ಕಬ್ಬಿಗೆ ಬೆಂಬಲ ಬೆಲೆ; ಬೆಂಗಳೂರಲ್ಲಿ ಕೇಂದ್ರ ಸಮಿತಿ ಸಭೆ, ರೈತರ ಬೇಡಿಕೆ ಸಲ್ಲಿಕೆ
ಬೆಂಗಳೂರು: ಕರ್ನಾಟಕದಲ್ಲಿ ಕಳೆದ ಒಂದು ತಿಂಗಳಿನಿಂದ ನಡೆದಿರುವ ಕಬ್ಬು ಬೆಳೆಗಾರರ ಹೋರಾಟದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ರಚಿಸಿರುವ ತಜ್ಞರ ಸಮಿತಿಯು ಬೆಂಗಳೂರಿನಲ್ಲಿ ಗುರುವಾರ ಸಭೆ ನಡೆಸಿದೆ.ನೀತಿ ಆಯೋಗದ ಸದಸ್ಯ ಹಾಗೂ ಕಬ್ಬು ಬೆಳೆಗಾರರ ಸಮಸ್ಯೆಗಳ ಕುರಿತ ಸಮಿತಿ ಮುಖ್ಯಸ್ಥ ರಮೇಶ್ ಚಂದ್ರ ಅವರು ರೈತ ಪ್ರತಿನಿಧಿಗಳು, ಸಕ್ಕರೆ ಕಾರ್ಖಾನೆ ಪ್ರಮುಖರು, ಬೆಳಗಾರರು ಹಾಗ
ಬೆಂಗಳೂರು: ಕರ್ನಾಟಕದಲ್ಲಿ ಕಳೆದ ಒಂದು ತಿಂಗಳಿನಿಂದ ನಡೆದಿರುವ ಕಬ್ಬು ಬೆಳೆಗಾರರ ಹೋರಾಟದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ರಚಿಸಿರುವ ತಜ್ಞರ ಸಮಿತಿಯು ಬೆಂಗಳೂರಿನಲ್ಲಿ ಗುರುವಾರ ಸಭೆ ನಡೆಸಿದೆ.ನೀತಿ ಆಯೋಗದ ಸದಸ್ಯ ಹಾಗೂ ಕಬ್ಬು ಬೆಳೆಗಾರರ ಸಮಸ್ಯೆಗಳ ಕುರಿತ ಸಮಿತಿ ಮುಖ್ಯಸ್ಥ ರಮೇಶ್ ಚಂದ್ರ ಅವರು ರೈತ ಪ್ರತಿನಿಧಿಗಳು, ಸಕ್ಕರೆ ಕಾರ್ಖಾನೆ ಪ್ರಮುಖರು, ಬೆಳಗಾರರು ಹಾಗೂ ಉದ್ಯಮದಲ್ಲಿ ನಿರತ ವಿವಿಧ ತಜ್ಞರೊಂದಿಗೆ ಚರ್ಚೆ ನಡೆಸಿದರು. ಅಲ್ಲದೇ ಅವರಿಂದ ಮಾಹಿತಿ ಪಡೆದು ಅಹವಾಲುಗಳನ್ನೂ ಸ್ವೀಕರಿಸಿದರು.ಈ ಸಮಿತಿಯು ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಲಿದ್ದು, ಇದನ್ನಾಧರಿಸಿ ಕಬ್ಬು ಹಾಗೂ ಸಕ್ಕರೆ ಬೆಲೆ ಕುರಿತು ಕೇಂದ್ರ ಸರ್ಕಾರ ತೀರ್ಮಾನ ಪ್ರಕಟಿಸುವ ಸಾಧ್ಯತೆ ಇದೆ.ಈ ವೇಳೆ ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಅವರೂ ಕೂಡ ವಿವಿಧ ಬೇಡಿಕೆಗಳನ್ನು ಸಮಿತಿ ಮುಂದೆ ವಿವರಿಸಿದರು.