ಬೆಂಗಳೂರು ನಗರ ಜಿಲ್ಲಾ ಸಮ್ಮೇಳನಾಧ್ಯಕ್ಷರಾಗಿ ಶೂದ್ರ ಶ್ರೀನಿವಾಸ್
ಆನೇಕಲ್: ಬೆಂಗಳೂರು ನಗರ ಜಿಲ್ಲೆಯ 17ನೇ ಕನ್ನಡ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷರಾಗಿ ಆನೇಕಲ್ ತಾಲ್ಲೂಕಿನ ಶೂದ್ರ ಶ್ರೀನಿವಾಸ್ ಆಯ್ಕೆಯಾಗಿದ್ದು, ತಾಲ್ಲೂಕು ಸಾಹಿತ್ಯ ಅಭಿಮಾನಿಗಳ ಬಳಗ ಮತ್ತು ಜೇನುಗೂಡು ಸಾಹಿತ್ಯ ಸಾಂಸ್ಕೃತಿಕ ವೇದಿಕೆಯಿಂದ ಬುಧವಾರ ಅವರನ್ನು ಅಭಿನಂದಿಸಲಾಯಿತು.ಲೇಖಕ ತಾ.ನಂ.ಕುಮಾರಸ್ವಾಮಿ, ‘1973ರಲ್ಲಿ ಶೂದ್ರ ಪತ್ರಿಕೆಯನ್ನು ಸ್ಥಾಪಿಸಿ ತಮ್ಮ ನು

ಆನೇಕಲ್: ಬೆಂಗಳೂರು ನಗರ ಜಿಲ್ಲೆಯ 17ನೇ ಕನ್ನಡ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷರಾಗಿ ಆನೇಕಲ್ ತಾಲ್ಲೂಕಿನ ಶೂದ್ರ ಶ್ರೀನಿವಾಸ್ ಆಯ್ಕೆಯಾಗಿದ್ದು, ತಾಲ್ಲೂಕು ಸಾಹಿತ್ಯ ಅಭಿಮಾನಿಗಳ ಬಳಗ ಮತ್ತು ಜೇನುಗೂಡು ಸಾಹಿತ್ಯ ಸಾಂಸ್ಕೃತಿಕ ವೇದಿಕೆಯಿಂದ ಬುಧವಾರ ಅವರನ್ನು ಅಭಿನಂದಿಸಲಾಯಿತು.ಲೇಖಕ ತಾ.ನಂ.ಕುಮಾರಸ್ವಾಮಿ, ‘1973ರಲ್ಲಿ ಶೂದ್ರ ಪತ್ರಿಕೆಯನ್ನು ಸ್ಥಾಪಿಸಿ ತಮ್ಮ ನುರಿತ ಲೇಖನಗಳ ಮೂಲಕ ಸಮಾಜದ ತಪ್ಪುಗಳನ್ನು ತಿಳಿಸಿದ ಶೂದ್ರ ಶ್ರೀನಿವಾಸ್ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಆಯ್ಕೆಯಾಗಿರುವುದುತಾಲ್ಲೂಕಿಗೆ ಹೆಮ್ಮೆಯ ವಿಷಯ’ ಎಂದರುಅ.30, 31ರಂದು ಬೆಂಗಳೂರಿನಲ್ಲಿ ನಡೆಯಲಿರುವ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ತಾಲ್ಲೂಕಿನ ಸಾಹಿತ್ಯಾಸಕ್ತರು ಪಾಲ್ಗೊಳ್ಳಬೇಕು ಎಂದರು.ಜೇನುಗೂಡು ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಕಾರ್ಯದರ್ಶಿ ಮಹೇಶ್ ಊಗಿನಹಳ್ಳಿ, ಸಾಹಿತ್ಯ ಬಳಗದ ನಾಗವೇಣಿ, ಮಲ್ಟಿಮೀಡಿಯಾ ಚಂದ್ರ, ಜಯಶಂಕರ್, ಕಿಶನ್, ಪ್ರೀತಿ ಉಪಸ್ಥಿತರಿದ್ದರು.261029-15-185164525
Read the complete story at Prajavani