ಮೂಕುತಿ ಅಮ್ಮನ್ 2: 60 ಅಡಿ ನಯನತಾರಾ ಕಟೌಟ್ ನಿಲ್ಲಿಸಿದ ಅಭಿಮಾನಿಗಳು
ಲೇಡಿ ಸೂಪರ್ ಸ್ಟಾರ್ ನಯನತಾರಾ ಅಭಿನಯದ ‘ಮೂಕುತಿ ಅಮ್ಮನ್ 2’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈಗಾಗಲೇ ಸಿನಿಮಾದ ಟ್ರೇಲರ್ ಅಭಿಮಾನಿಗಳಿಂದ ಮೆಚ್ಚುಗೆ ಪಡೆದುಕೊಂಡಿದ್ದು, ಸಿನಿಮಾದ ಕುರಿತು ನಿರೀಕ್ಷೆಗಳನ್ನು ಹುಟ್ಟುಹಾಕಿದೆ.ಸಿನಿಮಾ ಬಿಡುಗಡೆಗೂ ಮುನ್ನವೇ ಚೆನ್ನೈನ ವೆಲ್ಸ್ ಚಿತ್ರಮಂದಿರದ ಮುಂಭಾಗದಲ್ಲಿ ದೇವಿಯ ರೂಪದಲ್ಲಿರುವ ನಯನತಾರಾ ಅವರ 60 ಅಡಿ ಎತ್ತರದ ಬೃಹತ್ ಕಟೌ
ಲೇಡಿ ಸೂಪರ್ ಸ್ಟಾರ್ ನಯನತಾರಾ ಅಭಿನಯದ ‘ಮೂಕುತಿ ಅಮ್ಮನ್ 2’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈಗಾಗಲೇ ಸಿನಿಮಾದ ಟ್ರೇಲರ್ ಅಭಿಮಾನಿಗಳಿಂದ ಮೆಚ್ಚುಗೆ ಪಡೆದುಕೊಂಡಿದ್ದು, ಸಿನಿಮಾದ ಕುರಿತು ನಿರೀಕ್ಷೆಗಳನ್ನು ಹುಟ್ಟುಹಾಕಿದೆ.ಸಿನಿಮಾ ಬಿಡುಗಡೆಗೂ ಮುನ್ನವೇ ಚೆನ್ನೈನ ವೆಲ್ಸ್ ಚಿತ್ರಮಂದಿರದ ಮುಂಭಾಗದಲ್ಲಿ ದೇವಿಯ ರೂಪದಲ್ಲಿರುವ ನಯನತಾರಾ ಅವರ 60 ಅಡಿ ಎತ್ತರದ ಬೃಹತ್ ಕಟೌಟ್ ನಿಲ್ಲಿಸಲಾಗಿದೆ. ಇದು ದೇಶದಲ್ಲೇ ಮಹಿಳಾ ನಟಿಯೊಬ್ಬರಿಗೆ ನಿಲ್ಲಿಸಲಾದ ಅತಿ ಎತ್ತರದ ಕಟೌಟ್ ಎನ್ನಲಾಗಿದೆ.‘ಮೂಕುತಿ ಅಮ್ಮನ್ 2’: ದ್ವಿಪಾತ್ರದಲ್ಲಿ ನಟಿ ನಯನತಾರಾ; ಖಳನಾಯಕನಾದ ದುನಿಯಾ ವಿಜಯ್'ಮೂಕುತಿ ಅಮ್ಮನ್ 2' ಸಿನಿಮಾ ನವೆಂಬರ್ 6 ರಂದು ಬಿಡುಗಡೆಯಾಗಲಿದೆ. ಸಾಮಾನ್ಯ ದಿನಗಳಲ್ಲಿ ಸಿನಿಮಾ ಬಿಡುಗಡೆಯ ವೇಳೆ ಕಟೌಟ್ ನಿಲ್ಲಿಸಲಾಗುತ್ತದೆ. ಆದರೆ ಸಿನಿಮಾ ಬಿಡುಗಡೆಗೆ ಇನ್ನೂ ಒಂದು ವಾರ ಬಾಕಿ ಇರುವಾಗಲೇ ಕಟೌಟ್ ನಿಲ್ಲಿಸಿ ಸಂಭ್ರಮಾಚರಣೆ ಆರಂಭಿಸಲಾಗಿದೆ. ಈ ಕುರಿತು ‘ಡೆಕ್ಕನ್ ಕ್ರಾನಿಕಲ್ಗೆ’ ಪ್ರತಿಕ್ರಿಯಿಸಿರುವ ನಿರ್ಮಾಪಕ ಕೋನ ವೆಂಕಟ್, ‘ನಯನತಾರಾ ಅವರ ಜನಪ್ರಿಯತೆ ಯಾವ ಪುರುಷ ನಟರಿಗೂ ಕಡಿಮೆಯಿಲ್ಲ’ ಎಂದಿದ್ದಾರೆ.'