ಬೆಳೆಗಾರರ ಬೇಡಿಕೆಗಳೇನುಎಫ್ ಆರ್ ಪಿ ಏರಿಕೆ ಮಾಡಿ ಕಬ್ಬಿನ ಬೀಜ, ಗೊಬ್ಬರ, ಕೃಷಿ ಕೂಲಿ, ನೀರಾವರಿ, ವಿದ್ಯುತ್, ಡೀಸೆಲ್, ಕಟಾವು ಮತ್ತು ಸಾಗಾಣಿಕೆ ಸೇರಿದಂತೆ ಎಲ್ಲ ಉತ್ಪಾದನಾ ವೆಚ್ಚಗಳು ಗಣನೀಯ ಏರಿಕೆಯಾಗಿವೆ.ಆದರೆ ರೈತರಿಗೆ ದೊರೆಯುತ್ತಿರುವ ಕಬ್ಬಿನ ದರವು ಉತ್ಪಾದನಾ ವೆಚ್ಚಕ್ಕೆ ಅನುಗುಣವಾಗಿಲ್ಲ. ಕರ್ನಾಟಕ ಸರ್ಕಾರದ ಕಬ್ಬು ಅಭಿವೃದ್ಧಿ ಆಯುಕ್ತರ ವರದಿಯಲ್ಲಿ ಹಿಂದಿನ ವರ್ಷ ಒಂದು ಟನ್ ಕಬ್ಬು ಉತ್ಪಾದನೆಗೆ ₹4450 ವೆಚ್ಚ ಬರುತ್ತದೆ ಎಂದು ಕೇಂದ್ರ ಕೃಷಿ ಬೆಲೆ ಆಯೋಗಕ್ಕೆ ವರದಿ ನೀಡಿದ್ದಾರೆ. ಅದರಂತೆ ಕೇಂದ್ರ ಸರ್ಕಾರವು ಶೇ 10.25 ಸಕ್ಕರೆ ಇಳುವರಿ ಪ್ರಮಾಣಕ್ಕೆ ಕಬ್ಬಿನ ಎಫ್ಆರ್ಪಿ ದರವನ್ನು ಕನಿಷ್ಠ ಪ್ರತಿ ಟನ್ಗೆ ₹4,500ಕ್ಕೆ ಏರಿಸಬೇಕು.ದೇಶದಲ್ಲಿ ಉತ್ಪಾದನೆಯಾಗುವ ಸಕ್ಕರೆ ಶೇ 75 ರಷ್ಟು ವಾಣಿಜ್ಯ ಬಳಕೆ ಮತ್ತು 25ರಷ್ಟು ಗೃಹಬಳಕೆಗೆ ಇರುವ ಕಾರಣ ಸಕ್ಕರೆಗೆ ವಾಣಿಜ್ಯ ಉದ್ದೇಶಗಳಿಗೆ ಬಳಸುವ ಸಿಹಿ ತಿಂಡಿ ಘಟಕಗಳು. ತಂಪು ಪಾನೀಯ ತಯಾರಿಕಾ ಕಂಪನಿಗಳು, ಆಹಾರ ಸಂಸ್ಕರಣಾ ಉದ್ಯಮಗಳು ಹಾಗೂ ಇತರ ವಾಣಿಜ್ಯ ಸಂಸ್ಥೆಗಳಿಗೆ ಹೆಚ್ಚಿನ ದರ ನಿಗದಿಪಡಿಸಬೇಕು.ಸಾಮಾನ್ಯ ಗ್ರಾಹಕ ಗೃಹಬಳಕೆದಾರರಿಗೆ ಸಾಮಾನ್ಯ ದರವನ್ನು ಮುಂದುವರಿಸಬೇಕು. ಅಡುಗೆ ಅನಿಲ ಹಾಗೂ ವಾಣಿಜ್ಯ ಅನಿಲಕ್ಕೆ ಪ್ರತ್ಯೇಕ ದರ ನಿಗದಿ ಮಾಡಿರುವ ರೀತಿ ವಾಣಿಜ್ಯ ಬಳಕೆಯ ಸಕ್ಕರೆಗೆ ಹೆಚ್ಚಿನ ದರ ನಿಗದಿಪಡಿಸುವುದರಿಂದ ಬರುವ ಹೆಚ್ಚುವರಿ ಆದಾಯದಲ್ಲಿ ಕಬ್ಬು ಬೆಳೆಗಾರರಿಗೆ ಎಫ್ ಆರ್ ಪಿ ಹೆಚ್ಚುವರಿ ಮಾಡುವ ವ್ಯವಸ್ಥೆ ಜಾರಿಗೊಳಿಸಬೇಕು.