ಟಾಟಾ ಸಮೂಹವನ್ನು ನಾಶಪಡಿಸಲಾಗುತ್ತಿದೆ: ಉದ್ಯಮಿಗಳ ಮೌನ ಪ್ರಶ್ನಿಸಿದ ರಾಹುಲ್
ನವದೆಹಲಿ: ‘ಟಾಟಾ ಸಮೂಹವನ್ನು ಉದ್ದೇಶಪೂರ್ವಕವಾಗಿ ನಾಶಪಡಿಸಲಾಗುತ್ತಿದೆ. ಆದರೆ, ಯಾವೊಬ್ಬ ಉದ್ಯಮಿಯು ಇದರ ಬಗ್ಗೆ ಮಾತನಾಡಲು ಧೈರ್ಯ ತೋರುತ್ತಿಲ್ಲ’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.ಟಾಟಾ ಸಮೂಹದ ನಾಯಕತ್ವದ ವಿಚಾರವಾಗಿ ನಡೆಯುತ್ತಿರುವ ತೀವ್ರ ವಿವಾದದ ನಡುವೆಯೇ ರಾಹುಲ್ ಗಾಂಧಿ ಈ ಹೇಳಿಕೆ ನೀಡಿದ್ದಾರೆ.ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಮಾಡ

ನವದೆಹಲಿ: ‘ಟಾಟಾ ಸಮೂಹವನ್ನು ಉದ್ದೇಶಪೂರ್ವಕವಾಗಿ ನಾಶಪಡಿಸಲಾಗುತ್ತಿದೆ. ಆದರೆ, ಯಾವೊಬ್ಬ ಉದ್ಯಮಿಯು ಇದರ ಬಗ್ಗೆ ಮಾತನಾಡಲು ಧೈರ್ಯ ತೋರುತ್ತಿಲ್ಲ’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.ಟಾಟಾ ಸಮೂಹದ ನಾಯಕತ್ವದ ವಿಚಾರವಾಗಿ ನಡೆಯುತ್ತಿರುವ ತೀವ್ರ ವಿವಾದದ ನಡುವೆಯೇ ರಾಹುಲ್ ಗಾಂಧಿ ಈ ಹೇಳಿಕೆ ನೀಡಿದ್ದಾರೆ.ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ‘ಟಾಟಾ ಸಮೂಹವನ್ನು ನಾಶಪಡಿಸಲಾಗುತ್ತಿದೆ. ಒಬ್ಬನೇ ಒಬ್ಬ ಉದ್ಯಮಿಯೂ ಇದರ ಬಗ್ಗೆ ಒಂದು ಮಾತು ಆಡಲು ಧೈರ್ಯ ತೋರುತ್ತಿಲ್ಲ. ನೀವು ಇನ್ನೆಷ್ಟು ದಿನ ಮೌನವಾಗಿರುತ್ತೀರಿ? ನಿಮ್ಮನ್ನು ಅಧೀನಕ್ಕೆ ತೆಗೆದುಕೊಳ್ಳುವವರೆಗೂ ಕಾಯುತ್ತೀರಾ?’ ಎಂದು ಪ್ರಶ್ನಿಸಿದ್ದಾರೆ.Tata is being criminally destroyed, and no business leader dares say a word. How long will you stay silent? Until they own you? Indian business is not Modi and Shah's plaything. You lack courage. We don't. We will ensure justice for these crimes.— Rahul Gandhi (@RahulGandhi) October 28, 2026 ‘ನಿಮಗೆ ಧೈರ್ಯವಿಲ್ಲ. ಆದರೆ ನಮಗೆ ಧೈರ್ಯವಿದೆ. ಇಂತಹ ಅಪರಾಧಗಳಿಗೆ ನಾವು ನ್ಯಾಯ ಒದಗಿಸುತ್ತೇವೆ’ ಎಂದು ಹೇಳಿದ್ದಾರೆ.ಮುಂದುವರಿದು, ‘ಭಾರತದ ಉದ್ಯಮ ವಲಯವು ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರ ಆಟದ ವಸ್ತುವಲ್ಲ’ ಎಂದಿದ್ದಾರೆ.ರಾಹುಲ್ ಗಾಂಧಿಯವರ ಈ ಆರೋಪಗಳಿಗೆ ಕೇಂದ್ರ ಸರ್ಕಾರವಾಗಲಿ ಅಥವಾ ಟಾಟಾ ಸಮೂಹವಾಗಲಿ ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.ಟಾಟಾ ಸಮೂಹದ ವಿವಾದವೇನು?ಟಾಟಾ ಸನ್ಸ್ನ ಅಧ್ಯಕ್ಷರಾಗಿ ಎನ್. ಚಂದ್ರಶೇಖರನ್ ಅವರನ್ನು ಮರುನೇಮಕ ಮಾಡುವ ನಿರ್ಣಯವನ್ನು ಟಾಟಾ ಟ್ರಸ್ಟ್ಗಳ ಅಧ್ಯಕ್ಷ ನೋಯೆಲ್ ಟಾಟಾ ವಿರೋಧಿಸಿದ್ದರು.‘ಚಂದ್ರಶೇಖರನ್ ಅವರ ಮರುನೇಮಕದ ನಿರ್ಣಯವನ್ನು ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಕೈಗೊಳ್ಳಲಾಗಿದೆ ಮತ್ತು ಅದು ಸಭೆಯ ಕಾರ್ಯಸೂಚಿಯಲ್ಲಿಯೇ ಇರಲಿಲ್ಲ’ ಎಂದು ನೋಯೆಲ್ ಅವರು ಆಕ್ಷೇಪಿಸಿದ್ದರು.ಇದು ಕಂಪನಿಯ ಒಳಗೆ ಮೂಡುತ್ತಿರುವ ಭಿನ್ನಾಭಿಪ್ರಾಯವನ್ನು ಬಹಿರಂಗಪಡಿಸಿತ್ತು.