ವಾಯು ಮಾಲಿನ್ಯ ತಡೆ ಜಾಹೀರಾತಿಗೆ ಕೊಹ್ಲಿ ಬೆಂಬಲ ಪಡೆದುಕೊಳ್ಳಿ: ಸುಪ್ರೀಂ ಕೋರ್ಟ್
ವಾಯು ಮಾಲಿನ್ಯ ತಡೆಗಟ್ಟಲು ಮತ್ತು ಪಟಾಕಿ ರಹಿತ ದೀಪಾವಳಿ ಆಚರಣೆಯ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರಂತಹ ಪ್ರಸಿದ್ಧ ಕ್ರೀಡಾಪಟುಗಳ ನೆರವು ಪಡೆಯುವಂತೆ ಸುಪ್ರೀಂ ಕೋರ್ಟ್ ಸರ್ಕಾರಕ್ಕೆ ಸಲಹೆ ನೀಡಿದೆ.ದೆಹಲಿಯ ವಾಯು ಮಾಲಿನ್ಯಕ್ಕೆ ಸಂಬಂಧಿಸಿದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ.ಎಂ.ಸುಂದ್ರೇಶ್ ಹಾಗೂ ನ್ಯಾ. ಪ್ರಸನ್ನ ಬಿ.ವರಲೆ

ವಾಯು ಮಾಲಿನ್ಯ ತಡೆಗಟ್ಟಲು ಮತ್ತು ಪಟಾಕಿ ರಹಿತ ದೀಪಾವಳಿ ಆಚರಣೆಯ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರಂತಹ ಪ್ರಸಿದ್ಧ ಕ್ರೀಡಾಪಟುಗಳ ನೆರವು ಪಡೆಯುವಂತೆ ಸುಪ್ರೀಂ ಕೋರ್ಟ್ ಸರ್ಕಾರಕ್ಕೆ ಸಲಹೆ ನೀಡಿದೆ.ದೆಹಲಿಯ ವಾಯು ಮಾಲಿನ್ಯಕ್ಕೆ ಸಂಬಂಧಿಸಿದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ.ಎಂ.ಸುಂದ್ರೇಶ್ ಹಾಗೂ ನ್ಯಾ. ಪ್ರಸನ್ನ ಬಿ.ವರಲೆ ಅವರನ್ನೊಳಗೊಂಡ ಪೀಠವು ನಡೆಸಿತು.ಪಿಒಪಿ ನಿಷೇಧ, ಜೇಡಿಮಣ್ಣಿನ ಅಭಾವ: ಬೆಂಗಳೂರಿನ ಗಣೇಶ ಮೂರ್ತಿ ತಯಾರಕರ ಅಳಲುಇದೇ ವೇಳೆ ‘ಪ್ರತಿಯೊಬ್ಬರೂ ಬೆಳಕಿನ ಹಬ್ಬ ದೀಪಾವಳಿಯನ್ನು ಮಾಲಿನ್ಯ ರಹಿತವಾಗಿ ಹಾಗೂ ಸಂತೋಷದಿಂದ ಆಚರಿಸುವಂತೆ ಪ್ರೇರೇಪಿಸಲು ಜನಪ್ರಿಯ ವ್ಯಕ್ತಿಗಳಿಂದ ಜಾಹೀರಾತು ಸಂದೇಶಗಳನ್ನು ಮಾಡಿಸಬೇಕು’ ಎಂದು ಪೀಠ ಅಭಿಪ್ರಾಯಪಟ್ಟಿದೆ.ಕರಗುತ್ತಿರುವ ಹಿಮಬಂಡೆ, ದೊಡ್ಡ ಅಣೆಕಟ್ಟುಗಳು.. ಈಶಾನ್ಯ ಭಾರತಕ್ಕೂ ನೇಪಾಳದಂತ ಅಪಾಯಮಾತ್ರವಲ್ಲದೆ, ಪ್ರತಿವರ್ಷ ನ್ಯಾಯಾಲಯ ಹೊರಡಿಸುವ ಆದೇಶಗಳು ಕೇವಲ ಕಾಗದಕ್ಕೆ ಸೀಮಿತವಾಗಿವೆ ಎಂದು ಇದೇ ಸಂದರ್ಭದಲ್ಲಿ ಪೀಠವು ಅಸಮಾಧಾನ ವ್ಯಕ್ತಪಡಿಸಿದೆ. ಪಟಾಕಿ ಮಾರಾಟ ಅಥವಾ ಉತ್ಪಾದನೆಯನ್ನು ಸಂಪೂರ್ಣವಾಗಿ ನಿಷೇಧಿಸುವ ಬದಲು, ಜನರ ಧಾರ್ಮಿಕ ಭಾವನೆಗಳು, ಆರೋಗ್ಯ ಮತ್ತು ಪರಿಸರವನ್ನು ಕಾಪಾಡುವ ನಿಟ್ಟಿನಲ್ಲಿ ಸಮತೋಲಿತ ಆದೇಶವನ್ನು ನೀಡುವುದಾಗಿ ನ್ಯಾಯಾಲಯ ಸ್ಪಷ್ಟಪಡಿಸಿದೆ.ಹಿಂದೂ ಧರ್ಮದಲ್ಲಿ ಸಸ್ಯಾಹಾರ ಶ್ರೇಷ್ಠತೆ, ವಿಷ್ಣುವಿನ ಪುರಾಣದ ರೋಚಕ ಕಥನ‘ಸಾರ್ವಜನಿಕರ ಭಾವನೆಯನ್ನು ಅರ್ಥಮಾಡಿಕೊಂಡಿದ್ದೇವೆ. ಹಬ್ಬವನ್ನು ಎಲ್ಲರೂ ಆಚರಿಸಲು ಬಯಸುತ್ತಾರೆ. ಆದ್ದರಿಂದ, ಸಂಪೂರ್ಣ ನಿಷೇಧ ಏರಲು ಒಲವು ತೋರುವುದಿಲ್ಲ’ ಎಂದು ನ್ಯಾಯಮೂರ್ತಿ ಎಂ.ಎಂ.ಸುಂದ್ರೇಶ್ ಹೇಳಿದ್ದಾರೆ.