ಜೈಲರ್–2’ ಅಬ್ಬರ: ಮೊದಲ ದಿನದ ಗಳಿಕೆಯತ್ತ ಕಣ್ಣು‘ಚಿರಂಜೀವಿ, ಬಾಲಕೃಷ್ಣ, ಮಹೇಶ್ ಬಾಬು ಹಾಗೂ ಜೂನಿಯರ್ ಎನ್ಟಿಆರ್ ಅವರ ಸಿನಿಮಾಗಳು ಬಿಡುಗಡೆಯಾದಾಗ ಇಂತಹ ಬೃಹತ್ ಕಟೌಟ್ಗಳನ್ನು ನಿಲ್ಲಿಸಲಾಗುತ್ತದೆ. ಈಗ ನಿಲ್ಲಿಸಲಾಗಿರುವ ಕಟೌಟ್, ನಯನತಾರಾ ಅವರ ಅಭಿಮಾನಿಗಳ ಬಳಗ ಎಷ್ಟು ದೊಡ್ಡದಾಗಿ ಬೆಳೆದಿದೆ ಎಂಬುದಕ್ಕೆ ಸಾಕ್ಷಿಯಾಗಿದೆ’ ಎಂದು ಅವರು ಹೇಳಿದ್ದಾರೆ.ಮಾಲ್ಡೀವ್ಸ್ ಕಡಲ ತೀರದಲ್ಲಿ ಲೇಡಿ ಸೂಪರ್ ಸ್ಟಾರ್ ನಯನತಾರಾ ಮಿಂಚಿಂಗ್A towering 60-feet cutout at Vels Theatres adds to the grand spiritual celebration! A @sundarcoffl Mega Divine Entertainer! #MookuthiAmman2 pic.twitter.com/Vwp6IEji8i— Vinodh (@itz_anandhas) October 24, 2026 ಈ ಸಿನಿಮಾವನ್ನು ಸುಂದರ್ ಸಿ. ನಿರ್ದೇಶಿಸಿದ್ದಾರೆ. ಇದು ತನ್ನ ಮಗನನ್ನು ಶತ್ರುಗಳಿಂದ ರಕ್ಷಿಸಲು ಪ್ರಾಣತ್ಯಾಗ ಮಾಡುವ ಒಬ್ಬ ರಾಣಿಯ ಕಥೆಯಿಂದ ಕೂಡಿದೆ. ಆ ಮಗನನ್ನು ಹಾಗೂ ಮುಗ್ಧ ಜನರನ್ನು ರಕ್ಷಿಸಲು ಮೂಕುತಿ ಅಮ್ಮನ್ ದುಷ್ಟ ಶಕ್ತಿಗಳ ವಿರುದ್ಧ ಹೇಗೆ ಹೋರಾಡುತ್ತಾಳೆ ಎಂಬುದೇ ಈ ಚಿತ್ರದ ಪ್ರಮುಖ ಕಥಾಹಂದರ. ಚಿತ್ರದ ಪ್ರಮುಖ ಪಾತ್ರಗಳಲ್ಲಿ ಊರ್ವಶಿ, ಯೋಗಿ ಬಾಬು, ಅಭಿನಯ ಹಾಗೂ ಶ್ರುತಿ ಎಸ್. ಸೇರಿದಂತೆ ಹಲವು ತಾರೆಯರು ನಟಿಸಿದ್ದಾರೆ.