‘ಬಾಂಬೆ ಡೇಸ್’ ಪುಸ್ತಕ ಬಿಡುಗಡೆ ಮಾಡುವುದಿಲ್ಲ: ವಿಶ್ವನಾಥ್
ಮೈಸೂರು: ‘ಬಾಂಬೆ ಡೇಸ್’ (ಬಾಂಬೆ ಫೈಲ್ಸ್) ಪುಸ್ತಕವನ್ನು ಸಂಪೂರ್ಣವಾಗಿ ಬರೆದಿದ್ದೇನೆ. ಆದರೆ, ಬಿಡುಗಡೆ ಮಾಡದಿರಲು ನಿರ್ಧರಿಸಿದ್ದೇನೆ’ ಎಂದು ವಿಧಾನಪರಿಷತ್ ಮಾಜಿ ಸದಸ್ಯ ಎ.ಎಚ್. ವಿಶ್ವನಾಥ್ ತಿಳಿಸಿದರು.ಇಲ್ಲಿ ಪತ್ರಕರ್ತರೊಂದಿಗೆ ಗುರುವಾರ ಮಾತನಾಡಿ, ‘ಆ ಪುಸ್ತಕ ಬಿಡುಗಡೆ ಮಾಡಿದರೆ ರಾಜಕಾರಣದ ಬಗ್ಗೆ ಜನ ಮತ್ತಷ್ಟು ಅಸಹ್ಯಪಟುಕೊಳ್ಳುತ್ತಾರೆ. ಜನಪ್ರತಿನಿಧಿಗಳು ಹ

ಮೈಸೂರು: ‘ಬಾಂಬೆ ಡೇಸ್’ (ಬಾಂಬೆ ಫೈಲ್ಸ್) ಪುಸ್ತಕವನ್ನು ಸಂಪೂರ್ಣವಾಗಿ ಬರೆದಿದ್ದೇನೆ. ಆದರೆ, ಬಿಡುಗಡೆ ಮಾಡದಿರಲು ನಿರ್ಧರಿಸಿದ್ದೇನೆ’ ಎಂದು ವಿಧಾನಪರಿಷತ್ ಮಾಜಿ ಸದಸ್ಯ ಎ.ಎಚ್. ವಿಶ್ವನಾಥ್ ತಿಳಿಸಿದರು.ಇಲ್ಲಿ ಪತ್ರಕರ್ತರೊಂದಿಗೆ ಗುರುವಾರ ಮಾತನಾಡಿ, ‘ಆ ಪುಸ್ತಕ ಬಿಡುಗಡೆ ಮಾಡಿದರೆ ರಾಜಕಾರಣದ ಬಗ್ಗೆ ಜನ ಮತ್ತಷ್ಟು ಅಸಹ್ಯಪಟುಕೊಳ್ಳುತ್ತಾರೆ. ಜನಪ್ರತಿನಿಧಿಗಳು ಹಾಗೂ ರಾಜಕಾರಣಿಗಳಿಗೆ ಮೂರು ಕಾಸಿನ ಬೆಲೆ ಕೊಡುವುದಿಲ್ಲ. ಈ ಕಾರಣದಿಂದ ಬಿಡುಗಡೆ ಮಾಡುವುದಿಲ್ಲ. ಜನರಿಗೆ ಇನ್ನಷ್ಟು ಅಸಹ್ಯ ಮಾಡಿಸುವುದಕ್ಕೆ ನನಗೆ ಇಷ್ಟವಿಲ್ಲ’ ಎಂದು ಹೇಳಿದರು.‘ಸ್ಟಿಂಗು ಯಾವ ನಾಯಕರ ಮೇಲಿಲ್ಲ? ಇಡೀ ರಾಜಕಾರಣವೇ ಸ್ಟಿಂಗ್ ಆಗಿ ಹೋಗಿದೆ. ಎಲ್ಲರೂ ಸೇರಿ ಕರ್ನಾಟಕ ರಾಜಕಾರಣವನ್ನೇ ಹೊಲಸು ಮಾಡುತ್ತಿದ್ದಾರೆ. ಎಲ್ಲ ನಾಯಕರೂ ಅವರವರ ಪಕ್ಷದ ಸಿದ್ಧಾಂತ ಬ್ರೇಕ್ ಮಾಡುತ್ತಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.‘ಜೆಡಿಎಸ್–ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಧೋರಣೆ ವಿರುದ್ಧ ಸಿಡಿದೆದ್ದು ನಾನು ಸೇರಿದಂತೆ ಹಲವು ಶಾಸಕರು ಮುಂಬೈಗೆ ಹೋಗಿದ್ದ ದಿನಗಳನ್ನು ಕಟ್ಟಿಕೊಡುವ ಪುಸ್ತಕವನ್ನು ಶೀಘ್ರದಲ್ಲೇ ಬಿಡುಗಡೆ ಮಾಡುತ್ತೇನೆ’ ಎಂದು ಅವರು ಈ ಹಿಂದೆ ಹೇಳಿದ್ದರು.‘ಪುಸ್ತಕಕ್ಕೆ ‘ಬಾಂಬೆ ಡೇಸ್’ ಎಂದಿಡಲು ನಿರ್ಧರಿಸಿದ್ದೆ. ‘ಕಾಶ್ಮೀರ್ ಫೈಲ್ಸ್’ ಚಲನಚಿತ್ರ ಬಂದ ಬಳಿಕ ‘ಬಾಂಬೆ ಫೈಲ್ಸ್’ ಎಂದು ಬದಲಿಸಿದ್ದೇನೆ. ಅದರಲ್ಲಿ ಬಾಂಬ್ ಇರುವುದಿಲ್ಲ; ವಾಸ್ತವ ಒಳಗೊಂಡಿರಲಿದೆ’ ಎಂದು ಅವರು ತಿಳಿಸಿದ್ದರು.