ಬಿಜೆಪಿ ಶಾಸಕನ ಮನೆಗೆ ನುಗ್ಗಿದ ಕಳ್ಳ: ನಗದು, ಆಭರಣಗಳೊಂದಿಗೆ ಪರಾರಿ
ಜೈಪುರ: ಬಿಜೆಪಿಯ ಹಿರಿಯ ಶಾಸಕ ಮತ್ತು ರಾಜಸ್ಥಾನದ ಮಾಜಿ ಸಚಿವ ಪ್ರತಾಪ್ ಸಿಂಗ್ ಸಿಂಘ್ವಿ ಅವರ ಮನೆಗೆ ನುಗ್ಗಿದ ವ್ಯಕ್ತಿ, ನಗದು ಮತ್ತು ಆಭರಣಗಳನ್ನು ದೋಚಿಕೊಂಡು ಪರಾರಿಯಾಗಿದ್ದಾನೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.ಆರೋಪಿಯು, ಗುರುವಾರ ಮುಂಜಾನೆ ಅಡುಗೆ ಮನೆಯ ಕಿಟಕಿ ಒಡೆದು ಒಳಗೆ ಪ್ರವೇಶಿಸಿದ್ದು, ಸುಮಾರು ಒಂದು ಗಂಟೆ ಮನೆಯೊಳಗೆ ಇದ್ದ ಎಂದ

ಜೈಪುರ: ಬಿಜೆಪಿಯ ಹಿರಿಯ ಶಾಸಕ ಮತ್ತು ರಾಜಸ್ಥಾನದ ಮಾಜಿ ಸಚಿವ ಪ್ರತಾಪ್ ಸಿಂಗ್ ಸಿಂಘ್ವಿ ಅವರ ಮನೆಗೆ ನುಗ್ಗಿದ ವ್ಯಕ್ತಿ, ನಗದು ಮತ್ತು ಆಭರಣಗಳನ್ನು ದೋಚಿಕೊಂಡು ಪರಾರಿಯಾಗಿದ್ದಾನೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.ಆರೋಪಿಯು, ಗುರುವಾರ ಮುಂಜಾನೆ ಅಡುಗೆ ಮನೆಯ ಕಿಟಕಿ ಒಡೆದು ಒಳಗೆ ಪ್ರವೇಶಿಸಿದ್ದು, ಸುಮಾರು ಒಂದು ಗಂಟೆ ಮನೆಯೊಳಗೆ ಇದ್ದ ಎಂದು ಅವರು ತಿಳಿಸಿದ್ದಾರೆ.ಅತಿ ಹೆಚ್ಚು ಭದ್ರತೆ ಇರುವ ಸಿವಿಲ್ ಲೈನ್ಸ್ ಪ್ರದೇಶದಲ್ಲಿರುವ ಇವರ ನಿವಾಸವು ರಾಜಭವನ ಮತ್ತು ಮುಖ್ಯಮಂತ್ರಿ ನಿವಾಸದ ಸಮೀಪದಲ್ಲಿಯೇ ಇದೆ.ಸುಮಾರು ₹1.5 ಲಕ್ಷ ನಗದು ಮತ್ತು ಆಭರಣಗಳು ಕಳುವಾಗಿವೆ ಎಂದು ಸಿಂಘ್ವಿ ಅವರ ಆಪ್ತ ಸಹಾಯಕ ರಾಜ್ವೀರ್ ಸಿಂಗ್ ತಿಳಿಸಿದ್ದಾರೆ. ಆ ಸಮಯದಲ್ಲಿ ಕುಟುಂಬ ಸದಸ್ಯರು ನಿದ್ರಿಸುತ್ತಿದ್ದರು.ಆರೋಪಿಗೆ ಮನೆಯ ಬಗ್ಗೆ ಪೂರ್ತಿ ಮಾಹಿತಿ ಇದ್ದಂತೆ ಕಾಣುತ್ತಿದೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದ್ದು, ಆತನನ್ನು ಬಂಧಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಉಪ ಪೊಲೀಸ್ ಆಯುಕ್ತ (ದಕ್ಷಿಣ) ರಾಜರ್ಷಿ ರಾಜ್ ಹೇಳಿದ್ದಾರೆ.ವಿಧಿವಿಜ್ಞಾನ ತಂಡವು ಸ್ಥಳಕ್ಕೆ ಭೇಟಿ ನೀಡಿ ಸಾಕ್ಷ್ಯಗಳನ್ನು ಸಂಗ್ರಹಿಸಿದೆ. ಕಳವಿನ ವಿಚಾರ ತಿಳಿಯುತ್ತಿದ್ದಂತೆ ಶಾಸಕ ಸಿಂಘ್ವಿ ಅವರು ಜೈಪುರ ಪೊಲೀಸ್ ಕಮಿಷನರ್ ಅವರೊಂದಿಗೆ ಮಾತನಾಡಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.