ಪರಿಷತ್ ಫಲಿತಾಂಶ ಪರಿಣಾಮ ಬೀರಲ್ಲ: ಗೃಹ ಸಚಿವ ಪ್ರಿಯಾಂಕ್ ಖರ್ಗೆ
ಬೆಂಗಳೂರು: ‘ವಿಧಾನ ಪರಿಷತ್ ಚುನಾವಣೆಯ ಫಲಿತಾಂಶ ಕರ್ನಾಟಕದ ರಾಜಕೀಯ ಮತ್ತು ಮುಂದಿನ ಸಾರ್ವತ್ರಿಕ ಚುನಾವಣೆ ಮೇಲೆ ಪರಿಣಾಮ ಬೀಳುತ್ತದೆ ಎಂಬುದು ತಪ್ಪು. ನಾವು ಜನ ಹಾಗೂ ಶಿಕ್ಷಕರು, ಪದವೀಧರರ ಸಮಸ್ಯೆ ಬಗ್ಗೆ ಗಮನಹರಿಸಬೇಕು ಎಂಬ ಸಂದೇಶ ನೀಡಿದೆ’ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.ವಿಧಾನಪರಿಷತ್ ಚುನಾವಣೆಯಲ್ಲಿ ಮತಪತ್ರದ ಮೂಲಕ ಚುನಾವಣೆ ನಡೆದರೂ ಕಾಂಗ್ರೆ

ಬೆಂಗಳೂರು: ‘ವಿಧಾನ ಪರಿಷತ್ ಚುನಾವಣೆಯ ಫಲಿತಾಂಶ ಕರ್ನಾಟಕದ ರಾಜಕೀಯ ಮತ್ತು ಮುಂದಿನ ಸಾರ್ವತ್ರಿಕ ಚುನಾವಣೆ ಮೇಲೆ ಪರಿಣಾಮ ಬೀಳುತ್ತದೆ ಎಂಬುದು ತಪ್ಪು. ನಾವು ಜನ ಹಾಗೂ ಶಿಕ್ಷಕರು, ಪದವೀಧರರ ಸಮಸ್ಯೆ ಬಗ್ಗೆ ಗಮನಹರಿಸಬೇಕು ಎಂಬ ಸಂದೇಶ ನೀಡಿದೆ’ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.ವಿಧಾನಪರಿಷತ್ ಚುನಾವಣೆಯಲ್ಲಿ ಮತಪತ್ರದ ಮೂಲಕ ಚುನಾವಣೆ ನಡೆದರೂ ಕಾಂಗ್ರೆಸ್ ಸೋಲಾಗಿರುವ ಕುರಿತ ಟೀಕೆಗೆ ಅವರು ಪ್ರತಿಕ್ರಿಯಿಸಿದರು.‘ಪರಿಷತ್ ಮತಪತ್ರ ಚುನಾವಣೆ ಆದರೂ ಸಾರ್ವಜನಿಕರು ಮತದಾನ ಮಾಡುವುದಿಲ್ಲ. ಕೇವಲ ಸೀಮಿತ ವರ್ಗ ಮಾತ್ರ ಮತದಾನ ಮಾಡುತ್ತದೆ. ಇವಿಎಂ ಸರಿಯಿಲ್ಲ ಎಂದು ನಾವಷ್ಟೇ ಅಲ್ಲ, ಬಿಜೆಪಿಯ ಮಾಜಿ ಕೇಂದ್ರ ಸಚಿವರೂ ಹೇಳಿದ್ದಾರೆ. ಸರಿ ಇದ್ದರೆ ಒಳ್ಳೆಯದು, ಸರಿ ಇಲ್ಲ ಎಂದರೆ ಸರಿ ಮಾಡೋಣ. ಮೊದಲು ಸಂಶೋಧನೆ ನಡೆಯಲಿ’ ಎಂದು ಸವಾಲು ಹಾಕಿದರು.ವಿಜಯೇಂದ್ರ ಜಾಗವೇ ಗ್ಯಾರಂಟಿ ಇಲ್ಲ: ‘ಮುಂದಿನ ತಿಂಗಳಲ್ಲಿ ಬಿಜೆಪಿಯಲ್ಲಿ ದೊಡ್ಡ ಬದಲಾವಣೆ ಆಗಲಿದೆ. ಬಿ.ವೈ. ವಿಜಯೇಂದ್ರ ಅವರ ಜಾಗವೇ ಗ್ಯಾರಂಟಿ ಇಲ್ಲ. ಅವರು ಮೊದಲು ತಮ್ಮ ಜಾಗ ಗಟ್ಟಿ ಮಾಡಿಕೊಳ್ಳಲಿ’ ಎಂದು ಪ್ರಿಯಾಂಕ್ ಹೇಳಿದರು.‘ನರಕಾಸುರ ಯಾರೆಂದು ಹೊರಗೆ ಬರಲಿದೆ’‘ಕುಮಾರಸ್ವಾಮಿ ಅವರು ಆ ಮೂವರನ್ನು ಎಲ್ಲಿ ಬಚ್ಚಿಟ್ಟಿದ್ದಾರೆ ತಿಳಿಸಲಿ. ನರಕಾಸುರ ಯಾರು, ಭಸ್ಮಾಸುರ ಯಾರು ಎಲ್ಲವೂ ಹೊರಗೆ ಬರಲಿದೆ’ ಎಂದು ಪ್ರಿಯಾಂಕ್ ಹೇಳಿದರು.‘ಎಚ್.ಡಿ. ಕುಮಾರಸ್ವಾಮಿ ಅವರು ದಸರಾ ಸಮಯಕ್ಕೆ ಅಲ್ಲೋಲ ಕಲ್ಲೋಲ ಎನ್ನುತ್ತಿದ್ದರು. ಈಗ ದೀಪಾವಳಿಗೆ ಹೋಗಿದ್ದಾರೆ’ ಎಂದು ವ್ಯಂಗ್ಯವಾಡಿದರು.261029-4-1590208018