ಐವರು ಬಾಲಕಿಯರ ಮೇಲೆ ಅತ್ಯಾಚಾರ:ದಿನಪತ್ರಿಕೆ ಮಾಜಿ ಮಾಲೀಕನಿಗೆ 10 ಜೀವಾವಧಿ ಶಿಕ್ಷೆ
ಭೋಪಾಲ್: ಐವರು ಬಾಲಕಿಯರ ಮೇಲೆ ಅತ್ಯಾಚಾರ ಪ್ರಕರಣದಲ್ಲಿ ಮಧ್ಯ ಪ್ರದೇಶದ ದಿನಪತ್ರಿಕೆಯೊಂದರ ಮಾಜಿ ಮಾಲೀಕ ಪ್ಯಾರೆ ಮಿಯಾನ್ ಎಂಬುವವರಿಗೆ ಇಲ್ಲಿನ ವಿಶೇಷ ಪೋಕ್ಸೊ ನ್ಯಾಯಾಲಯವು 10 ಪ್ರತ್ಯೇಕ ಜೀವಾವಧಿ ಶಿಕ್ಷೆಗಳನ್ನು ವಿಧಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ಪೋಕ್ಸೊ ಮತ್ತು ಐಪಿಸಿಯ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ವಿಧಿಸಲಾದ ಶಿಕ್ಷೆಗಳಲ್ಲಿ, ಎಂಟು ಜೀವಿತಾವಧ

ಭೋಪಾಲ್: ಐವರು ಬಾಲಕಿಯರ ಮೇಲೆ ಅತ್ಯಾಚಾರ ಪ್ರಕರಣದಲ್ಲಿ ಮಧ್ಯ ಪ್ರದೇಶದ ದಿನಪತ್ರಿಕೆಯೊಂದರ ಮಾಜಿ ಮಾಲೀಕ ಪ್ಯಾರೆ ಮಿಯಾನ್ ಎಂಬುವವರಿಗೆ ಇಲ್ಲಿನ ವಿಶೇಷ ಪೋಕ್ಸೊ ನ್ಯಾಯಾಲಯವು 10 ಪ್ರತ್ಯೇಕ ಜೀವಾವಧಿ ಶಿಕ್ಷೆಗಳನ್ನು ವಿಧಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ಪೋಕ್ಸೊ ಮತ್ತು ಐಪಿಸಿಯ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ವಿಧಿಸಲಾದ ಶಿಕ್ಷೆಗಳಲ್ಲಿ, ಎಂಟು ಜೀವಿತಾವಧಿ ಮತ್ತು ಎರಡು ಜೀವಾವಧಿ ಶಿಕ್ಷೆಗಳು ಸೇರಿವೆ. ಈ ಎಲ್ಲ ಶಿಕ್ಷೆಗಳು ಏಕಕಾಲದಲ್ಲಿ ಜಾರಿಯಲ್ಲಿರುತ್ತವೆ. ಅಪರಾಧಿಗೆ ₹77.64 ಲಕ್ಷ ದಂಡ ಸಹ ವಿಧಿಸಲಾಗಿದೆ.ಆತನ ಸಹಚರೆ ರಾಬಿರಾ ಬಿ ಎಂಬುವವರಿಗೂ ಕೋರ್ಟ್ 20 ವರ್ಷ ಜೈಲು ಶಿಕ್ಷೆ ವಿಧಿಸಿದೆ.ಹುಟ್ಟುಹಬ್ಬ ಆಚರಿಸುವುದಾಗಿ ಭೋಪಾಲ್ನ ಶಹಾಪುರದ ಫ್ಲ್ಯಾಟ್ಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಲಾಗಿದೆ ಎಂದು ಬಾಲಕಿಯೊಬ್ಬರು ಕೌನ್ಸೆಲಿಂಗ್ ವೇಳೆ ಹೇಳಿದ್ದರು. ಪ್ರಕರಣದ ವಿಚಾರಣೆ ಮುಂದುವರಿಸಿದಾಗ ಮತ್ತಷ್ಟು ಪ್ರಕರಣ ಬೆಳಕಿಗೆ ಬಂದಿದ್ದವು.ಬಾಲಕಿಗೆ ಒತ್ತಾಯಪೂರ್ವಕವಾಗಿ ಮದ್ಯ ಕುಡಿಸಿದ್ದ ಮಿಯಾನ್, ಅತ್ಯಾಚಾರ ಎಸಗಿದ್ದ. ಇತರೆ ಪ್ರಕರಣಗಳಲ್ಲೂ ಇದೇ ರೀತಿ ಮಿಯಾನ್ ಬಾಲಕಿಯರನ್ನು ಶೋಷಿಸಿದ್ದು ಬೆಳಕಿಗೆ ಬಂದಿತ್ತು.2020ರಲ್ಲಿ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಮಿಯಾನ್ ಮತ್ತು ರಾಬಿಯಾಳನ್ನು ಬಂಧಿಸಿದ್ದ ಪೊಲೀಸರು ಜೈಲಿಗಟ್ಟಿದ್ದರು.