ಸಕ್ಕರೆ ನಿಯಂತ್ರಣ ಕಾಯ್ದೆ 1966ರ ಪ್ರಕಾರ ಕಬ್ಬಿನ ಉಪ ಉತ್ಪನ್ನಗಳಾದ ಮೊಲಾಸಿಸ್, ಬಗಾಸ್, ಎಥೆನಾಲ್, ವಿದ್ಯುತ್ ಉತ್ಪಾದನೆ ಹಾಗೂ ಇತರ ಉತ್ಪನ್ನಗಳಿಂದ ಸಕ್ಕರೆ ಕಾರ್ಖಾನೆಗಳಿಗೆ ಹೆಚ್ಚುವರಿ ಆದಾಯ ದೊರೆಯುತ್ತಿದೆ. ಕಬ್ಬಿನ ಉಪ ಉತ್ಪನ್ನಗಳಿಂದ ದೊರೆಯುವ ಆದಾಯವನ್ನು ಪರಿಗಣಿಸಿ. ರೈತರಿಗೆ ಲಾಭ ಹಂಚಿಕೆ ಮಾಡುವ ಪದ್ಧತಿ ಕಡ್ಡಾಯ ಜಾರಿಯಾಗಬೇಕು.ಪ್ರತಿ ರೈತನ ಹೊಲದ ಕಬ್ಬಿನ ಸಕ್ಕರೆ ಇಳುವರಿ ಆಧಾರದಲ್ಲಿ ಎಫ್ಆರ್ಪಿ ದರ ನೀಡಬೇಕು ಪ್ರಸ್ತುತ ಸಕ್ಕರೆ ಕಾರ್ಖಾನೆಗಳು ಕಬ್ಬು ಸರಬರಾಜು ಮಾಡಿದ ಎಲ್ಲಾ ರೈತರ ಪ್ರಮಾಣವನ್ನು ಆಧರಿಸಿ ಸರಾಸರಿ ಇಳುವರಿ ಲೆಕ್ಕ ಹಾಕಿ ರೈತರಿಗೆ ಕಬ್ಬಿನ ದರ ನೀಡುವ ಪದ್ಧತಿ ಇದೆ. ಇದು ಉತ್ತಮ ಗುಣಮಟ್ಟದ ಕಬ್ಬು ಬೆಳೆದ ರೈತರಿಗೆ ಅನ್ಯಾಯವಾಗುತ್ತಿದೆ.ಪ್ರತಿ ರೈತನ ಹೊಲದಲ್ಲಿ ಬೆಳೆದ ಕಬ್ಬಿನ ಸಕ್ಕರೆ ಇಳುವರಿ ಪ್ರಮಾಣವನ್ನು ವೈಜ್ಞಾನಿಕವಾಗಿ ಪರೀಕ್ಷಿಸಿ, ಅದರ ಆಧಾರದಲ್ಲಿ ಎಫ್ಆರ್ಪಿ ದರ ನೀಡುವ ವ್ಯವಸ್ಥೆ ಜಾರಿಗೆ ತರಬೇಕು.ಕಬ್ಬು ಕಟಾವು ಯಂತ್ರದ ಮೂಲಕ ಕಬ್ಬು ಕಟಾವು ಮಾಡುವ ವೇಳೆ ಕಾನೂನು ಬಾಹಿರವಾಗಿ ವೇಸ್ಟೇಜ್ ಎಂದು ಶೇ 8ರಿಂದ 10ರಷ್ಟು ತೂಕ ಕಡಿತ ಮಾಡುವುದನ್ನು ತಪ್ಪಿಸಬೇಕು. ವೈಜ್ಞಾನಿಕ ಪರೀಕ್ಷೆ ಹಾಗೂ ಕಾನೂನುಬದ್ಧ ಮಾನದಂಡಗಳಿಲ್ಲದೇ ಈ ರೀತಿ ತೂಕ ಕಡಿತ ಮಾಡುವುದು ರೈತರ ಶೋಷಣೆಯಾಗಿದೆ. ತೂಕ ಕಡಿತ ಮಾಡುವ ಸಕ್ಕರೆ ಕಾರ್ಖಾನೆಗಳ ವಿರುದ್ಧ ಕಠಿಣ ಕ್ರಮ ಕೈಗೊಳುವಂತಾಗಬೇಕು.ಕಬ್ಬಿನ ಎಫ್ಆರ್ಪಿ ದರವನ್ನು ರೈತರ ಹೊಲದಲ್ಲಿನ ದರ ಎಂದು ನಿಗದಿಪಡಿಸಬೇಕು. ಕಬ್ಬು ಕಟಾವು ಕೂಲಿ ಹಾಗೂ ಸಾಗಾಣಿಕೆ ವೆಚ್ಚದ ಹೆಸರಿನಲ್ಲಿ ರೈತರಿಂದ ಹೆಚ್ಚಿನ ಹಣ ಕಡಿತ ಮಾಡಲಾಗುತ್ತಿದೆ.