ಅಮೆರಿಕ ಕಣ್ಣಿಗೆ ಮಣ್ಣೆರಚಿ ಶಸ್ತ್ರಾಸ್ತ್ರ ಆಮದು: ಇರಾನ್ 'MOD' ರಹಸ್ಯ ಜಾಲ ಬಯಲು!
ಟೆಹರಾನ್: ಅಮೆರಿಕದ ನೌಕಾ ದಿಗ್ಬಂಧನ ಮತ್ತು ಪಾಶ್ಚಿಮಾತ್ಯ ದೇಶಗಳ ನಿರ್ಬಂಧಗಳ ಹೊರತಾಗಿಯೂ, 2025ರ ಜನವರಿಯಿಂದೀಚೆಗೆ ಇರಾನ್ ಸುಮಾರು $2 ಬಿಲಿಯನ್ ಮೌಲ್ಯದ (₹16,000 ಕೋಟಿಗೂ ಅಧಿಕ) ಸೇನಾ ಉಪಕರಣಗಳು, ಸ್ಫೋಟಕಗಳು ಮತ್ತು ಟ್ರಕ್ಗಳನ್ನು ಆಮದು ಮಾಡಿಕೊಂಡಿದೆ. ಇದಕ್ಕಾಗಿ ಇರಾನ್ 'MOD' ಎಂಬ ಹೆಸರಿನಿಂದ ಆರಂಭವಾಗುವ 5,000ಕ್ಕೂ ಹೆಚ್ಚು ರಹಸ್ಯ ಸೇನಾ ಸಂಸ್

ಟೆಹರಾನ್: ಅಮೆರಿಕದ ನೌಕಾ ದಿಗ್ಬಂಧನ ಮತ್ತು ಪಾಶ್ಚಿಮಾತ್ಯ ದೇಶಗಳ ನಿರ್ಬಂಧಗಳ ಹೊರತಾಗಿಯೂ, 2025ರ ಜನವರಿಯಿಂದೀಚೆಗೆ ಇರಾನ್ ಸುಮಾರು $2 ಬಿಲಿಯನ್ ಮೌಲ್ಯದ (₹16,000 ಕೋಟಿಗೂ ಅಧಿಕ) ಸೇನಾ ಉಪಕರಣಗಳು, ಸ್ಫೋಟಕಗಳು ಮತ್ತು ಟ್ರಕ್ಗಳನ್ನು ಆಮದು ಮಾಡಿಕೊಂಡಿದೆ. ಇದಕ್ಕಾಗಿ ಇರಾನ್ 'MOD' ಎಂಬ ಹೆಸರಿನಿಂದ ಆರಂಭವಾಗುವ 5,000ಕ್ಕೂ ಹೆಚ್ಚು ರಹಸ್ಯ ಸೇನಾ ಸಂಸ್ಥೆಗಳ ಜಾಲವನ್ನು ನಿರ್ಮಿಸಿಕೊಂಡಿದೆ ಎಂಬುವುದು ‘ರಾಯಿಟರ್ಸ್’ ತನಿಖಾ ವರದಿ ಬಯಲಿಗೆಳೆದಿದೆ.ಇರಾನ್ನ ರಕ್ಷಣಾ ಇಲಾಖೆಯ 'MOD' ಹೆಸರಿನಲ್ಲೇ ಸದ್ದಿಲ್ಲದೆ ಕಾರ್ಯಾಚರಣೆ ನಡೆಸುತ್ತಿರುವ 5,000 ರಹಸ್ಯ ಸಂಸ್ಥೆಗಳು, ಶಸ್ತ್ರಾಸ್ತ್ರ ಪೂರೈಕೆ ಮತ್ತು ಹಣಕಾಸು ಜಾಲವಾಗಿ ಹೊರಹೊಮ್ಮಿವೆ. 