ಡಿಜಿಟಲ್ ಅರೆಸ್ಟ್: ಬ್ಯಾಂಕ್ಗಳೇ ಪರಿಹಾರ ನೀಡಲಿ–ಸುಪ್ರೀಂ ಕೋರ್ಟ್
ನವದೆಹಲಿ: ‘ಡಿಜಿಟಲ್ ಅರೆಸ್ಟ್ ವಂಚನೆಗಳಲ್ಲಿ, ಬ್ಯಾಂಕ್ಗಳು ಸರಿಯಾದ ಮುನ್ನೆಚ್ಚರಿಕೆ ಅಥವಾ ಪರಿಶೀಲನೆ ನಡೆಸದೆ ವಂಚಕರ ಖಾತೆಗಳಿಗೆ ಹಣ ವರ್ಗಾವಣೆಯಾಗಿರುವುದು ಪತ್ತೆಯಾದರೆ, ಸಂತ್ರಸ್ತರಿಗೆ ಆದ ನಷ್ಟವನ್ನು ಬ್ಯಾಂಕ್ಗಳೇ ತುಂಬಿಕೊಡಬೇಕು’ ಎಂದು ಸುಪ್ರೀಂ ಕೋರ್ಟ್ ಹೇಳಿದೆ.ಡಿಜಿಟಲ್ ಅರೆಸ್ಟ್ ಹಗರಣಗಳ ಮೂಲಕ ನಡೆಯುತ್ತಿರುವ ವ್ಯಾಪಕ ಹಣಕಾಸು ವಂಚನೆಗಳಿಗೆ ಸಂಬಂಧಿಸಿ

ನವದೆಹಲಿ: ‘ಡಿಜಿಟಲ್ ಅರೆಸ್ಟ್ ವಂಚನೆಗಳಲ್ಲಿ, ಬ್ಯಾಂಕ್ಗಳು ಸರಿಯಾದ ಮುನ್ನೆಚ್ಚರಿಕೆ ಅಥವಾ ಪರಿಶೀಲನೆ ನಡೆಸದೆ ವಂಚಕರ ಖಾತೆಗಳಿಗೆ ಹಣ ವರ್ಗಾವಣೆಯಾಗಿರುವುದು ಪತ್ತೆಯಾದರೆ, ಸಂತ್ರಸ್ತರಿಗೆ ಆದ ನಷ್ಟವನ್ನು ಬ್ಯಾಂಕ್ಗಳೇ ತುಂಬಿಕೊಡಬೇಕು’ ಎಂದು ಸುಪ್ರೀಂ ಕೋರ್ಟ್ ಹೇಳಿದೆ.ಡಿಜಿಟಲ್ ಅರೆಸ್ಟ್ ಹಗರಣಗಳ ಮೂಲಕ ನಡೆಯುತ್ತಿರುವ ವ್ಯಾಪಕ ಹಣಕಾಸು ವಂಚನೆಗಳಿಗೆ ಸಂಬಂಧಿಸಿದ ಸ್ವಯಂಪ್ರೇರಿತ ಪ್ರಕರಣದ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿಗಳಾದ ಜಾಯ್ಮಾಲ್ಯಾ ಬಾಗ್ಚಿ ಮತ್ತು ವಿ. ಮೋಹನಾ ಅವರನ್ನೊಳಗೊಂಡ ಪೀಠವು ಈ ಅಭಿಪ್ರಾಯಪಟ್ಟಿದೆ. ‘ಎಲ್ಲಿ ಇಂತಹ ವಂಚನೆಗಳು ನಡೆಯುತ್ತವೆಯೋ, ಅಲ್ಲಿ ಬ್ಯಾಂಕ್ಗಳೇ ಸಂತ್ರಸ್ತರಿಗೆ ಪರಿಹಾರ ನೀಡಬೇಕು. ಇಲ್ಲದಿದ್ದರೆ ಕಾನೂನು ಕ್ರಮವನ್ನು ಎದುರಿಸಬೇಕು ಎಂದು ನಿರ್ದೇಶಿಸಲು ನಾವು ಪ್ರಸ್ತಾಪಿಸುತ್ತಿದ್ದೇವೆ. ಇದನ್ನು ಮಾಡಲೇಬೇಕಾಗಿದೆ’ ಎಂದು ಸಿಜೆಐ ಹೇಳಿದ್ದಾರೆ.‘ಇಂತಹ ವಂಚನೆಗಳಿಗೆ ತುತ್ತಾಗುವ ಗ್ರಾಹಕರಿಗೆ ಬ್ಯಾಂಕ್ಗಳು ರಕ್ಷಕರಾಗಿ ಕೆಲಸ ಮಾಡಬೇಕು’ ಎಂದಿದ್ದಾರೆ.