ಆಫ್ಲೈನ್ ಖರೀದಿಗೆ ಕೆಳ ಮಧ್ಯಮ ವರ್ಗದ ಕುಟುಂಬಗಳ ಆದ್ಯತೆ
ಆನ್ಲೈನ್ ವೇದಿಕೆಗಳ ಮೂಲಕ ಖರೀದಿ ಸುವುದಕ್ಕಿಂತ ಆಫ್ಲೈನ್ ಮೂಲಕವೇ ಸರಕು ಮತ್ತು ಸೇವೆಗಳನ್ನು ಪಡೆಯಲು ಕೆಳ ಮಧ್ಯಮ ವರ್ಗದ ಕುಟುಂಬಗಳು ಆದ್ಯತೆ ನೀಡುತ್ತಿವೆ.ಈ ವರ್ಗದ ಹೆಚ್ಚಿನ ಕುಟುಂಬಗಳು ಕಿರಾಣಿ, ಗೃಹಬಳಕೆ ಉಪಕರಣಗಳು, ಮೊಬೈಲ್ ಫೋನ್ಗಳು, ಬಟ್ಟೆಗಳು, ಔಷಧಗಳನ್ನು ಮಳಿಗೆಗಳಿಗೆ ನೇರವಾಗಿ ಭೇಟಿ ನೀಡಿ ಖರೀದಿ ಮಾಡುತ್ತಿವೆ.ಆಫ್ಲೈನ್ ಮೂಲಕ ಕಿರಾಣಿ ಸರಕುಗಳನ್ನು ಖ

ಆನ್ಲೈನ್ ವೇದಿಕೆಗಳ ಮೂಲಕ ಖರೀದಿ ಸುವುದಕ್ಕಿಂತ ಆಫ್ಲೈನ್ ಮೂಲಕವೇ ಸರಕು ಮತ್ತು ಸೇವೆಗಳನ್ನು ಪಡೆಯಲು ಕೆಳ ಮಧ್ಯಮ ವರ್ಗದ ಕುಟುಂಬಗಳು ಆದ್ಯತೆ ನೀಡುತ್ತಿವೆ.ಈ ವರ್ಗದ ಹೆಚ್ಚಿನ ಕುಟುಂಬಗಳು ಕಿರಾಣಿ, ಗೃಹಬಳಕೆ ಉಪಕರಣಗಳು, ಮೊಬೈಲ್ ಫೋನ್ಗಳು, ಬಟ್ಟೆಗಳು, ಔಷಧಗಳನ್ನು ಮಳಿಗೆಗಳಿಗೆ ನೇರವಾಗಿ ಭೇಟಿ ನೀಡಿ ಖರೀದಿ ಮಾಡುತ್ತಿವೆ.ಆಫ್ಲೈನ್ ಮೂಲಕ ಕಿರಾಣಿ ಸರಕುಗಳನ್ನು ಖರೀದಿಸುವವರ ಪ್ರಮಾಣ ಶೇ 82ರಷ್ಟಿದ್ದರೆ, ಆನ್ಲೈನ್ ವೇದಿಕೆಗಳ ಮೂಲಕ ಖರೀದಿಸುವವರು ಶೇ 18ರಷ್ಟಿದ್ದಾರೆ. ಆನ್ಲೈನ್ ಮೂಲಕ ಬಸ್ ಮತ್ತು ರೈಲು ಟಿಕೆಟ್ ಕಾಯ್ದಿರಿಸುವವರ ಪ್ರಮಾಣ ಶೇ 21ರಷ್ಟಿದೆ. 2025ರಲ್ಲಿ ಆಫ್ಲೈನ್ ವೇದಿಕೆಗಳ ಮೂಲಕ ಗೃಹೋಪಕರಣ ವಸ್ತುಗಳನ್ನು ಖರೀದಿಸುವವರ ಪ್ರಮಾಣ ಶೇ 84ರಷ್ಟಿತ್ತು. ಅದು ಈ ಬಾರಿ ಶೇ 80ಕ್ಕೆ ಇಳಿದಿದೆ.ವಸ್ತುಗಳನ್ನು ಖರೀದಿಸುವ ಮೊದಲು ಅವುಗಳನ್ನು ನೋಡಿ, ಪರೀಕ್ಷಿಸುತ್ತಿದ್ದಾರೆ. ಸ್ಥಳೀಯ ಮಳಿಗೆಗಳಲ್ಲಿ ಸರಕುಗಳು ತ್ವರಿತವಾಗಿ ಸಿಗುವುದು, ಆ್ಯಪ್ಗಳಿಗಿಂತಲೂ ಮಳಿಗೆಗಳ ಮೇಲೆ ಹೆಚ್ಚು ನಂಬಿಕೆ ಇರುವುದು ಆಫ್ಲೈನ್ ಖರೀದಿ ಹೆಚ್ಚಿರಲು ಕಾರಣವಾಗಿದೆ.ಹೋಂ ಕ್ರೆಡಿಟ್ ಇಂಡಿಯಾ ಸಿದ್ಧಪಡಿಸಿರುವ ಈ ವರದಿಯು 2025 ಮತ್ತು 2026ರಲ್ಲಿನ ಖರೀದಿ ಪ್ರವೃತ್ತಿಗಳನ್ನು ಹೋಲಿಸಿದೆ. ಆಫ್ಲೈನ್ ಖರೀದಿಯು ಈ ವರ್ಷದಲ್ಲಿ ಅಲ್ಪ ಪ್ರಮಾಣದಲ್ಲಿ ಇಳಿಕೆ ಆಗಿದ್ದರೂ, ಸಿಂಹಪಾಲು ಉಳಿಸಿಕೊಂಡಿದೆ ಎಂದು ತಿಳಿಸಿದೆ.ಡಿಜಿಟಲ್ ಪಾವತಿ ಹೆಚ್ಚುತ್ತಿ ದ್ದರೂ, ಕೆಳ ಮಧ್ಯಮ ವರ್ಗದ ಕುಟುಂಬಗಳು ಡಿಜಿಟಲ್ ವಿಧಾನದ ಮೂಲಕ ಪಾವತಿಸಿದಷ್ಟೇ ನಗದು ವಿಧಾನದ ಮೂಲಕವೂ ಪಾವತಿಸುತ್ತಿವೆ.ರಿಟೇಲ್ ಪಾವತಿ ಮತ್ತು ಬಿಲ್ ಪಾವತಿಗೆ ಆಫ್ಲೈನ್ ಮಾರ್ಗ ಬಳಸುತ್ತಿದ್ದಾರೆ. ಸಾಲ ತೆಗೆದುಕೊಳ್ಳಲು ಡಿಜಿಟಲ್ ಮಾರ್ಗವನ್ನು ಬಳಸುತ್ತಿದ್ದಾರೆ. ಬಿಲ್ ಪಾವತಿಸಲು ಆಫ್ಲೈನ್ ಮಾರ್ಗ ಬಳಸುವವರು 2025ರಲ್ಲಿ ಶೇ 43ರಷ್ಟಿದ್ದರು. ಅದು 2026ರಲ್ಲಿ ಶೇ 59ಕ್ಕೆ ಹೆಚ್ಚಳವಾಗಿದೆ. ಆನ್ಲೈನ್ ವಿಧಾನದಿಂದ ಪಾವತಿಸುವವರ ಪ್ರಮಾಣ ಶೇ 54ರಿಂದ ಶೇ 39ಕ್ಕೆ ಇಳಿದಿದೆ.261029-51-1147625305