ಮೈಸೂರು | ದಸರಾ ವಸ್ತು ಪ್ರದರ್ಶನ: ಆರ್ಡಿಪಿಅರ್ ಮಳಿಗೆ ಉದ್ಘಾಟನೆ
ಮೈಸೂರು: ಇಲ್ಲಿನ ದಸರಾ ವಸ್ತುಪ್ರದರ್ಶನದಲ್ಲಿ ರೂಪಿಸಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಇಲಾಖೆಯ ಮಳಿಗೆಯನ್ನು ಸಚಿವ ಈಶ್ವರ ಬಿ. ಖಂಡ್ರೆ ಬುಧವಾರ ಉದ್ಘಾಟಿಸಿ, ವೀಕ್ಷಿಸಿದರು.ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಯೋಜನೆ, ಇ-ಸ್ವತ್ತು, ಗ್ರಾಮೀಣ ರಸ್ತೆ, ಗ್ರಾಮೀಣ ವಸತಿ ಯೋಜನೆ, ವಿಬಿಜಿ ರಾಮ್ ಜಿ ಮಾಹಿತಿಯ ಜೊತೆಗೆ ಫಲವೃಕ್ಷೋದ್ಯಾನ, ಬಸ್ ತಂಗುದಾಣ

ಮೈಸೂರು: ಇಲ್ಲಿನ ದಸರಾ ವಸ್ತುಪ್ರದರ್ಶನದಲ್ಲಿ ರೂಪಿಸಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಇಲಾಖೆಯ ಮಳಿಗೆಯನ್ನು ಸಚಿವ ಈಶ್ವರ ಬಿ. ಖಂಡ್ರೆ ಬುಧವಾರ ಉದ್ಘಾಟಿಸಿ, ವೀಕ್ಷಿಸಿದರು.ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಯೋಜನೆ, ಇ-ಸ್ವತ್ತು, ಗ್ರಾಮೀಣ ರಸ್ತೆ, ಗ್ರಾಮೀಣ ವಸತಿ ಯೋಜನೆ, ವಿಬಿಜಿ ರಾಮ್ ಜಿ ಮಾಹಿತಿಯ ಜೊತೆಗೆ ಫಲವೃಕ್ಷೋದ್ಯಾನ, ಬಸ್ ತಂಗುದಾಣಗಳ ನಿರ್ಮಾಣ ಇತ್ಯಾದಿ ಮಾಹಿತಿಯನ್ನು ಮಳಿಗೆಯಲ್ಲಿ ಪಡೆಯಬಹುದಾಗಿದೆ.ಈ ವೇಳೆ ಮಾತನಾಡಿದ ಸಚಿವರು, ‘ಅರಮನೆಗಳ ನಗರಿ ಮೈಸೂರಿಗೆ ವರ್ಷದ 365 ದಿನವೂ ಪ್ರವಾಸಿಗರು ಬರುವ ಕಾರಣದಿಂದ ದೊಡ್ಡಕೆರೆ ಮೈದಾನದಲ್ಲಿ ಶಾಶ್ವತವಾದ ವಸ್ತುಪ್ರದರ್ಶನ ತಾಣ ಮಾಡಬೇಕು’ ಎಂದು ಸಲಹೆ ನೀಡಿದರು.‘ಪ್ರತಿ ವರ್ಷ ದಸರಾ ಅಂಗವಾಗಿ 90 ದಿನಗಳ ವಸ್ತುಪ್ರದರ್ಶನ ನಡೆಯುತ್ತದೆ. ಆಗ, ತಾತ್ಕಾಲಿಕ ಮಳಿಗೆ ಮಾಡುವ ಬದಲು ಶಾಶ್ವತ ಮಳಿಗೆ ಮಾಡಿದರೆ ವರ್ಷವಿಡೀ ನವ ನವೀನ ವಿಚಾರಗಳನ್ನು ಪ್ರದರ್ಶಿಸಲು ಅವಕಾಶ ಆಗುತ್ತದೆ’ ಎಂದು ಅಭಿಪ್ರಾಯಪಟ್ಟರು.‘ಮೈಸೂರು ಪ್ರವಾಸಿಗರ ಸ್ವರ್ಗವಾಗಿದ್ದು, ದಸರಾ ಸಂದರ್ಭದಲ್ಲಿ ಅಷ್ಟೇ ಅಲ್ಲದೆ ವರ್ಷವಿಡೀ ಇಲ್ಲಿಗೆ ಪ್ರವಾಸಿಗರು ಆಗಮಿಸುತ್ತಾರೆ. ಜೊತೆಗೆ ವಸ್ತುಪ್ರದರ್ಶನ ಮೈದಾನ ಅರಮನೆಯ ಮುಂಭಾಗದಲ್ಲೇ ಇರುವ ಕಾರಣ ವರ್ಷವಿಡೀ ಜನರು ಬರಬಹುದಾಗಿದೆ. ಈ ಬಗ್ಗೆ ಸಾಧಕ–ಬಾಧಕಗಳ ಚರ್ಚೆ ಆಗಬೇಕು’ ಎಂದರು.ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ರಾಜ್ಯ ಉಪಾಧ್ಯಕ್ಷ ಪುಷ್ಪಾ ಅಮರನಾಥ್, ಜಿಲ್ಲಾ ಪಂಚಾಯಿತಿ ಸಿಇಒ ಎಸ್.ಯುಕೇಶ್ಕುಮಾರ್ ಮತ್ತು ಅಧಿಕಾರಿಗಳು ಇದ್ದರು.