2016 ರಿಂದ ನಡೆದ ಸರಕು ಸಾಗಣೆ ದಾಖಲೆಗಳನ್ನು ಪರಿಶೀಲಿಸಿದಾಗ ಇವುಗಳ ಬೃಹತ್ ವಹಿವಾಟು ಬೆಳಕಿಗೆ ಬಂದಿದೆ. ಇವುಗಳಲ್ಲಿ ಕೆಲವು ಸಂಸ್ಥೆಗಳು ಇರಾನ್ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾಪ್ಸ್ (IRGC) ಹಾಗೂ ಇರಾನ್ನ ಪ್ರಭಾವಿ ನಾಯಕರ ನಿಯಂತ್ರಣದಲ್ಲಿರುವ 'ಬೊನ್ಯಾಡ್ಸ್' ಎಂಬ ಉದ್ಯಮ ಸಮೂಹಗಳೊಂದಿಗೆ ನಿಕಟ ಸಂಪರ್ಕ ಹೊಂದಿವೆ.ಫೆಬ್ರುವರಿ 28 ರಂದು ಅಮೆರಿಕ ಮತ್ತು ಇಸ್ರೇಲ್ ಜಂಟಿ ವೈಮಾನಿಕ ದಾಳಿ ನಡೆಸಿದ್ದವು. ಅಲ್ಲಿಂದ ಆರಂಭವಾದ ಸಂಘರ್ಷ ಇನ್ನೂ ಶಮನಗೊಂಡಿಲ್ಲ. ನಿತ್ಯ ಸಾವಿರಾರು ಕ್ಷಿಪಣಿ ಹಾಗೂ ಡ್ರೋನ್ಗಳನ್ನು ಬಳಸುತ್ತಿದ್ದರೂ, ಇರಾರ್ಗೆ ಶಸ್ತ್ರಾಸ್ತ್ರಗಳ ಕೊರತೆ ಏಕೆ ಎದುರಾಗುತ್ತಿಲ್ಲ ಎಂಬ ಕುತೂಹಲಕ್ಕೆ ಈಗ ತೆರೆಬಿದ್ದಿದೆ.2016ರಿಂದೀಚೆಗೆ ನಡೆದ ಸರಕು ಸಾಗಣೆ ದಾಖಲೆಗಳನ್ನು ಪರಿಶೀಲಿಸಿದಾಗ ಇವುಗಳ ಬೃಹತ್ ವಹಿವಾಟು ಬೆಳಕಿಗೆ ಬಂದಿದೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಈ ರಹಸ್ಯ ಸಂಸ್ಥೆಗಳಲ್ಲಿ ಒಂದರ ಮೇಲೆಯೂ ಇದುವರೆಗೆ ಪಾಶ್ಚಿಮಾತ್ಯ ದೇಶಗಳು ನಿರ್ಬಂಧ ಹೇರಿಲ್ಲ.ಕಾರ್ಯಾಚರಣೆ ಹೇಗೆ?ಇಸ್ರೇಲ್-ಅಮೆರಿಕನ್ ಅಪಾಯ ನಿರ್ವಹಣಾ ಸಲಹಾ ಸಂಸ್ಥೆಯಾದ '240 ಅನಾಲಿಟಿಕ್ಸ್' ಜೊತೆಗೂಡಿ ರಾಯಿಟರ್ಸ್ ನಡೆಸಿದ ಈ ತನಿಖೆಯಲ್ಲಿ, ಟೆಹರಾನ್ನ ಶಸ್ತ್ರಾಸ್ತ್ರ ಖರೀದಿ ವ್ಯವಸ್ಥೆ ಬಹಿರಂಗಗೊಂಡಿದೆ. ಈ ಎಲ್ಲಾ 5,000 ಸಂಸ್ಥೆಗಳು 'MOD' (ಫಾರ್ಸಿಯಲ್ಲಿ 'VODJA') ಎಂಬ ಅಕ್ಷರಗಳಿಂದ ಆರಂಭವಾಗಿ, ಮುಂದೆ 5 ಅಥವಾ 6 ಅಂಕೆಗಳನ್ನು ಒಳಗೊಂಡ ಒಂದೇ ಮಾದರಿಯ ವಿಶಿಷ್ಟ ಹೆಸರನ್ನು ಹೊಂದಿವೆ.