ಇದರಿಂದ ಸರ್ಕಾರ ಘೋಷಿಸುವ ಎಫ್ಆರ್ಪಿ ದರವು ರೈತರಿಗೆ ಸಂಪೂರ್ಣವಾಗಿ ದೊರೆಯುತ್ತಿಲ್ಲ. ಕಬ್ಬಿನ ಎಫ್ಆರ್ಪಿ ದರವನ್ನು ರೈತರ ಹೊಲದಲ್ಲಿನ ದರ ಎಂದು ನಿಗದಿಪಡಿಸಬೇಕು. ಕಬ್ಬು ಕಟಾವು ಮತ್ತು ಸಾಗಾಣಿಕೆ ವೆಚ್ಚವನ್ನು ಸಕ್ಕರೆ ಕಾರ್ಖಾನೆಗಳೇ ಭರಿಸುವ ವ್ಯವಸ್ಥೆ ಜಾರಿಗೆ ತರಬೇಕು. ಕಟಾವು ಕೂಲಿ ಹಾಗೂ ಸಾಗಾಣಿಕೆ ವೆಚ್ಚದ ಹೆಸರಿನಲ್ಲಿ ನಡೆಯುತ್ತಿರುವ ರೈತರ ಶೋಷಣೆ ತಪ್ಪಿಸಬಹುದು ಹಿಂದಿನ ವರ್ಷದ ಸಕ್ಕರೆ ಇಳುವರಿ ಆಧಾರದಲ್ಲಿ ಪ್ರಸಕ್ತ ವರ್ಷದ ಕಬ್ಬಿನ ಎಫ್ ಆರ್ ಪಿ ದರ ನಿಗದಿಪಡಿಸಿ ಹಣ ಪಾವತಿಸುವ ನೀತಿ ಬದಲಾಗಬೇಕು. ಪ್ರತಿ ವರ್ಷ ಹವಾಮಾನ, ಮಳೆ, ನೀರಾವರಿ, ಕಬ್ಬಿನ ಗುಣಮಟ್ಟ ಹಾಗೂ ಸಕ್ಕರೆ ಇಳುವರಿಯಲ್ಲಿ ವ್ಯತ್ಯಾಸವಾಗುತ್ತದೆ. ಹಿಂದಿನ ವರ್ಷದ ಸಕ್ಕರೆ ಇಳುವರಿಯನ್ನು ಆಧಾರವಾಗಿಟ್ಟುಕೊಳ್ಳದೆ, ಆಯಾ ವರ್ಷ ರೈತರು ಪೂರೈಸುವ ಕಬ್ಬಿನ ಸಕ್ಕರೆ ಇಳುವರಿ ಪ್ರಮಾಣದ ಆಧಾರದಲ್ಲಿ ದರ ನಿಗದಿಪಡಿಸಿ ಹಣ ಪಾವತಿಸುವ ವ್ಯವಸ್ಥೆ ಜಾರಿಗೊಳಿಸಬೇಕು.ಸಕ್ಕರೆ ನಿಯಂತ್ರಣ ಕಾಯ್ದೆ ಅನ್ವಯ ಕಬ್ಬಿನ ಹಣವನ್ನು 14 ದಿನಗಳೊಳಗೆ ಪಾವತಿಸದ ಸಕ್ಕರೆ ಕಾರ್ಖಾನೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಕಬ್ಬು ಪೂರೈಕೆ ಮಾಡಿದ ರೈತರಿಗೆ ಕಾನೂನಿನ ಪ್ರಕಾರ ನಿಗದಿತ ಅವಧಿಯೊಳಗೆ ಹಣ ಪಾವತಿಸಬೇಕಾದ ಜವಾಬ್ದಾರಿ ಸಕ್ಕರೆ ಕಾರ್ಖಾನೆಗಳ ಮೇಲಿದೆ. ಕೆಲವು ಕಾರ್ಖಾನೆಗಳು ಸರ್ಕಾರದ ಆದೇಶ ನಿರ್ಲಕ್ಷಿಸಿ ರೈತರ ಹಣ ತಿಂಗಳುಗಟ್ಟಲೆ ಬಾಕಿ ಉಳಿಸಿಕೊಳ್ಳುತ್ತಿವೆ.