ಎಸ್ಎಸ್ಎಲ್ಸಿ, ಪಿಯುಸಿ ಪರೀಕ್ಷೆಗಳ ಅಂತಿಮ ವೇಳಾಪಟ್ಟಿ ಪ್ರಕಟ; ಇಲ್ಲಿದೆ ವಿವರ
ಬೆಂಗಳೂರು: ಪ್ರಸಕ್ತ ಸಾಲಿನ ದ್ವಿತೀಯ ಪಿಯು, ಎಸ್ಎಸ್ಎಲ್ಸಿ ಪರೀಕ್ಷೆಗಳ ಅಂತಿಮ ವೇಳಾಪಟ್ಟಿಯನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಗುರುವಾರ ಪ್ರಕಟಿಸಿದ್ದು, ಫೆ.27ರಿಂದ ಪಿಯು ಹಾಗೂ ಮಾರ್ಚ್ 22ರಿಂದ ಎಸ್ಎಸ್ಎಲ್ಸಿ ಪರೀಕ್ಷೆಗಳು ಆರಂಭವಾಗಲಿವೆ.ಜನವರಿ, ಫೆಬ್ರುವರಿಯಲ್ಲಿ ನಡೆಯಲಿರುವ ಜನಗಣತಿ ಕಾರಣಕ್ಕಾಗಿ ಪರೀಕ್ಷೆ ಗಳನ್ನು ಮುಂದೂಡಲಾಗುತ

ಬೆಂಗಳೂರು: ಪ್ರಸಕ್ತ ಸಾಲಿನ ದ್ವಿತೀಯ ಪಿಯು, ಎಸ್ಎಸ್ಎಲ್ಸಿ ಪರೀಕ್ಷೆಗಳ ಅಂತಿಮ ವೇಳಾಪಟ್ಟಿಯನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಗುರುವಾರ ಪ್ರಕಟಿಸಿದ್ದು, ಫೆ.27ರಿಂದ ಪಿಯು ಹಾಗೂ ಮಾರ್ಚ್ 22ರಿಂದ ಎಸ್ಎಸ್ಎಲ್ಸಿ ಪರೀಕ್ಷೆಗಳು ಆರಂಭವಾಗಲಿವೆ.ಜನವರಿ, ಫೆಬ್ರುವರಿಯಲ್ಲಿ ನಡೆಯಲಿರುವ ಜನಗಣತಿ ಕಾರಣಕ್ಕಾಗಿ ಪರೀಕ್ಷೆ ಗಳನ್ನು ಮುಂದೂಡಲಾಗುತ್ತದೆ ಎಂಬ ಊಹಾಪೋಹಗಳಿಗೆ ತೆರೆ ಎಳೆದಿರುವ ಪರೀಕ್ಷಾ ಮಂಡಳಿ, ತಾತ್ಕಾಲಿಕ ವೇಳಾಪಟ್ಟಿಯನ್ನೇ ಅಂತಿಮಗೊಳಿಸಿದೆ. ಮಾರ್ಚ್ 16ಕ್ಕೆ ನಡೆಯಬೇಕಿದ್ದ ಇತಿಹಾಸ ವಿಷಯದ ಪರೀಕ್ಷೆಯನ್ನಷ್ಟೇ ಬದಲಾವಣೆ ಮಾಡಿ, ಮಾರ್ಚ್ 18ಕ್ಕೆ ಮರುನಿಗದಿ ಮಾಡಿದೆ.ದ್ವಿತೀಯ ಪಿಯು ಪರೀಕ್ಷಾ ವೇಳಾಪಟ್ಟಿ: ಫೆ.27–ಕನ್ನಡ, ಅರೇಬಿಕ್, ಮಾರ್ಚ್ 1–ಇಂಗ್ಲಿಷ್, ಮಾರ್ಚ್ 2–ತೆಲುಗು, ತಮಿಳು, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್, ಮಲೆಯಾಳ, ಮಾರ್ಚ್ 3–ಭೂಗೋಳ ಶಾಸ್ತ್ರ, ಮನಃಶಾಸ್ತ್ರ, ಮಾರ್ಚ್ 4–ಸಮಾಜ ಶಾಸ್ತ್ರ, ಭೌತವಿಜ್ಞಾನ , ಮಾರ್ಚ್ 5–ಲೆಕ್ಕಶಾಸ್ತ್ರ, ಮಾರ್ಚ್ 8–ರಸಾಯನವಿಜ್ಞಾನ, ಶಿಕ್ಷಣ ಶಾಸ್ತ್ರ, ಮೂಲ ಗಣಿತ, ಮಾರ್ಚ್ 9–ಅರ್ಥಶಾಸ್ತ್ರ, ಭೂಗರ್ಭ ಶಾಸ್ತ್ರ, ಮಾರ್ಚ್ 11–ಹಿಂದೂಸ್ತಾನಿ ಸಂಗೀತ, ಮಾಹಿತಿ ತಂತ್ರಜ್ಞಾನ, ರಿಟೇಲ್, ಆಟೊಮೊಬೈಲ್, ಹೆಲ್ತ್ಕೇರ್, ಬ್ಯೂಟಿ ಆ್ಯಂಡ್ ವೆಲ್ನೆಸ್, ಮಾರ್ಚ್ 12–ವ್ಯವಹಾರ ಅಧ್ಯಯನ, ಗಣಿತ, ಮಾರ್ಚ್ 13–ಐಚ್ಛಿಕ ಕನ್ನಡ, ತರ್ಕಶಾಸ್ತ್ರ, ಗೃಹ ವಿಜ್ಞಾನ, ಮಾರ್ಚ್ 15–ರಾಜ್ಯಶಾಸ್ತ್ರ, ಜೀವವಿಜ್ಞಾನ, ಗಣಕ ವಿಜ್ಞಾನ, ಮಾರ್ಚ್ 16–ಸಂಖ್ಯಾಶಾಸ್ತ್ರ, ವಿದ್ಯುನ್ಮಾನ ಶಾಸ್ತ್ರ, ಮಾರ್ಚ್ 17–ಹಿಂದಿ, ಮಾರ್ಚ್ 18–ಇತಿಹಾಸ.ಎಸ್ಎಸ್ಎಲ್ಸಿ ಪರೀಕ್ಷಾ ವೇಳಾಪಟ್ಟಿ: ಮಾರ್ಚ್ 22–ಪ್ರಥಮ ಭಾಷೆಗಳಾದ ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲಿಷ್ (ಎನ್ಸಿಇಆರ್ಟಿ), ಸಂಸ್ಕೃತ, ಮಾರ್ಚ್ 25–ವಿಜ್ಞಾನ, ರಾಜ್ಯಶಾಸ್ತ್ರ, ಹಿಂದೂಸ್ತಾನಿ, ಕರ್ನಾಟಕ ಸಂಗೀತ, ಮಾರ್ಚ್ 27–ದ್ವಿತೀಯ ಭಾಷೆಗಳಾದ ಇಂಗ್ಲಿಷ್, ಕನ್ನಡ, ಮಾರ್ಚ್ 30–ಗಣಿತ, ಸಮಾಜಶಾಸ್ತ್ರ, ಏಪ್ರಿಲ್ 2–ತೃತೀಯ ಭಾಷೆಗಳಾದ ಹಿಂದಿ, ಕನ್ನಡ, ಇಂಗ್ಲಿಷ್, ಅರೇಬಿಕ್, ಪರ್ಷಿಯನ್, ಉರ್ದು, ಸಂಸ್ಕೃತ, ಕೊಂಕಣಿ, ತುಳು, ಎನ್ಎಸ್ಕ್ಯೂಎಫ್ ವಿಷಯಗಳು, ಏಪ್ರಿಲ್ 3–ಅರ್ಥಶಾಸ್ತ್ರ, ಎಂಜಿನಿಯರಿಂಗ್ ವಿಷಯಗಳು, ಏಪ್ರಿಲ್ 5–ಸಮಾಜ ವಿಜ್ಞಾನಪರೀಕ್ಷೆ–2 ವೇಳಾಪಟ್ಟಿ: ದ್ವಿತೀಯ ಪಿಯು ಪರೀಕ್ಷೆ–2 ಮೇ 3ರಿಂದ ಆರಂಭವಾಗಿ 15ಕ್ಕೆ ಮುಕ್ತಾಯವಾಗಲಿದೆ. ಎಸ್ಎಸ್ಎಲ್ಸಿ ಪರೀಕ್ಷೆ–2 ಮೇ 24 ರಿಂದ ಆರಂಭವಾಗಿ 31ಕ್ಕೆ ಮುಕ್ತಾಯವಾಗಲಿದೆ.