ವಿಶೇಷವೆಂದರೆ, ಈ ಎಲ್ಲಾ ಸಂಸ್ಥೆಗಳು ಇರಾನ್ ರಕ್ಷಣಾ ಸಚಿವಾಲಯದ ವಿಳಾಸವನ್ನೇ ಬಳಸುತ್ತಿವೆ. ಅಯತೊಲ್ಲಾ ಖಮೇನಿ ಅಧಿಕಾರಕ್ಕೆ ಬಂದ ದಿನವಾದ 1979ರಂದು ಫೆಬ್ರುವರಿ 11 ಸ್ಥಾಪನೆಯಾದವು ಎಂದು ಹೇಳಿಕೊಳ್ಳುತ್ತವೆ. ಆದರೆ, ಇರಾನ್ನ ತೈಲ ರಫ್ತಿನ ಮೇಲೆ ನಿರ್ಬಂಧ ತೀವ್ರವಾಗಿದ್ದ (2013ರ) ಸಮಯದಲ್ಲಿ ಈ ಸಂಸ್ಥೆಗಳನ್ನು ಸೃಷ್ಟಿಸಲಾಯಿತು ಎಂದು ದಾಖಲೆಗಳು ಹೇಳುತ್ತವೆ.ತೈಲ ಅಕ್ರಮ ಮಾರಾಟದಿಂದ ಹಣವನ್ನು ಬಳಸಿ ವಿದೇಶಿ ಶೆಲ್ ಕಂಪನಿಗಳು ಹಾಗೂ ಮಧ್ಯವರ್ತಿಗಳ ಮೂಲಕ ಈ ಸಂಸ್ಥೆಗಳು ವ್ಯವಹಾರ ನಡೆಸುತ್ತವೆ. ಚೀನಾ, ರಷ್ಯಾ ಮತ್ತು ಜರ್ಮನಿಯಿಂದಲೇ ರಾಕೆಟ್ ಇಂಧನ, ಕ್ಷಿಪಣಿ ಬಿಡಿಭಾಗಗಳು ಹಾಗೂ ಬೃಹತ್ ಟ್ರಕ್ಗಳು ಇರಾನ್ ತಲುಪಿವೆ ಎಂದು ವರದಿಯಾಗಿದೆ.ರಹಸ್ಯ ಜಾಲದ ಸುಳಿವು ಸಿಕ್ಕಿದ್ದು ಹೇಗೆ?2025ರ ಜೂನ್ನಲ್ಲಿ 'ಟೆಲಿಗ್ರಾಂ' ಹಾಗೂ 'ವಿಕಿ-ಇರಾನ್' ವೆಬ್ಸೈಟ್ಗಳಲ್ಲಿ ಇರಾನ್ನ 'ಬ್ಯಾಂಕ್ ಸೆಪಾ'ದ ರಹಸ್ಯ ದಾಖಲೆಗಳು ಸೋರಿಕೆಯಾಗಿದ್ದವು. '240 ಅನಲಿಟಿಕ್ಸ್' ಸಂಸ್ಥೆಯ ಅರ್ಥಶಾಸ್ತ್ರಜ್ಞ ನೋಮ್ ಬಿನ್ಸ್ಟಾಕ್ ಈ ದಾಖಲೆಗಳನ್ನು ಪರಿಶೀಲಿಸಿದಾಗ ಈ ಜಾಲದ ಸುಳಿವು ಸಿಕ್ಕಿದೆ. 2024ರ ಕೊನೆಯ ವೇಳೆಗೆ ಕೇವಲ 36 ರಹಸ್ಯ ಸಂಸ್ಥೆಗಳ ಖಾತೆಯಲ್ಲೇ $1.2 ಬಿಲಿಯನ್ ಮೌಲ್ಯದ ವಿದೇಶಿ ಕರೆನ್ಸಿ ಇರುವುದನ್ನು ಅವರು ಪತ್ತೆ ಮಾಡಿದ್ದರು.ಪ್ರತಿಯೊಂದು ಸಂಸ್ಥೆಗೂ 11 ಅಂಕೆಗಳ ವಿಶಿಷ್ಟ ಐಡಿ ನೀಡಲಾಗಿತ್ತು. ಸಾಗಣೆ ಪತ್ರಗಳು, ಬ್ಯಾಂಕ್ ಖಾತೆಗಳಲ್ಲಿ ಈ ಸಂಖ್ಯೆಗಳು ಪದೇ ಪದೇ ಕಾಣಿಸಿಕೊಂಡಿದ್ದರಿಂದ ಇಡೀ ಜಾಲವನ್ನು ಪತ್ತೆಹಚ್ಚುವುದು