ಕಬ್ಬು ಪೂರೈಕೆಯಾದ ದಿನದಿಂದ 14 ದಿನಗಳೊಳಗೆ ಕಬ್ಬಿನ ಹಣ ಪಾವತಿಸುವುದನ್ನು ಕಡ್ಡಾಯಗೊಳಿಸಬೇಕು. ವಿಳಂಬ ಪಾವತಿಗೆ ಕಾನೂನಿನ ಪ್ರಕಾರ ಬಡ್ಡಿ ವಿಧಿಸಬೇಕು. ಸರ್ಕಾರದ ಆದೇಶಗಳನ್ನು ಉಲ್ಲಂಘಿಸುವ ಕಾರ್ಖಾನೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.ನಿರಂತರವಾಗಿ ನಿಯಮ ಉಲ್ಲಂಘಿಸುವ ಕಾರ್ಖಾನೆಗಳ ಪರವಾನಗಿ ಅಮಾನತು ಸೇರಿದಂತೆ ಕಾನೂನುಬದ್ಧ ಕ್ರಮ ಕೈಗೊಳ್ಳಬೇಕು. ರೈತರ ಬಾಕಿ ಹಣ ವಸೂಲಿಗೆ ಜಿಲ್ಲಾಧಿಕಾರಿಗಳಿಗೆ ಕಠಿಣ ಕಾನೂನು ಕ್ರಮ ಕೈಗೊಳ್ಳುವ ಅಧಿಕಾರ ನೀಡಬೇಕು.ಕಬ್ಬು ಬೆಳೆ ಆಕಸ್ಮಿಕ ಬೆಂಕಿ ಅನಾಹುತವಾಗಿ ಸುಟ್ಟು ಹೋದಾಗ ಕಂದಾಯ ಇಲಾಖೆ ನೀಡುವ ಪರಿಹಾರ ಧನ ವೈಜ್ಞಾನಿಕವಾಗಿ ಏರಿಕೆ ಮಾಡಬೇಕು. ಸಕ್ಕರೆ ಕಾರ್ಖಾನೆಗಳು ಬೆಂಕಿ ಬಿದ್ದ ಕಬ್ಬನ್ನು ನುರಿಸಿ ಎಫ್ಆರ್ಪಿ ಹಣದಲ್ಲಿ ಶೇ 25ರಷ್ಟು ಹಣ ಖಂಡಿತ ಮಾಡುವ ನಿಯಮ ರದ್ದು ಮಾಡಬೇಕು. ಸಕ್ಕರೆಯನ್ನು ಅಗತ್ಯ ವಸ್ತುಗಳ ಕಾಯ್ದೆಯಲ್ಲಿ ರದ್ದು ಮಾಡಿ ಮುಕ್ತ ಮಾರುಕಟ್ಟೆ ಮಾಡಬೇಕು. ಸಮಿತಿಗೆ ಅಹವಾಲು ಸಲ್ಲಿಸಿದ ಕುರಬೂರು ಶಾಂತಕುಮಾರ್.ಕುರಬೂರು ಶಾಂತಕುಮಾರ್, ರಾಜ್ಯಾಧ್ಯಕ್ಷ ಕಬ್ಬು ಬೆಳೆಗಾರರ ಸಂಘರಾಜ್ಯದ ಕಬ್ಬು ಬೆಳೆಗಾರರು ನಿರಂತರವಾಗಿ ಹೆಚ್ಚುತ್ತಿರುವ ಕೃಷಿ ಉತ್ಪಾದನಾ ವೆಚ್ಚ, ಅಸಮರ್ಪಕ ಬೆಲೆ, ಸಕ್ಕರೆ ಕಾರ್ಖಾನೆಗಳ ಶೋಷಣೆ, ಬರಗಾಲ, ಬೆಳೆ ನಷ್ಟ ಹಾಗೂ ಸಾಲದ ಹೊರೆಯಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ರೈತರ ಹಿತಾಸಕ್ತಿಯನ್ನು ಕಾಪಾಡಲು ಹಾಗೂ ಕೃಷಿಯನ್ನು ಲಾಭದಾಯಕವಾಗಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತುರ್ತಾಗಿ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ.