ಅವಾಮಿ ಲೀಗ್ ನಾಯಕನಿಗೆ ಮರಣದಂಡನೆ
ಢಾಕಾ : ಬಾಂಗ್ಲಾದೇಶದಲ್ಲಿ ನಡೆದ ಜುಲೈ ದಂಗೆ ವೇಳೆ ಆರು ಮಂದಿಯನ್ನು ಹತ್ಯೆಗೈದ ಆರೋಪದ ಮೇಲೆ ಅವಾಮಿ ಲೀಗ್ಸ್ ಜಂಟಿ ಪ್ರಧಾನ ಕಾರ್ಯದರ್ಶಿ ಮಹಬುಬುಲ್ ಆಲಂ ಹನೀಫ್ ಅವರಿಗೆ ಇಲ್ಲಿನ ವಿಶೇಷ ನ್ಯಾಯಾಲಯವು ಮರಣದಂಡನೆ ವಿಧಿಸಿದೆ.ನ್ಯಾಯಮೂರ್ತಿ ನೊಜರುಲ್ ಇಸ್ಲಾಂ ಚೌಧರಿ, ನ್ಯಾಯಮೂರ್ತಿ ಎಂ.ಡಿ.ಮಂಜುರುಲ್, ನೂರ್ ಮೊಹಮ್ಮದ್ ಶಹ್ರಿಯಾರ್ ಕಬೀರ್ ನೇತೃತ್ವದ ನ್ಯಾಯಪೀಠವು

ಢಾಕಾ : ಬಾಂಗ್ಲಾದೇಶದಲ್ಲಿ ನಡೆದ ಜುಲೈ ದಂಗೆ ವೇಳೆ ಆರು ಮಂದಿಯನ್ನು ಹತ್ಯೆಗೈದ ಆರೋಪದ ಮೇಲೆ ಅವಾಮಿ ಲೀಗ್ಸ್ ಜಂಟಿ ಪ್ರಧಾನ ಕಾರ್ಯದರ್ಶಿ ಮಹಬುಬುಲ್ ಆಲಂ ಹನೀಫ್ ಅವರಿಗೆ ಇಲ್ಲಿನ ವಿಶೇಷ ನ್ಯಾಯಾಲಯವು ಮರಣದಂಡನೆ ವಿಧಿಸಿದೆ.ನ್ಯಾಯಮೂರ್ತಿ ನೊಜರುಲ್ ಇಸ್ಲಾಂ ಚೌಧರಿ, ನ್ಯಾಯಮೂರ್ತಿ ಎಂ.ಡಿ.ಮಂಜುರುಲ್, ನೂರ್ ಮೊಹಮ್ಮದ್ ಶಹ್ರಿಯಾರ್ ಕಬೀರ್ ನೇತೃತ್ವದ ನ್ಯಾಯಪೀಠವು ಈ ಆದೇಶ ನೀಡಿದೆ.2024ರಲ್ಲಿ ವಿದ್ಯಾರ್ಥಿಗಳ ನೇತೃತ್ವದಲ್ಲಿ ನಡೆದ ಹಿಂಸಾಚಾರದ ವೇಳೆ ಪಶ್ಚಿಮ ಕುಸ್ತಿಯಾ ಜಿಲ್ಲೆಯಲ್ಲಿ ಆರು ಮಂದಿಯ ಹತ್ಯೆಯಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಅರೋಪಿ ಹನೀಫ್ ಅವರಿಗೆ ಸಾಯುವವರೆಗೂ ಗಲ್ಲುಶಿಕ್ಷೆ ವಿಧಿಸಬೇಕು ಎಂದು ಚೌಧರಿ ಅವರು ತನ್ನ ತೀರ್ಪಿನಲ್ಲಿ ಸ್ಪಷ್ಟಪಡಿಸಿದ್ದಾರೆ.ಪ್ರತಿಭಟನೆಯನ್ನು ಹತ್ತಿಕ್ಕಿದ ಆರೋಪ ಹೊತ್ತಿರುವ ಅವಾಮಿ ಲೀಗ್ನ ಇತರೆ ಮೂವರು ನಾಯಕರಿಗೂ ಜೀವಾವಧಿ ಶಿಕ್ಷೆ ವಿಧಿಸಿದೆ.ಪ್ರಕರಣದ ಎಲ್ಲ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಆರೋಪಿಗಳ ಆಸ್ತಿಯ ಅರ್ಧಭಾಗದಷ್ಟು ಮುಟ್ಟುಗೋಲು ಹಾಕಿಕೊಳ್ಳುವಂತೆ ನ್ಯಾಯಾಲಯವು ಆದೇಶಿಸಿದೆ.
Read the complete story at Prajavani