ಅಮೆರಿಕದಲ್ಲಿ ‘ಆರ್ಎಸ್ಎಸ್ ಫ್ರೆಂಡ್ಸ್’ ಸಂಘಟನೆ ನೋಂದಣಿ: ಏನಿದು? ಉದ್ದೇಶವೇನು?
ವಾಷಿಂಗ್ಟನ್: ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಬಗ್ಗೆ ಅಮೆರಿಕದಲ್ಲಿ ಸಂಪರ್ಕ, ಪ್ರಚಾರ ಹೆಚ್ಚಿಸಲು, ಸಂಘದ ಹಿತೈಷಿಗಳ ಗುಂಪೊಂದು ಅಮೆರಿಕದ ನ್ಯಾಯಾಂಗ ಇಲಾಖೆಯಲ್ಲಿ ವಿದೇಶಿ ಪ್ರತಿನಿಧಿ ಸಂಘಟನೆಯಾಗಿ ನೋಂದಾಯಿಸಿಕೊಂಡಿದೆ.ಸುಳ್ಳಿನ ಸಂಕಥನ ಸಲ್ಲ: ರಾಹುಲ್ ಗಾಂಧಿ ಹೇಳಿಕೆಗೆ ಪ್ರತಿಕ್ರಿಯಿಸಿದ ಆರ್ಎಸ್ಎಸ್ ‘ಆರ್ಎಸ್ಎಸ್ ಫ್ರೆಂಡ್ಸ್’ ಎಂಬ ಹೆಸರಿನ

ವಾಷಿಂಗ್ಟನ್: ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಬಗ್ಗೆ ಅಮೆರಿಕದಲ್ಲಿ ಸಂಪರ್ಕ, ಪ್ರಚಾರ ಹೆಚ್ಚಿಸಲು, ಸಂಘದ ಹಿತೈಷಿಗಳ ಗುಂಪೊಂದು ಅಮೆರಿಕದ ನ್ಯಾಯಾಂಗ ಇಲಾಖೆಯಲ್ಲಿ ವಿದೇಶಿ ಪ್ರತಿನಿಧಿ ಸಂಘಟನೆಯಾಗಿ ನೋಂದಾಯಿಸಿಕೊಂಡಿದೆ.ಸುಳ್ಳಿನ ಸಂಕಥನ ಸಲ್ಲ: ರಾಹುಲ್ ಗಾಂಧಿ ಹೇಳಿಕೆಗೆ ಪ್ರತಿಕ್ರಿಯಿಸಿದ ಆರ್ಎಸ್ಎಸ್ ‘ಆರ್ಎಸ್ಎಸ್ ಫ್ರೆಂಡ್ಸ್’ ಎಂಬ ಹೆಸರಿನ ಈ ಗುಂಪು ನೋಂದಣಿ ವೇಳೆ ಜಾರ್ಜಿಯಾದ ವಿಳಾಸವನ್ನು ನೀಡಿದೆ. ನವದೆಹಲಿಯ ಕೇಶವಕುಂಜದಲ್ಲಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ತನ್ನ ‘ವಿದೇಶಿ ಪ್ರಧಾನ ಸಂಸ್ಥೆ’ ಎಂದು ಉಲ್ಲೇಖಿಸಿದೆ. ವಿದೇಶಿ ಪ್ರತಿನಿಧಿಗಳ ನೋಂದಣಿ ಕಾಯ್ದೆ (ಎಫ್ಎಆರ್ಎ) ಅಡಿಯಲ್ಲಿ ಆರ್ಎಸ್ಎಸ್ ಫ್ರೆಂಡ್ಸ್ ಆಗಸ್ಟ್ 27ರಂದು ಅಮೆರಿಕದ ನ್ಯಾಯಾಂಗ ಇಲಾಖೆಯಲ್ಲಿ ನೋಂದಾಯಿಸಿಕೊಂಡಿದೆ.