ಸುಲಭವಾಯಿತು. ಸುಮಾರು 19,000 ಆಮದು ದಾಖಲೆಗಳು, ಉಪಗ್ರಹ ಚಿತ್ರಗಳು ಮತ್ತು ಹಡಗು ಪತ್ರಗಳನ್ನು ತಾಳೆ ನೋಡಿ ರಾಯಿಟರ್ಸ್ ಈ ತನಿಖೆಯನ್ನು ಖಚಿತಪಡಿಸಿದೆ.'MOD 346428': ಇರಾನ್ಗೆ ಹೆಚ್ಚು ಶಸ್ತ್ರಾಸ್ತ್ರ ಪೂರೈಸಿದ ಸಂಸ್ಥೆಈ 5,000 ಸಂಸ್ಥೆಗಳ ಪೈಕಿ 'MOD 346428' ಎಂಬ ಒಂದೇ ಒಂದು ಸಂಸ್ಥೆ ಇಡೀ ಇರಾನ್ನ ಆಮದು ಕ್ಷೇತ್ರದಲ್ಲಿ ದೈತ್ಯನಾಗಿ ಬೆಳೆದುನಿಂತಿದೆ. 2023ರಲ್ಲಿ $442 ಮಿಲಿಯನ್ ಇದ್ದ ಇದರ ವ್ಯವಹಾರ, ಮರುವರ್ಷಕ್ಕೇ $988 ಮಿಲಿಯನ್ಗೆ ಜಿಗಿದಿದೆ. ಇನ್ನು 2025ರ ಜನವರಿಯಿಂದ 2026ರ ಜೂನ್ವರೆಗಿನ 18 ತಿಂಗಳಲ್ಲಿ ಈ ಒಂದೇ ಸಂಸ್ಥೆ ಬರೋಬ್ಬರಿ $2.3 ಬಿಲಿಯನ್ ಮೌಲ್ಯದ ರಾಕೆಟ್ ಇಂಧನ, ಸ್ಫೋಟಕ ರಾಸಾಯನಿಕಗಳು ಹಾಗೂ ಕ್ಷಿಪಣಿ ಲಾಂಚರ್ ಟ್ರಕ್ಗಳನ್ನು ದೇಶದೊಳಗೆ ತಂದಿಳಿಸಿದೆ.2025ರ ಆರಂಭದಲ್ಲಿ ಚೀನಾದಿಂದ ಈ ಸಂಸ್ಥೆಯು ಬಂಡಾರ್ ಅಬ್ಬಾಸ್ ಬಂದರಿನ ಮೂಲಕ 886 ಟನ್ ಘನ ರಾಕೆಟ್ ಇಂಧನದ ರಾಸಾಯನಿಕಗಳನ್ನು ತರಿಸಿಕೊಂಡಿತ್ತು. 2025ರ ಏಪ್ರಿಲ್ 26 ರಂದು ಇರಾನ್ನ ಶಹೀದ್ ರಾಜಾಯಿ ಬಂದರಿನಲ್ಲಿ ನಡೆದ ಭೀಕರ ಸ್ಪೋಟಕ್ಕೆ ಈ ಚೀನಿ ರಾಸಾಯನಿಕಗಳೇ ಕಾರಣ. ಈ ಭೀಕರ ದುರಂತದಲ್ಲಿ 70ಕ್ಕೂ ಹೆಚ್ಚು ಜನ ಸ್ಥಳದಲ್ಲೇ ಉಸಿರುಚೆಲ್ಲಿದ್ದರೆ, 1,200ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.