ಮದುವೆ ಆಗುವ ಹುಡುಗನಿಗೆ ಈ ಐದು ಗುಣಗಳಿರಬೇಕು ಎಂದ ನಟಿ ಸಾಯಿ ಪಲ್ಲವಿ
ಬಹುನಿರೀಕ್ಷಿತ ‘ರಾಮಾಯಣ’ ಸಿನಿಮಾ ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ಇದೇ ಹೊತ್ತಲ್ಲೇ ಚಿತ್ರದ ಪ್ರಮುಖ ತಾರೆಯರಾದ ನಟಿ ಸಾಯಿ ಪಲ್ಲವಿ, ರಣಬೀರ್ ಕಪೂರ್ ಹಾಗೂ ರವಿ ದುಬೆ ಅವರು ‘ಕೌನ್ ಬನೇಗಾ ಕರೋಡ್ಪತಿ ಸೀಸನ್ 18’ರ ದೀಪಾವಳಿ ವಿಶೇಷ ಸಂಚಿಕೆಯಲ್ಲಿ ಭಾಗವಹಿಸಿದ್ದಾರೆ.ಈ ಸಂಚಿಕೆಯಲ್ಲಿ ಸಾಯಿ ಪಲ್ಲವಿ ಅವರು ತಮ್ಮ ಭಾವಿ ಪತಿಯಲ್ಲಿ ಇರಬೇಕಾದ ಐದು ಪ್ರಮುಖ ಗುಣಗಳ ಕುರಿತು

ಬಹುನಿರೀಕ್ಷಿತ ‘ರಾಮಾಯಣ’ ಸಿನಿಮಾ ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ಇದೇ ಹೊತ್ತಲ್ಲೇ ಚಿತ್ರದ ಪ್ರಮುಖ ತಾರೆಯರಾದ ನಟಿ ಸಾಯಿ ಪಲ್ಲವಿ, ರಣಬೀರ್ ಕಪೂರ್ ಹಾಗೂ ರವಿ ದುಬೆ ಅವರು ‘ಕೌನ್ ಬನೇಗಾ ಕರೋಡ್ಪತಿ ಸೀಸನ್ 18’ರ ದೀಪಾವಳಿ ವಿಶೇಷ ಸಂಚಿಕೆಯಲ್ಲಿ ಭಾಗವಹಿಸಿದ್ದಾರೆ.ಈ ಸಂಚಿಕೆಯಲ್ಲಿ ಸಾಯಿ ಪಲ್ಲವಿ ಅವರು ತಮ್ಮ ಭಾವಿ ಪತಿಯಲ್ಲಿ ಇರಬೇಕಾದ ಐದು ಪ್ರಮುಖ ಗುಣಗಳ ಕುರಿತು ಮುಕ್ತವಾಗಿ ಹಂಚಿಕೊಂಡಿದ್ದಾರೆ. ಕಾರ್ಯಕ್ರಮದ ನಿರೂಪಕ ಅಮಿತಾಭ್ ಬಚ್ಚನ್ ಅವರು ಜೀವನ ಸಂಗಾತಿಯ ಆಯ್ಕೆಯ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಾಯಿ ಪಲ್ಲವಿ, ‘ನನ್ನ ಬಳಿ ದೊಡ್ಡ ಪಟ್ಟಿಯೇನೂ ಇಲ್ಲ, ಆದರೆ ಅವರು ಮೊದಲು ಉತ್ತಮ ಮನುಷ್ಯನಾಗಿರಬೇಕು’ ಎಂದಿದ್ದಾರೆ.