ಮುಂದಿನ ವಿಚಾರಣೆ ವೇಳೆಗೆ ಎಲ್ಲಾ ಅಧಿಕೃತ ಹಣಕಾಸು ಸಂಸ್ಥೆಗಳ ಪಟ್ಟಿಯನ್ನು ಸಲ್ಲಿಸುವಂತೆ ಭಾರತೀಯ ರಿಸರ್ವ್ ಬ್ಯಾಂಕ್ಗೆ ಸೂಚಿಸಿದೆ. ಅಂತಹ ಎಲ್ಲಾ ಸಂಸ್ಥೆಗಳಿಗೆ ಅನ್ವಯವಾಗುವಂತೆ ನಿರ್ದೇಶನಗಳನ್ನು ನೀಡುವುದಾಗಿ ಪೀಠವು ತಿಳಿಸಿದೆ.‘ನಮಗೆ ಆಘಾತ ತಂದಿರುವ ವಿಷಯವೆಂದರೆ– ಜನರು ಇದನ್ನು ಏಕೆ ಅರ್ಥ ಮಾಡಿಕೊಳ್ಳುತ್ತಿಲ್ಲ? ಸಂತ್ರಸ್ತರಿಗೆ ಏನಾಗಿದೆ? ಅವರು ಸಾಮಾನ್ಯ ವ್ಯಕ್ತಿಗಳಲ್ಲವೇ?’ ಎಂದು ಸಿಜೆಐ ಹೇಳಿದ್ದಾರೆ.‘ಮೊಬೈಲ್ ಸ್ಕ್ರೀನ್ ಮೂಲಕ ಯಾರನ್ನೂ ಬಂಧಿಸಲು ಸಾಧ್ಯವಿಲ್ಲ. ಹಾಗಾಗಿ ಇಂತಹ ವಂಚಕ ಕರೆಗಳಿಗೆ ಹೆದರಬೇಡಿ’ ಎಂದಿದ್ದಾರೆ.‘ನಿಮ್ಮ ಹೆಸರಿನಲ್ಲಿ ನಿಜವಾಗಿಯೂ ಕೋರ್ಟ್ ನೋಟಿಸ್ ಅಥವಾ ಆದೇಶವಿದ್ದರೆ, ಅದನ್ನು ನ್ಯಾಯಾಲಯದ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಪರಿಶೀಲಿಸಬಹುದು. ಅದನ್ನು ಬಿಟ್ಟು ಮೊಬೈಲ್ ಕರೆಗೆ ಹೆದರಬಾರದು’ ಎಂದು ತಿಳಿಸಿದ್ದಾರೆ.‘ನಿಲ್ಲದ ವಂಚನೆ’: ‘ಈ ಸಮಸ್ಯೆಯನ್ನು ತಡೆಯಲು ಸರ್ಕಾರ ಮತ್ತು ಪೊಲೀಸರು ಪ್ರಯತ್ನಿಸುತ್ತಿದ್ದರೂ ವಂಚನೆಗಳು ನಿಲ್ಲುತ್ತಿಲ್ಲ. ಇತ್ತೀಚೆಗೆ ಮಹಿಳೆಯೊಬ್ಬರು ಇಂತಹದ್ದೇ ಡಿಜಿಟಲ್ ಅರೆಸ್ಟ್ ವಂಚನೆಗೆ ಒಳಗಾಗಿ ₹2.5 ಕೋಟಿ ಕಳೆದುಕೊಂಡಿದ್ದಾರೆ’ ಎಂದು ವಕೀಲೆ ಎನ್.ಎಸ್. ನಪ್ಪಿನೈ ಅವರು ಪೀಠದ ಗಮನಕ್ಕೆ ತಂದಿದ್ದಾರೆ.‘ಶೇ 50ರಷ್ಟು ಪ್ರಕರಣ ಕುಸಿತ’‘ನ್ಯಾಯಾಲಯದ ಮಧ್ಯಪ್ರವೇಶದ ನಂತರ ಡಿಜಿಟಲ್ ಅರೆಸ್ಟ್ ಪ್ರಕರಣಗಳು ಶೇ 50ರಷ್ಟು ಕಡಿಮೆಯಾಗಿವೆ. ಬ್ಯಾಂಕ್ಗಳು ಈಗ ಅನುಮಾನಾಸ್ಪದ ವಹಿವಾಟುಗಳನ್ನು ಗುರುತಿಸುತ್ತಿವೆ. ನಿಯಮಗಳನ್ನು ರೂಪಿಸುವ ಕುರಿತು ಆರ್ಬಿಐ ಜೊತೆ ಸಭೆಗಳನ್ನು ನಡೆಸಲಾಗಿದೆ’ ಎಂದು ಅಟಾರ್ನಿ ಜನರಲ್ ಆರ್. ವೆಂಕಟರಮಣಿ ಅವರು ಪೀಠಕ್ಕೆ ತಿಳಿಸಿದ್ದಾರೆ.