ಇಷ್ಟೇ ಅಲ್ಲದೆ, ಕ್ಷಿಪಣಿಗಳನ್ನು ಅಡಗಿಸಿಟ್ಟು ಉಡಾಯಿಸಲು ಬಳಸುವ 'ಇವೆಕೊ' ಕಂಪನಿಯ 435 ಬೃಹತ್ ಟ್ರಕ್ಗಳನ್ನು ಈ ಸಂಸ್ಥೆ ಆಮದು ಮಾಡಿಕೊಂಡಿದೆ. ಯುದ್ಧದ ನಡುವೆಯೂ ನಿಲ್ಲದ ಶಸ್ತ್ರಾಸ್ತ್ರ ಪೂರೈಕೆಫೆ.28 ರಂದು ಯುದ್ಧ ಆರಂಭವಾದ ಮೇಲೂ ಈ ಆಮದು ಕಿಂಚಿತ್ತೂ ನಿಂತಿಲ್ಲ. ಯುದ್ಧಕ್ಕೆ ಮುಂಚಿನ ವಾರಗಳಲ್ಲಷ್ಟೇ ಚೀನಾದಿಂದ 93 ಟನ್ 'ಟೈಟಾನಿಯಂ' ಲೋಹವನ್ನು ಇರಾನ್ ತರಿಸಿಕೊಂಡಿದೆ. ಇದನ್ನು ಕ್ಷಿಪಣಿ ಹಾಗೂ ರಾಕೆಟ್ ತಯಾರಿಕೆಗೆ ಬಳಸಲಾಗುತ್ತದೆ. ಜೊತೆಗೆ ನೈಟ್ರೋಸೆಲ್ಯುಲೋಸ್ ಸೇರಿದಂತೆ ನೂರಾರು ಟನ್ ಸ್ಫೋಟಕ ರಾಸಾಯನಿಕಗಳು ಚೀನಾದಿಂದ ಬಂದಿಳಿದಿವೆ.ಮಾರ್ಚ್ನಲ್ಲಿ ತುಸು ಇಳಿಕೆ ಕಂಡಿದ್ದ ಆಮದು, ಮೇ ವೇಳೆಗೆ ಮತ್ತೆ $77 ಮಿಲಿಯನ್ಗೆ ಚೇತರಿಸಿಕೊಂಡಿತು. ಜೂನ್ ತಿಂಗಳಲ್ಲಿ ರಷ್ಯಾದಿಂದ $7.6 ಮಿಲಿಯನ್ ಮೌಲ್ಯದ ಡಿಟೋನೇಟರ್ಗಳು ಇರಾನ್ ತಲುಪಿವೆ.ಜಾಗತಿಕ ವಲಯದಲ್ಲಿ ಸಂಚಲನ:ರಾಯಿಟರ್ಸ್ ತನಿಖಾ ವರದಿಗೆ ಪ್ರತಿಕ್ರಿಯಿಸಿರುವ ಅಮೆರಿಕ ಹಣಕಾಸು ಸಚಿವಾಲಯ, ‘ನಾವು ಇರಾನ್ನ ಆರ್ಥಿಕ ಮೂಲಗಳನ್ನೇ ಚಿವುಟಿ ಹಾಕಿದ್ದೇವೆ. ಇರಾನ್ ಏನೇ ಕಸರತ್ತು ನಡೆಸಿದರೂ ನಾವು ಅವರಿಗಿಂತ 10 ಹೆಜ್ಜೆ ಮುಂದಿದ್ದೇವೆ’ ಎಂದು ಸಮರ್ಥಿಸಿಕೊಂಡಿದೆ. ಆದರೆ, ಅಮೆರಿಕದ ಮಾಜಿ ಅಧಿಕಾರಿಯೊಬ್ಬರು, ‘ಇದು ಇರಾನ್ ಸೇನೆಯ ಜೀವನಾಡಿ. ಪ್ರಸ್ತುತ ಯುದ್ಧದಲ್ಲಿ ಇರಾನ್ಗೆ ಬಲ ನೀಡುತ್ತಿರುವುದೇ ಈ ರಹಸ್ಯ ಜಾಲ’ಎಂದು ಆತಂಕ ವ್ಯಕ್ತಪಡಿಸಿದ್ದಾರೆ.ಮತ್ತೊಂದೆಡೆ, ಚೀನಾ ವಿದೇಶಾಂಗ ಸಚಿವಾಲಯವು ‘ನಮಗೆ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಯುದ್ಧಕ್ಕೆ ಚೀನಾದ ಹೆಸರನ್ನು ಎಳೆದುತರುವುದನ್ನು ಖಂಡಿಸುತ್ತೇವೆ’ ಎಂದಿದ್ದಾರೆ.