ಸಿಇಸಿ ಜ್ಞಾನೇಶ್ ವಿರುದ್ಧದ ವಿಜಿಲೆನ್ಸ್ ತನಿಖೆ ಪ್ರಗತಿಯಲ್ಲಿದೆ: ಕೇರಳ ಸಚಿವ
ತಿರುವನಂತಪುರ: ಸುಮಾರು ಎರಡು ದಶಕಗಳ ಹಿಂದೆ ಈಗಿನ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ಅವರು ಲೋಕೋಪಯೋಗಿ ಇಲಾಖೆ (ಪಿಡಬ್ಲ್ಯುಡಿ) ಕಾರ್ಯದರ್ಶಿಯಾಗಿದ್ದ ವೇಳೆ ನಡೆದ ರಸ್ತೆ ಕಾಮಗಾರಿಯ ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಿಸಿದಂತೆ ವಿಜಿಲೆನ್ಸ್ ಮತ್ತು ಭ್ರಷ್ಟಾಚಾರ ನಿಗ್ರಹ ದಳ (ವಿಎಸಿಬಿ) ನಡೆಸುತ್ತಿರುವ ಪ್ರಾಥಮಿಕ ತನಿಖೆ ಪ್ರಗತಿಯಲ್ಲಿದೆ ಎಂದು ಕೇರಳ ಲೋ

ತಿರುವನಂತಪುರ: ಸುಮಾರು ಎರಡು ದಶಕಗಳ ಹಿಂದೆ ಈಗಿನ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ಅವರು ಲೋಕೋಪಯೋಗಿ ಇಲಾಖೆ (ಪಿಡಬ್ಲ್ಯುಡಿ) ಕಾರ್ಯದರ್ಶಿಯಾಗಿದ್ದ ವೇಳೆ ನಡೆದ ರಸ್ತೆ ಕಾಮಗಾರಿಯ ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಿಸಿದಂತೆ ವಿಜಿಲೆನ್ಸ್ ಮತ್ತು ಭ್ರಷ್ಟಾಚಾರ ನಿಗ್ರಹ ದಳ (ವಿಎಸಿಬಿ) ನಡೆಸುತ್ತಿರುವ ಪ್ರಾಥಮಿಕ ತನಿಖೆ ಪ್ರಗತಿಯಲ್ಲಿದೆ ಎಂದು ಕೇರಳ ಲೋಕೋಪಯೋಗಿ ಇಲಾಖೆ ಸಚಿವ ಪಿ.ಕೆ. ಬಶೀರ್ ಗುರುವಾರ ತಿಳಿಸಿದ್ದಾರೆ.ತನಿಖೆಯ ವರದಿ ಇನ್ನೂ ಲಭ್ಯವಾಗಿಲ್ಲ ಎಂದೂ ಅವರು ಹೇಳಿದ್ದಾರೆ. ಕೇರಳ ವಿಧಾನಸಭೆಯಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿ ಶಾಸಕರುಗಳಾದ ಬಿ.ಬಿ. ಗೋಪಕುಮಾರ್, ವಿ. ಮುರಳೀಧರನ್ ಮತ್ತು ರಾಜೀವ್ ಚಂದ್ರಶೇಖರ್ ಅವರು ಈ ಪ್ರಕರಣದ ವಿಜಿಲೆನ್ಸ್ ತನಿಖೆಯ ಸ್ಥಿತಿಗತಿಯ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ಸಚಿವ ಬಶೀರ್ ಸದನಕ್ಕೆ ಉತ್ತರಿಸಿದ್ದಾರೆ. 2006ರ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಎಸಿಬಿ ನಡೆಸಿದ್ದ ತನಿಖೆಯಲ್ಲಿ ಕೆಲವು ವ್ಯತ್ಯಾಸಗಳು ಹಾಗೂ ಲೋಪಗಳು ಕಂಡುಬಂದ ಹಿನ್ನೆಲೆಯಲ್ಲಿ ಈಗ ಮತ್ತೆ ಪ್ರಾಥಮಿಕ ತನಿಖೆಗೆ ಆದೇಶಿಸಲಾಗಿದೆ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ. ಈ ಯೋಜನೆಯಲ್ಲಿ ಅಧಿಕಾರಿಗಳು ಎಸಗಿದ್ದಾರೆನ್ನಲಾದ ಅಕ್ರಮಗಳಿಂದಾಗಿ ಸರ್ಕಾರಕ್ಕೆ ಬರೋಬ್ಬರಿ ₹700 ಕೋಟಿ ನಷ್ಟ ಉಂಟಾಗಿದೆ ಎಂದು ಅವರು ತಿಳಿಸಿದ್ದಾರೆ. ಸಿಇಸಿ ಜ್ಞಾನೇಶ್ ಕುಮಾರ್ ಅವರು ಪಿಡಬ್ಲ್ಯುಡಿ ಕಾರ್ಯದರ್ಶಿಯಾಗಿದ್ದಾಗ 2006ರಲ್ಲಿ ಕೈಗೊಂಡಿದ್ದ ಕೇರಳ ರಾಜ್ಯ ಸಾರಿಗೆ ಯೋಜನೆ (ಕೆಎಸ್ಟಿಪಿ) ಕಾಮಗಾರಿಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರದ ಪ್ರಕರಣ ಇದಾಗಿದೆ. ಸಿಇಸಿ ಜ್ಞಾನೇಶ್ ಕುಮಾರ್ ‘ವೋಟ್ ಚೋರಿ’ ಜಾರಿಗೆ ತಂದಿದ್ದಾರೆ: ರಾಹುಲ್ ಗಾಂಧಿ ಆರೋಪಜ್ಞಾನೇಶ್ ವಿರುದ್ಧ ಕ್ರಮಕ್ಕೆ ಮನವಿ: ಇಸಿಐ, ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ನೋಟಿಸ್