ಸ್ಪೇನ್ನಲ್ಲಿ ಹೈಸ್ಪೀಡ್ ರೈಲುಗಳ ನಡುವೆ ಡಿಕ್ಕಿ: 64 ಪ್ರಯಾಣಿಕರ ಸಾವು
ಮ್ಯಾಡ್ರಿಡ್: ಬಾರ್ಸಿಲೋನಾ (ಎಪಿ): ಸ್ಪೇನ್ನ ಟೊಲೆಡೊ ಪ್ರಾಂತ್ಯದಲ್ಲಿ ಬುಧವಾರ ವೇಗದೂತ ರೈಲೊಂದು ನಿಂತಿದ್ದ ಮತ್ತೊಂದು ರೈಲಿನ ಹಿಂಭಾಗಕ್ಕೆ ಡಿಕ್ಕಿ ಹೊಡೆದ ಪರಿಣಾಮ 68 ಜನರು ಮೃತಪಟ್ಟಿದ್ದಾರೆ.ಈ ಅಪಘಾತದಲ್ಲಿ ರೈಲಿನ ಎರಡು ಬೋಗಿಗಳು ಹಳಿತಪ್ಪಿದ್ದು, 80ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಬದುಕುಳಿದವರಿಗಾಗಿ ರಕ್ಷಣಾ ಸಿಬ್ಬಂದಿ

ಮ್ಯಾಡ್ರಿಡ್: ಬಾರ್ಸಿಲೋನಾ (ಎಪಿ): ಸ್ಪೇನ್ನ ಟೊಲೆಡೊ ಪ್ರಾಂತ್ಯದಲ್ಲಿ ಬುಧವಾರ ವೇಗದೂತ ರೈಲೊಂದು ನಿಂತಿದ್ದ ಮತ್ತೊಂದು ರೈಲಿನ ಹಿಂಭಾಗಕ್ಕೆ ಡಿಕ್ಕಿ ಹೊಡೆದ ಪರಿಣಾಮ 68 ಜನರು ಮೃತಪಟ್ಟಿದ್ದಾರೆ.ಈ ಅಪಘಾತದಲ್ಲಿ ರೈಲಿನ ಎರಡು ಬೋಗಿಗಳು ಹಳಿತಪ್ಪಿದ್ದು, 80ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಬದುಕುಳಿದವರಿಗಾಗಿ ರಕ್ಷಣಾ ಸಿಬ್ಬಂದಿ ಅವಶೇಷಗಳಡಿ ಶೋಧನಡೆಸುತ್ತಿದ್ದಾರೆ. ಅಪಘಾತದ ತೀವ್ರತೆಯನ್ನು ಗಮನಿಸಿದರೆ, ಮೃತರ ಸಂಖ್ಯೆ ಇನ್ನಷ್ಟು ಹೆಚ್ಚಾಗಬಹುದು ಎಂದು ಕ್ಯಾಸ್ಟಿಲ್ಲಾ ಲಾ ಮಂಚಾದ ಪ್ರಾದೇಶಿಕ ಅಧ್ಯಕ್ಷ ಎಮಿಲಿಯಾನೋ ಗಾರ್ಸಿಯಾ– ಪೇಜ್ ಪ್ರತಿಕ್ರಿಯಿಸಿದ್ದಾರೆ.ರಾಜಧಾನಿ ಮ್ಯಾಡ್ರಿಡ್ನಿಂದ ಸೆವಿಲ್ಲೆಯತ್ತ ಎರಡೂ ರೈಲುಗಳು ಸಾಗುತ್ತಿದ್ದವು. ಉರ್ದಾ ಹಾಗೂ ಲಾಸ್ ಎಬೆನೆಸ್ ನಡುವಿನ ಪ್ರದೇಶದಲ್ಲಿ ಆಲಿವ್ ಹೊಲಗಳ ನಡುವಿನ ಹಳಿ ಮೇಲೆ ಅಪಘಾತ ಸಂಭವಿಸಿದೆ ಎಂದು ರೈಲು ವ್ಯವಸ್ಥೆ ನಿರ್ವಹಣಾ ಸಂಸ್ಥೆ ಎಐಡಿಎಫ್ ತಿಳಿಸಿದೆ.ಸರ್ಕಾರಿ ಸ್ವಾಮ್ಯದ ‘ಆರ್ಇಎನ್ಎಫ್ಇ’ ಹಾಗೂ ಖಾಸಗಿ ಸಂಸ್ಥೆಗೆ ಸೇರಿದ ‘ಐಅರ್ವೈಒ’ ರೈಲುಗಳ ನಡುವೆ ಅಪಘಾತ ಸಂಭವಿಸಿದೆ. ಸರ್ಕಾರಿ ಸ್ವಾಮ್ಯದ ರೈಲು, ಸಿಗ್ನಲ್ ಕಾರಣದಿಂದಾಗಿ ನಿಂತಿದ್ದ ಖಾಸಗಿ ರೈಲಿಗೆ ಹಿಂದಿನಿಂದ ಡಿಕ್ಕಿ ಹೊಡೆದಿದೆ.‘ಆರ್ಇಎನ್ಎಫ್ಇ’ ರೈಲಿನಲ್ಲಿ 397 ಹಾಗೂ ‘ಐಅರ್ವೈಒ’ ರೈಲಿನಲ್ಲಿ 147 ಪ್ರಯಾಣಿಕರಿದ್ದರು. ಪ್ರಯಾಣಿಕರಲ್ಲಿ ಶೇ 80ರಷ್ಟು ಮಂದಿ ಗಾಯಗೊಂಡಿದ್ದು, ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚುವ ಆತಂಕವನ್ನು ರೈಲ್ವೆ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.ವರ್ಷದ ಎರಡನೇ ದೊಡ್ಡ ಅಪಘಾತ ಇದು ಈ ವರ್ಷ ಸ್ಪೇನ್ನಲ್ಲಿ ಸಂಭವಿಸಿದ ಎರಡನೇ ದೊಡ್ಡ ರೈಲು ಅಪಘಾತವಾಗಿದೆ. ಅಪಘಾತಕ್ಕೆ ನಿಖರ ಕಾರಣ ಇನ್ನೂ ಗೊತ್ತಾಗಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ಸ್ಪೇನ್ ಪ್ರಧಾನಿ ಪೆದ್ರೊ ಸ್ಯಾಂಚೆಜ್ ದುರಂತದಿಂದಾಗಿ ತಮಗೆ ಆಘಾತ ಉಂಟಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ. ಸ್ಪೇನ್ನ ಫುಟ್ಬಾಲ್ ಫೆಡರೇಷನ್, ಕೋಪಾ ಡೆಲ್ ರೇ ಗೇಮ್ಸ್ ಭಾಗವಾಗಿ ಬುಧವಾರ ನಡೆಯಬೇಕಿದ್ದ ಎಲ್ಲ ಪಂದ್ಯಗಳನ್ನು ರದ್ದುಪಡಿಸಿತು. ಅಪಘಾತಕ್ಕೆ ನಿಖರವಾದ ಕಾರಣ ಏನೆಂದು ಇನ್ನೂ ತಿಳಿಯಬೇಕಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.