ಓಂ ಅಧ್ಯಾಯ 1: ಖಡಕ್ IPS ಅಧಿಕಾರಿ ಪಾತ್ರದಲ್ಲಿ ನಟಿ ಸಾಯಿ ಪಲ್ಲವಿ ಮಿಂಚಿಂಗ್ಯಶ್ಗೆ ದೊಡ್ಡ ಮಟ್ಟದ ಸಿನಿಮಾ ಮಾಡಬೇಕೆಂಬ ಹಸಿವಿದೆ: ನಟಿ ಸಾಯಿ ಪಲ್ಲವಿ View this post on Instagram ಸಾಯಿ ಪಲ್ಲವಿ ಅಪೇಕ್ಷಿಸುವ ಪತಿಯ ಗುಣಗಳೇನು?‘ಮೊದಲನೆಯದಾಗಿ, ಪ್ರತಿಯೊಬ್ಬರೂ ಗೌರವಿಸುವಂತಹ ಉತ್ತಮ ವ್ಯಕ್ತಿತ್ವ ಹೊಂದಿರಬೇಕು. ಅತಿಯಾದ ಸ್ವಾರ್ಥಿಯಾಗಿರಬಾರದು. ತಮ್ಮ ನಡವಳಿಕೆ ಸರಿ-ತಪ್ಪು ಎಂಬುದನ್ನು ಸ್ವಯಂ ಪರಿಶೀಲಿಸಿಕೊಳ್ಳುವ ಗುಣವಿರಬೇಕು ಹಾಗೂ ಜೀವನದ ಸ್ಥಿತಿಗತಿಯ ಬಗ್ಗೆ ಸ್ಪಷ್ಟ ಅರಿವಿರಬೇಕು. ಮನುಷ್ಯ ಅಂದಮೇಲೆ ತಪ್ಪು ಮಾಡುವುದು ಸಹಜ, ಆದರೆ ಮಾಡಿದ ತಪ್ಪನ್ನು ತಾವೇ ತಿದ್ದುಕೊಳ್ಳಬೇಕೇ ಹೊರತು ಇನ್ನೊಬ್ಬರ ಮೇಲೆ ದೂಷಿಸಬಾರದು. ಇವುಗಳ ಜೊತೆಗೆ ಅವರಿಗೆ ಅಡುಗೆ ಮಾಡಲು ತಿಳಿದಿದ್ದರೆ ಇನ್ನೂ ಉತ್ತಮ’ ಎಂದು ಸಾಯಿ ಪಲ್ಲವಿ ಹೇಳಿದ್ದಾರೆ.‘ಸೀತಾ ಮಾತಾ’ ಪಾತ್ರದ ಕುರಿತು ಭಾವುಕ...ಇನ್ನು, ಕೌನ್ ಬನೇಗಾ ಕರೋಡ್ಪತಿ ವೇದಿಕೆ ಮೇಲೆ ‘ರಾಮಾಯಣ’ ಚಿತ್ರದಲ್ಲಿ ಸೀತಾ ಮಾತೆಯ ಪಾತ್ರದಲ್ಲಿ ನಟಿಸಲು ಅವಕಾಶ ಒದಗಿ ಬಂದಾಗ ಆದ ಅನುಭವವನ್ನು ಸಾಯಿ ಪಲ್ಲವಿ ಹಂಚಿಕೊಂಡಿದ್ದಾರೆ. ‘ಸಾಮಾನ್ಯವಾಗಿ ಪ್ರತಿಯೊಂದು ಪಾತ್ರ ಮಾಡುವಾಗ ಈ ಪಾತ್ರಕ್ಕೆ ನಾನು ಏನು ನೀಡಬಲ್ಲೆ? ಎಂದು ಆಲೋಚಿಸುತ್ತಿದ್ದೆ. ಆದರೆ ಸೀತಾ ಮಾತೆಯ ಪಾತ್ರ ಸಿಕ್ಕಾಗ, ಈ ಪಾತ್ರ ಮಾಡುವುದರಿಂದ ನನಗೆ ಸಿಗುವ ಜ್ಞಾನವೇನು? ಎಂದು ಆಲೋಚಿಸಿದೆ. ಹೀಗಾಗಿ ಯಾವುದೇ ಗೊಂದಲವಿಲ್ಲದೆ, ಸೀತಾ ಮಾತೆಗೆ ಪ್ರಾರ್ಥನೆ ಸಲ್ಲಿಸಿ ಈ ಪಾತ್ರವನ್ನು ಒಪ್ಪಿಕೊಂಡೆ’ ಎಂದು ಹೇಳಿದ್ದಾರೆ.