ದಸರಾ ವಸ್ತುಪ್ರದರ್ಶನ: ಭೋವಿ ಅಭಿವೃದ್ಧಿ ನಿಗಮದ ಮಳಿಗೆ ಉದ್ಘಾಟನೆ
ಮೈಸೂರು: ಇಲ್ಲಿನ ದಸರಾ ವಸ್ತುಪ್ರದರ್ಶನದ ಆವರಣದಲ್ಲಿ ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದಿಂದ ಸ್ಥಾಪಿಸಿರುವ ‘ಸಮಾಜದ ಪ್ರಗತಿಗೆ ನಮ್ಮ ಬದ್ಧತೆ’ ಮಳಿಗೆಯನ್ನು ಅಧ್ಯಕ್ಷ ಎಂ.ರಾಮಪ್ಪ ಗುರುವಾರ ಉದ್ಘಾಟಿಸಿದರು.ನಂತರ ಮಾತನಾಡಿ, ‘ಈ ಬಾರಿ ಸಮಾಜ ಕಲ್ಯಾಣ ಇಲಾಖೆಯಿಂದ ₹ 100 ಕೋಟಿ ಅನುದಾನ ಬಿಡುಗಡೆ ಆಗಿದೆ. ಅದನ್ನು ಬಳಸಿಕೊಳ್ಳಲು ಕಾರ್ಯಯೋಜನೆ ರೂಪಿಸಲಾಗಿದೆ’ ಎಂದರು.‘ಸ್ವಾವ

ಮೈಸೂರು: ಇಲ್ಲಿನ ದಸರಾ ವಸ್ತುಪ್ರದರ್ಶನದ ಆವರಣದಲ್ಲಿ ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದಿಂದ ಸ್ಥಾಪಿಸಿರುವ ‘ಸಮಾಜದ ಪ್ರಗತಿಗೆ ನಮ್ಮ ಬದ್ಧತೆ’ ಮಳಿಗೆಯನ್ನು ಅಧ್ಯಕ್ಷ ಎಂ.ರಾಮಪ್ಪ ಗುರುವಾರ ಉದ್ಘಾಟಿಸಿದರು.ನಂತರ ಮಾತನಾಡಿ, ‘ಈ ಬಾರಿ ಸಮಾಜ ಕಲ್ಯಾಣ ಇಲಾಖೆಯಿಂದ ₹ 100 ಕೋಟಿ ಅನುದಾನ ಬಿಡುಗಡೆ ಆಗಿದೆ. ಅದನ್ನು ಬಳಸಿಕೊಳ್ಳಲು ಕಾರ್ಯಯೋಜನೆ ರೂಪಿಸಲಾಗಿದೆ’ ಎಂದರು.‘ಸ್ವಾವಲಂಬಿ ಸಾರಥಿ, ಸ್ವಾವಲಂಬಿ ಉದ್ಯಮಿ, ಗಂಗಾ ಕಲ್ಯಾಣ, ಮಹಿಳೆ ಸಂಘಗಳ ಸಬಲೀಕರಣಕ್ಕೆ ₹5 ಲಕ್ಷದವರೆಗೆ ಸಾಲ ಸೌಲಭ್ಯ ದೊರೆಯುವುದು ಮೊದಲಾದ ಯೋಜನೆಗಳ ಮಾಹಿತಿಯನ್ನು ಈ ಮಳಿಗೆಯಲ್ಲಿ ಒದಗಿಸಲಾಗುವುದು’ ಎಂದು ಹೇಳಿದರು.ಉಚಿತವಾಗಿ ನೀಡುವ ಯೋಜನೆ‘ನಾನು ಅಧ್ಯಕ್ಷನಾದ ಬಳಿಕ, ಮನೆ ನಿರ್ಮಾಣ ಕೆಲಸಗಾರರಿಗೆ ಸೆಂಟ್ರಿಂಗ್ ಉಪಕರಣಗಳನ್ನು ಉಚಿತವಾಗಿ ನೀಡುವ ಹೊಸ ಯೋಜನೆ ಜಾರಿಗೊಳಿಸಲಾಗಿದೆ. ಕಲ್ಲು ಒಡೆಯುವವರು, ಕ್ವಾರಿಯಲ್ಲಿ ದುಡಿಯುವವರ ಸಬಲೀಕರಣ, ಶೈಕ್ಷಣಿಕ ಪ್ರಗತಿಗೆ ನಿಗಮದಿಂದ ಕ್ರಮ ವಹಿಸಲಾಗುತ್ತಿದೆ’ ಎಂದರು.ನಿಗಮದ ಪ್ರಧಾನ ವ್ಯವಸ್ಥಾಪಕ ಶಿವಸ್ವಾಮಿ, ಜಿಲ್ಲಾ ವ್ಯವಸ್ಥಾಪಕಿ ಪ್ರೀತಿ ಚಿಕ್ಕಮಾದಯ್ಯ, ಕಚೇರಿ ಸಹಾಯಕಿ ಮಹಾಲಕ್ಷ್ಮಿ, ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಹಾಡ್ಯ ರಂಗಸ್ವಾಮಿ, ಕಾಂಗ್ರೆಸ್ ನಗರ ಜಿಲ್ಲಾ ಸಮಿತಿಯ ಅಧ್ಯಕ್ಷ ಆರ್.ಮೂರ್ತಿ, ವಕ್ತಾರ ಕೆ.ಮಹೇಶ್, ಕಾಂಗ್ರೆಸ್ ಕಾರ್ಮಿಕ ವಿಭಾಗದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹರಿಯೂರು ವಿಜಯಕುಮಾರ್, ಡಿಸಿಸಿ ಉಪಾಧ್ಯಕ್ಷ ಮಹದೇವ್, ಕಾಳಪ್ಪ, ವಾಜಮಂಗಲ ರಮೇಶ್, ಮಧುಕಾರ್ಯ, ಲಕ್ಷ್ಮಭೋವಿ, ಮಹದೇವ್, ಸಿದ್ದು ಇದ್ದರು. ‘ಹೈಕಮಾಂಡ್ ಸಮಸ್ಯೆ ಇತ್ಯರ್ಥಪಡಿಸಲಿದೆ’ ‘ಮಹದೇವಪ್ಪ ಹಾಗೂ ಸಿದ್ದರಾಮಯ್ಯ ನಡುವಿನ ವೈಮನಸ್ಸು ಹಾಗೂ ಇಬ್ಬರೂ ಒಂದೇ ದಿನ (ನ.26) ಸಂವಿಧಾನಕ್ಕೆ ಸಂಬಂಧಿಸಿದಂತೆ ಕಾರ್ಯಕ್ರಮ ಆಯೋಜನೆ ಮಾಡಿರುವ ಕುರಿತು ಹೈಕಮಾಂಡ್ ಸಮಸ್ಯೆ ಬಗೆಹರಿಸಲಿದೆ’ ಎಂದು ಎಂ.ರಾಮಪ್ಪ ಹೇಳಿದರು.‘ನಾವು ಸರ್ಕಾರಿ ಕಾರ್ಯಕ್ರಮದಲ್ಲಿ ಭಾಗವಹಿಸುತ್ತೇವೆ’ ಎಂದು ಪ್ರತಿಕ್ರಿಯಿಸಿದರು.