ಆರ್ಎಸ್ಎಸ್ ಕುರಿತು ತಪ್ಪು, ಅಪೂರ್ಣ ಮಾಹಿತಿ ಇದೆ ಎಂದು ಭಾವಿಸಿದರೆ, ಅದನ್ನು ಸರಿಪಡಿಸುವುದು ಅಥವಾ ಅದಕ್ಕೆ ಪ್ರತಿಕ್ರಿಯೆ ನೀಡುವುದು ಕೂಡ ಸಂಘಟನೆಯ ಉದ್ದೇಶ ಎಂದು ಅದು ಹೇಳಿಕೊಂಡಿದೆ. ಆರ್ಎಸ್ಎಸ್ ಜತೆಗೆ ಯಾವುದೇ ಲಿಖಿತ ಉದ್ಯೋಗ, ಸಲಹಾ, ಲಾಬಿ ಅಥವಾ ಸಾರ್ವಜನಿಕ ಸಂಪರ್ಕ ಒಪ್ಪಂದ ಮಾಡಿಕೊಂಡಿಲ್ಲ ಎಂದು ಆರ್ಎಸ್ಎಸ್ ಫ್ರೆಂಡ್ಸ್ ತಿಳಿಸಿದೆ.ಆದರೆ, ಲಿಖಿತ ಒಪ್ಪಂದ ಇಲ್ಲ ಎಂಬುದನ್ನು ಸಂಘಟನೆಯೊಂದಿಗೆ ಯಾವುದೇ ಸಂಬಂಧ, ಮನವಿ, ತಿಳಿವಳಿಕೆ, ಸಮನ್ವಯ, ಅನುಮತಿ, ನಿರ್ದೇಶನ ಅಥವಾ ಇತರ ಸಂಬಂಧಿತ ವಾಸ್ತವ ಸಂಪರ್ಕವೇ ಇಲ್ಲ ಎಂದು ಪರಿಗಣಿಸಬಾರದು ಎಂದು ಅದು ಸ್ಪಷ್ಟಪಡಿಸಿದೆ. ಚುನಾವಣಾ ಆಯೋಗ ಬಿಜೆಪಿ, ಆರ್ಎಸ್ಎಸ್ ಕೈಗೊಂಬೆ ಎಂದ ಶಾಸಕ ಮಾಹಿತಿ ಪ್ರಸಾರ, ಶೈಕ್ಷಣಿಕ ಕಾರ್ಯ, ಸಾರ್ವಜನಿಕ ಸಂಪರ್ಕ ಮತ್ತು ಸಮುದಾಯದೊಂದಿಗೆ ತೊಡಗಿಸಿಕೊಳ್ಳುವುದು ತನ್ನ ಮುಖ್ಯ ಚಟುವಟಿಕೆ ಎಂದು ಅದು ತಿಳಿಸಿದೆ.ಕಾನೂನಿಗೆ ಅನುಗುಣವಾಗಿ ಸಾರ್ವಜನಿಕರು, ಪತ್ರಕರ್ತರು, ಮಾಧ್ಯಮಗಳು, ಸಂಶೋಧಕರು, ಶೈಕ್ಷಣಿಕ ಸಂಸ್ಥೆಗಳು, ಸಮುದಾಯದ ನಾಯಕರು ಹಾಗೂ ಅಗತ್ಯವಿದ್ದಾಗ ಸರ್ಕಾರಿ ಅಧಿಕಾರಿಗಳೊಂದಿಗೆ ಸಂವಹನ ನಡೆಸುವುದಾಗಿ ಆರ್ಎಸ್ಎಸ್ ಫ್ರೆಂಡ್ಸ್ ತಿಳಿಸಿದೆ.ಆರ್ಎಸ್ಎಸ್ ಅನ್ನು ಭಾರತ ಮೂಲದ ಸ್ವಯಂಸೇವಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಘಟನೆ ಎಂದು ಆರ್ಎಸ್ಎಸ್ ಫ್ರೆಂಡ್ಸ್ ವಿವರಿಸಿದೆ. ನೋಂದಣಿ ದಾಖಲೆಯಲ್ಲಿ ಆರ್ಎಸ್ಎಸ್ ಅನ್ನು ನೋಂದಾಯಿತ ಸಂಸ್ಥೆಯಲ್ಲದ ವ್ಯಕ್ತಿಗಳ ಸಂಘ ಎಂದು ಉಲ್ಲೇಖಿಸಿದೆ.ಆರ್ಎಸ್ಎಸ್ ಫ್ರೆಂಡ್ಸ್ನ ನಿರ್ದೇಶಕರ ಮಂಡಳಿಯಲ್ಲಿ ರಾಜೇಂದ್ರ ಸೋನಾರಿಕರ್, ಜಯಂತ್ ಪಂತ್ ಮತ್ತು ದೇವಾನಂದ ಗಡ್ಡಂ ಅವರಿದ್ದಾರೆ. ಭಾರತದಲ್ಲಿ ಆಡಳಿತ ಬದಲಾವಣೆ ಸಾಧ್ಯವಿಲ್ಲ: ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್