ ಕುಮಾರ್ ಮತ್ತು ವಿಪುಲ್ ಎಂ. ಪಂಚೋಲಿ ಅವರ ಪೀಠವು, ‘ನ.17ರಂದು ಮಧ್ಯಾಹ್ನ 2 ಗಂಟೆಗೆ ಇಬ್ಬರೂ ವಿಚಾರಣೆಗೆ ಹಾಜರಾಗಬೇಕು’ ಎಂದು ಹೇಳಿದೆ.ವಕೀಲರ ಕೋರಿಕೆ ಮೇರೆಗೆ ವಾಗ್ಲೆ ಅವರಿಗೆ ವರ್ಚುವಲ್ ಹಾಜರಾತಿಗೆ ಅನುಮತಿ ನೀಡಿದ್ದು, ‘ಮುಂದೆ ಅಗತ್ಯ ಬಿದ್ದರೆ ಖುದ್ದಾಗಿ ಹಾಜರಾಗಬೇಕು’ ಎಂದು ಪೀಠವು ತಿಳಿಸಿದೆ. ಆದರೆ ರಾವುತ್ ಪರ ಬುಧವಾರ ಯಾವುದೇ ವಕೀಲರು ಹಾಜರಿರಲಿಲ್ಲ.